ಜ. 22ರಂದೇ ಹೆರಿಗೆ ಮಾಡಿಸಿ… ವೈದ್ಯರ ಬಳಿ ಗರ್ಭಿಣಿಯರ ಕೋರಿಕೆ!
ಜ. 22 ವಿಶೇಷ ದಿನ.. ಹಾಗಾಗಿ ಶುಭದಿನದಂದು ಮಗುವಿಗೆ ಜನ್ಮ ನೀಡಲು ಬಯಸುತ್ತೇವೆ
Team Udayavani, Jan 11, 2024, 1:02 AM IST
“ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರತಿ ಷ್ಠಾಪನೆಯ ದಿನವೇ ನಮಗೆ ಹೆರಿಗೆ ಮಾಡಿಸಿ’ ಎಂದು ಕೆಲವು ಮಹಿಳೆಯರು ಹಾಗೂ ಕುಟುಂಬದವರು ವೈದ್ಯರ ಬಳಿ ವಿನಂತಿಸಿಕೊಳ್ಳ ಲಾರಂಭಿಸಿದ್ದಾರೆ.
ಹೌದು ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ನಡೆಯಲಿದ್ದು, ನೂತನ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆ ನಡೆಯಲಿದೆ. ಈ ಶುಭದಿನದಂದು ನಾವು ನಮ್ಮ ಮಗುವಿಗೆ ಜನ್ಮ ನೀಡಲು ಬಯಸುತ್ತೇವೆ, ನಮಗೆ ಹೆರಿಗೆ ಮಾಡಿಸಿ ಎಂದು ಉತ್ತರಪ್ರದೇಶದ ಕಾನ್ಪುರದ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರು ವೈದ್ಯರಲ್ಲಿ ಮನವಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯುವ ಶುಭ ಮುಹೂರ್ತದಲ್ಲಿಯೇ ತಮಗೆ ಸಿಸೇರಿಯನ್ ನಡೆಸುವಂತೆಯೂ ಅವರು ವೈದ್ಯರ ಬಳಿ ಬೇಡಿಕೆ ಇರಿಸಿದ್ದಾರೆ. ಅತ್ಯಂತ ಪುಣ್ಯ, ಶುಭಪ್ರದ ಮತ್ತು ಅದೃಷ್ಟದಾಯಕ ಮುಹೂರ್ತ ಇದಾಗಿದ್ದು, ಈ ಸಮಯದಲ್ಲಿ ಮಗು ಜನಿಸಿದಲ್ಲಿ ನಮ್ಮ ಮಗು ಕೂಡ ಶ್ರೀರಾಮನಂತೆ ಸದ್ಗುಣ ಸಂಪನ್ನನಾಗುವುದು ನಿಶ್ಚಿತ ಎಂಬ ವಿಶ್ವಾಸ ಗರ್ಭಿಣಿಯರು, ಮತ್ತವರ ಕುಟುಂಬ ವರ್ಗದವರದ್ದಾಗಿದೆ.
“ಸುಮಾರು 14ರಿಂದ 15 ಕುಟುಂಬದವರು ನಮ್ಮ ಬಳಿ ಈ ಕೋರಿಕೆಯನ್ನು ಇಟ್ಟಿದ್ದಾರೆ. ಆದರೆ ಅವರ ಮನವಿಯಂತೆ ನಾರ್ಮಲ್ ಡೆಲಿವರಿ ಮಾಡಿಸುವುದು ಕಷ್ಟ ಸಾಧ್ಯ. ಹೆರಿಗೆ ದಿನಾಂಕದ ಬಗ್ಗೆ ಎಷ್ಟೇ ಅರಿವನ್ನು ಮೂಡಿಸಿದರೂ, ಈ ದಿನದಂದೇ ಹೆರಿಗೆ ಮಾಡಿಸುವಂತೆ ಬೇಡಿಕೆ ಬರುತ್ತಲೇ ಇದೆ. ಪ್ರತೀ ದಿನ ಆಸ್ಪತ್ರೆಯಲ್ಲಿ 12-14 ಸಿಸೇರಿಯನ್ ನಡೆಸಲಾಗುತ್ತಿದ್ದರೆ, ಜ. 22ರಂದು ಅಂದಾಜು 30 ಸಿಸೇರಿಯನ್‌ಗಳು ನಡೆಯುವ ಸಾಧ್ಯತೆಯಿದೆ’ ಎಂದು ಕಾನ್ಪುರದ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಸಾಧ್ಯವಾದಷ್ಟು ನಾರ್ಮಲ್ ಡೆಲಿವರಿಗೆ ಆದ್ಯತೆ ನೀಡುತ್ತ ಬರಲಾಗಿದೆ. ತಾಯಿ-ಮಗುವಿನ ಆರೋಗ್ಯ ಮತ್ತು ಪ್ರಾಣಕ್ಕೆ ಅಪಾಯವಿರುವಂತಹ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಸಿಸೇರಿಯನ್ ಮಾಡಿ ಮಗುವನ್ನು ತಾಯಿಯ ಗರ್ಭದಿಂದ ಹೊರತೆಗೆಯಲಾಗುತ್ತದೆ. ಈ ಬಗ್ಗೆ ಗರ್ಭಿಣಿಯರಿಗೆ ಮತ್ತು ಅವರ ಕುಟುಂಬದವರಿಗೆ ಎಷ್ಟೇ ತಿಳಿ ಹೇಳಿದರೂ ಅವರು ಕೇಳಿಸಿಕೊಳ್ಳುತ್ತಿಲ್ಲ. ಶ್ರೀರಾಮ ಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಯ ದಿನದಂದೇ ಮಗುವಿಗೆ ಜನ್ಮ ನೀಡಲು ಬಯಸುತ್ತಿರುವುದಾಗಿ ಅವರು ಅಂಗಲಾಚುತ್ತಿದ್ದಾರೆ ಎಂದವರು ಹೇಳಿದರು.
“ಜ.22ರಂದು ರಾಮಲಲ್ಲಾನ ಪ್ರತಿಷ್ಠಾಪನೆಯಾಗಲಿದೆ. ಅದೇ ದಿನದಂದು ಹೆರಿಗೆಯಾದರೆ ಪವಿತ್ರ ದಿನದಂದೇ ನಮ್ಮ ಮಗುವೂ ಈ ಜಗತ್ತಿಗೆ ಪ್ರವೇಶಿಸಿದಂತಾಗುತ್ತದೆ’ ಎಂದು ಗರ್ಭಿಣಿಯರು ಹೇಳಿದ್ದಾರೆ. ಇನ್ನು ಕೆಲವರು ಗಂಡು ಮಗು ಜನಿಸಿದರೆ ರಾಮ ಎಂದು ಹಾಗೂ ಹೆಣ್ಣು ಮಗು ಜನಿಸಿದರೆ ಸೀತಾ ಎಂದು ನಾಮಕರಣ ಮಾಡುವುದಾಗಿಯೂ ಹೇಳಿದ್ದಾರೆ.
ದೇಶದ ವಿವಿಧೆಡೆಗಳಲ್ಲಿ ಇಂತಹುದೇ ಬೇಡಿಕೆ !
ದೇಶದ ವಿವಿಧೆಡೆಗಳಲ್ಲಿಯೂ ಇಂತಹುದೇ ಮನವಿಗಳನ್ನು ಗರ್ಭಿಣಿಯರು ಮತ್ತವರ ಕುಟುಂಬದವರು ವೈದ್ಯರ ಬಳಿ ಮಾಡಿಕೊಳ್ಳತೊಡಗಿದ್ದು, ಜ.22ರಂದೇ ಹೆರಿಗೆ ಮಾಡಿಸಿ ಎಂದು ದುಂಬಾಲು ಬೀಳತೊಡಗಿದ್ದಾರೆ. ಬೆಂಗಳೂರಿನಲ್ಲಿಯೂ ಇಂತಹುದೇ ಮನವಿಗಳು ಗರ್ಭಿಣಿಯರಿಂದ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸಲ್ಲಿಕೆಯಾಗಿವೆ. ಸಾಮಾಜಿಕ ಜಾಲ ತಾಣಗಳಲ್ಲಿಯೂ ಈ ವಿಷಯ ಈಗ ಭಾರೀ ಟ್ರೆಂಡಿಂಗ್‌ನಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.