Ram Mandir ಅಯೋಧ್ಯೆಯಲ್ಲಿ ಮೊದಲ ಶ್ರೀರಾಮನವಮಿಗೆ ಭರದ ಸಿದ್ಧತೆ: ಪೇಜಾವರ ಶ್ರೀ
ಎ.17 ಮತ್ತೊಂದು ಬೃಹತ್ ಕಾರ್ಯಕ್ರಮ
Team Udayavani, Mar 11, 2024, 7:20 AM IST
ಮಣಿಪಾಲ/ಅಯೋಧ್ಯೆ: ಶ್ರೀ ರಾಮಮಂದಿರದಲ್ಲಿ ಪ್ರಥಮ ಶ್ರೀ ರಾಮನವಮಿಯನ್ನು ಭವ್ಯವಾಗಿ ಆಚರಿಸುವ ಸಂಬಂಧ ಪೂರ್ವಸಿದ್ಧತೆ ಶೀಘ್ರವೇ ಆರಂಭವಾಗಲಿದೆ.
ಎಪ್ರಿಲ್ 17ರಂದು ಶ್ರೀ ರಾಮ ನವಮಿ ಆಚರಣೆ ದೇಶಾದ್ಯಂತ ನಡೆಯಲಿದೆ. ಭವ್ಯವಾದ ಶ್ರೀರಾಮಮಂದಿರ ಲೋಕಾರ್ಪಣೆಯಾಗಿ, ಬಾಲ ರಾಮನ ಪ್ರಾಣ ಪ್ರತಿಷ್ಠೆಯಾದ ಬಳಿಕ ನಡೆಯಲಿ ರುವ ಮೊದಲನೇ ರಾಮನವಮಿ ಇದು ಎಂದು ಪೇಜಾವರ ಶ್ರೀಗಳು ಉದಯವಾಣಿಗೆ ತಿಳಿಸಿದ್ದಾರೆ. “ಮುಂದಿನ ಉತ್ಸವಗಳ ಬಗ್ಗೆಯೂ ಟ್ರಸ್ಟ್ ಸಭೆಯಲ್ಲಿ ಚರ್ಚಿಸಲಾಗುವುದು.
ಪ್ರಥಮ ಶ್ರೀರಾಮನ ನವಮಿಯನ್ನು ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಚರ್ಚಿಸಲಾಗುವುದು’ ಎಂದು 48 ದಿನಗಳ ಮಂಡಲೋತ್ಸವ ನೇತೃತ್ವದ ವಹಿಸಿದ್ದ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯೂ ಆಗಿರುವ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.
“ಉದಯವಾಣಿ’ ಜತೆಗೆ ಮಾತನಾ ಡಿದ ಅವರು, ಅಯೋಧ್ಯೆಗೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಉತ್ಸವಾದಿಗಳ ಸಂದರ್ಭ ದಲ್ಲಿ ಇನ್ನಷ್ಟು ಹೆಚ್ಚಬಹುದು ಎಂದರು.
ಭವ್ಯ ಶ್ರೀ ರಾಮ ಮಂದಿರದೊಳಗೆ ವಿರಾಜಮಾನರಾಗಿರುವ ಶ್ರೀ ರಾಮ ದೇವರನ್ನು ನೋಡಿ, ಮನ ದೊಳಗೆ ಆನಂದ ತುಂಬಿಕೊಂಡು ಹಿಂದಿ ರುಗುವ ಭಕ್ತರನ್ನು ಕಂಡಾಗ ಜನ್ಮ ಸಾರ್ಥಕ್ಯದ ಭಾವ ಮೂಡುತ್ತದೆ. ದೇಶದ ಮೂಲೆ ಮೂಲೆಗಳಿಂದ ಶ್ರೀ ರಾಮ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಲೇ ಇದ್ದಾರೆ. ಒಂದು ರೀತಿಯ ದಿವ್ಯಾನುಭೂತಿಯ ಕ್ಷಣಗಳಿವು. ಶ್ರೀ ರಾಮ ದೇವರು ಭಾರತದ ಅಖಂಡ ತೆಯ ಸಂಕೇತವಾಗಿ ಎಲ್ಲರನ್ನು ಒಗ್ಗೂಡಿ ಸುತ್ತಿರುವುದೇ ಶ್ರೇಷ್ಠವಾದ ಸಂಗತಿ ಎಂದು ಶ್ರೀಪಾದರು ವರ್ಣಿಸಿದರು.
ದೇವರನ್ನು ನೋಡಲು ಬಂದವ ರೆಲ್ಲರೂ ದೇವರನ್ನು ಕಂಡು ಆನಂದ ತುಂಬಿಕೊಂಡು, ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಊರಿಗೆ ತೆರಳುತ್ತಿ ದ್ದಾರೆ. ಇಲ್ಲಿ ನಿತ್ಯ ಪೂಜೆ ನಿರಂತರವಾಗಿ ನಡೆಯಲಿದೆ. ಇದರ ಜತೆಗೆ ಮಂದಿರ ನಿರ್ಮಾಣದ ಉಳಿದ ಕಾಮಗಾರಿಗಳು ವೇಗವಾಗಿ ಸಾಗಲಿವೆ. ಭಕ್ತರ ದರ್ಶನಕ್ಕೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದ್ದೇವೆ ಎಂಬ ಮಾಹಿತಿ ನೀಡಿದರು.
ಶ್ರೀರಾಮ ಮತ್ತು ಶ್ರೀ ಕೃಷ್ಣ ಇಬ್ಬರನ್ನೂ ಪೂಜಿಸುವ ಸುವರ್ಣ ಅವಕಾಶ ಸಿಕ್ಕಿತಲ್ಲ ಎಂಬ ಪ್ರಸ್ತಾವಕ್ಕೆ, “ಹೌದು. ನನ್ನ ಬಾಳಿನ ಪುಣ್ಯ, ನನ್ನ ಗುರುಗಳ ಆಶೀರ್ವಾದ. ಆದರೆ ದೇವರು ಒಬ್ಬನೇ. ನಾನು ಶ್ರೀ ರಾಮನಲ್ಲಿ ನನ್ನ ಶ್ರೀಕೃಷ್ಣನನ್ನು, ನನ್ನ ಶ್ರೀಕೃಷ್ಣನಲ್ಲಿ ಶ್ರೀರಾಮ ದೇವರನ್ನು ಕಾಣುತ್ತಿದ್ದೇನೆ. ಹಾಗಾಗಿ ಇಬ್ಬರ ರೂಪ, ಹೆಸರಿನಲ್ಲಿ ಭಿನ್ನತೆ ತೋರದು. ಭಗವಂತನಷ್ಟೇ’ ಎಂದರು.
ಅಯೋಧ್ಯೆಗೆ ಭೇಟಿ ನೀಡುತ್ತಿ ರುವ ಭಕ್ತರ ಸಂಖ್ಯೆ ಕುರಿತು ವಿವರಿಸಿ, ಪ್ರಾಣಪ್ರತಿಷ್ಠೆಯ ಮಾರನೇ ದಿನ ಜ. 23ರ ಬಳಿಕ ಆರಂಭಗೊಂಡ ಮಂಡಲೋತ್ಸವ ಪೂರ್ಣಗೊಳ್ಳುವ ವರೆಗೂ ಭಕ್ತರ ಸಂಖ್ಯೆ ಒಂದಿನಿತೂ ಕಡಿಮೆಯಾಗಿಲ್ಲ. ಮುಂದೆಯೂ ದಿನೇದಿನೆ ಹೆಚ್ಚುತ್ತ ಹೋಗುತ್ತದೆಯೇ ವಿನಾ ಕಡಿಮೆಯಾಗದು. ಪ್ರಸ್ತುತ ನಿತ್ಯವೂ ಸರಿಸುಮಾರು 2-3 ಲಕ್ಷ ಭಕ್ತರು ಶ್ರೀ ರಾಮದೇವರ ದರ್ಶನ ಪಡೆಯುತ್ತಿದ್ದಾರೆ. ಹಾಗಾಗಿ ಭಕ್ತರಿಗೆ ಯಾವುದೇ ಅಡ್ಡಿಯಿಲ್ಲದೆ ದರ್ಶನ ಅವಕಾಶ ಮುಂದುವರಿಯಲಿದೆ. ಕರ್ನಾಟಕದಿಂದಲೂ ಸಾಕಷ್ಟು ಭಕ್ತರು ಬರುತ್ತಿದ್ದಾರೆ ಎಂದರು.
ನಿತ್ಯ ಭಜನೆ ನಿರಂತರ
ಅಯೋಧ್ಯೆಯಲ್ಲಿ ವರ್ಷಕ್ಕೆ ಒಮ್ಮೆ ಉತ್ಸವ ಮಾಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಈ ಬಗ್ಗೆ ಟ್ರಸ್ಟ್‌ನಲ್ಲಿ ಚರ್ಚಿಸಿ ಅಂತಿಮ ತೀರ್ಮಾನವಾಗಬೇಕಿದೆ. ಆದರೆ ನಿತ್ಯ ಭಜನೆ ಮುಂದುವರಿಯಲಿದೆ. ಶ್ರೀರಾಮ ಮಂದಿರದ ನಿಗದಿತ ಸ್ಥಳದಲ್ಲಿ ಭಜನೆ ಸೇವೆ ಸಲ್ಲಿಸಲು ಯಾವುದೇ ಅರ್ಜಿ ಸಲ್ಲಿಸುವ ಆವಶ್ಯಕತೆ ಇಲ್ಲ. ವ್ಯವಸ್ಥೆಯ ದೃಷ್ಟಿಯಿಂದ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಭಾರತದ (ಉಳಿದುಕೊಳ್ಳುವ ವ್ಯವಸ್ಥೆ ಬೇಕಾಗದವರಿಗೆ) ಆರಂಭದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ಸುತ್ತಮುತ್ತಲಿನ ಭಜನ ಮಂಡಳಿಯವರು ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಯಾರು ಬೇಕಾದರೂ ಬಂದು ಭಜನೆ ಸೇವೆ ನೀಡಬಹುದು ಎಂದರು.
ಹಲವಾರು ಸಂಗೀತ, ನೃತ್ಯ ಕಲಾವಿ ದರೂ ಬಂದು ಶ್ರೀ ರಾಮ ದೇವರಿಗೆ ತಮ್ಮ ನರ್ತನ, ಗಾಯನದ ಮೂಲಕ ಸೇವೆಯನ್ನು ಸಲ್ಲಿಸುತ್ತಿರು ವುದು ವಿಶಿಷ್ಟವಾದುದು. ಎಲ್ಲರೂ ಶ್ರೀರಾಮ ಮಂದಿರ ಹಾಗೂ ಬಾಲರಾಮದೇವರನ್ನು ಕಂಡು ಶತಮಾನದ ಕನಸು ಈಡೇರಿಸಿಕೊಂ ಡೆವು ಎಂಬಂತೆ ಭಾವುಕರಾಗುತ್ತಾರೆ. ಅವೆಲ್ಲವೂ ಶ್ರೇಷ್ಠವಾದ ಗಳಿಗೆಗಳು ಎಂದು ಶ್ರೀಪಾದರು ಉಲ್ಲೇಖಿಸಿದರು.
ಭಾವಕ್ಕೆ ಮಾತ್ರ ನಿಲುಕುವಂಥದ್ದು
ಭಗವಂತನ ಸೇವೆಯನ್ನು ಮಾಡಲು ಸಿಕ್ಕ ಅವಕಾಶ. ಇದು ನನ್ನ ಬಾಳಿನ ದಿವ್ಯ ಸೌಭಾಗ್ಯ ಎಂದು ಭಾವಿಸಿದ್ದೇನೆ ಎಂದು ಭಾವುಕರಾಗಿ ಮಂಡಲೋತ್ಸವ ನೇತೃತ್ವದ ಬಗ್ಗೆ ನುಡಿದ ಪೇಜಾವರ ಶ್ರೀಪಾದರು, ಶ್ರೀ ರಾಮ ದೇವರ ಸನ್ನಿಧಾನದಲ್ಲಿ ಮಂಡಲೋತ್ಸವ ನಡೆಸುವ ಭಾಗ್ಯ ಸಿಗಲು ಮೂಲ ಕಾರಣರು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು. ಅವರು ಮಾಡಿದ ಸೇವೆಯ ಫಲ ನಮಗೆ ಈ ಭಾಗ್ಯದ ರೂಪದಲ್ಲಿ ಸಿಕ್ಕಿದೆ. ಇದಕ್ಕಿಂತ ದೊಡ್ಡದೇನು ಬೇಕು ಬಾಳಿನಲ್ಲಿ! ಶ್ರೀ ರಾಮ ದೇವರ ಪೂಜೆ ಮಾಡುವಾಗ ಮೂಡುವ ಧನ್ಯತಾ ಭಾವ ಹೇಳಲಿಕ್ಕೆ ಬಾರದು, ಪದಗಳೂ ಸಿಗದು, ಅನುಭವಕ್ಕೆ ಮಾತ್ರ ನಿಲುಕುವಂಥದ್ದು ಹಾಗೂ ಸ್ವ ಅನುಭವಿಸುವಂಥದ್ದು ಎಂದರು.
ಶ್ರೀ ರಾಮ ದೇವರ ಸನ್ನಿಧಾನದಲ್ಲಿ ಮಂಡಲೋತ್ಸವ ನಡೆಸುವ ಭಾಗ್ಯ ಲಭ್ಯವಾಗಲು ಮೂಲ ಕಾರಣರು ನಮ್ಮ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು. ಅವರು ನಡೆಸಿದ ಸೇವೆಯ ಫಲ ನಮಗೆ ಈ ಭಾಗ್ಯದ ರೂಪ ದಲ್ಲಿ ಲಭಿಸಿದೆ. ಇದಕ್ಕಿಂತ ದೊಡ್ಡ ದೇನು ಬೇಕು ಬಾಳಿನಲ್ಲಿ!
-ಪೇಜಾವರ ಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.