ಎಲ್ಲರಿಗೂ ರಾಮ್ ರಾಮ್!-ಅನುಮಾನ ಹುಟ್ಟುಹಾಕಿದ ನಿರ್ಗಮಿತ ಸಿಎಂ ಶಿವರಾಜ್ ಚೌಹಾಣ್ ಹೇಳಿಕೆ
Team Udayavani, Dec 9, 2023, 11:38 PM IST
ಹೊಸದಿಲ್ಲಿ: “ಸಭೀ ಕೋ ರಾಮ್ ರಾಮ್…”(ಎಲ್ಲರಿಗೂ ರಾಮ್ ರಾಮ್)
ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಯಾರು ಎಂಬ ವಿಚಾರದಲ್ಲಿ ಒಮ್ಮತಕ್ಕೆ ಬರಲು ಬಿಜೆಪಿ ಹೈಕಮಾಂಡ್ ಹೆಣಗಾಡುತ್ತಿರುವಂತೆಯೇ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾಡಿರುವ ಟ್ವೀಟ್ ಇದು.
ಶನಿವಾರ ಎಕ್ಸ್‌ನಲ್ಲಿ ಅವರು “ಸಭೀ ಕೋ ರಾಮ್ ರಾಮ್” ಎಂದು ಬರೆದುಕೊಂಡಿದ್ದು, ಅದು ವೈರಲ್ ಆಗುತ್ತಿದ್ದಂತೆಯೇ ಅದನ್ನು ಅಳಿಸಿಹಾಕಿದ್ದಾರೆ. ಹೀಗಿದ್ದಾಗ್ಯೂ, ಶಿವರಾಜ್ ಸಿಂಗ್ ಅವರ ಈ ಟ್ವೀಟ್‌ನ ಮರ್ಮವೇನು ಎಂಬ ಬಗ್ಗೆ ಭಾರೀ ಚರ್ಚೆಗಳು ಆರಂಭ ವಾಗಿವೆ. ಚೌಹಾಣ್ ಅವರು ತಮಗೆ ಸಿಎಂ ಹುದ್ದೆ ಸಿಕ್ಕೇಬಿಡ್ತು ಎಂಬ ಖುಷಿಯಿಂದ ಎಲ್ಲರನ್ನೂ ಅಭಿನಂದಿಸಿ ಈ ರೀತಿ ಬರೆದುಕೊಂಡಿದ್ದಾರೋ ಅಥವಾ ಸಿಎಂ ಹುದ್ದೆ
ಕೈತಪ್ಪಿತು ಎಂಬ ನೋವಿನಿಂದ “ವಿದಾಯದ ಸಂಕೇತ”ವಾಗಿ ಬರೆದುಕೊಂಡಿದ್ದಾರೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಸಾಮಾನ್ಯವಾಗಿ “ರಾಮ್ ರಾಮ್” ಎಂಬುದನ್ನು ಅಭಿನಂದನೆ ಹಾಗೂ ವಿದಾಯ ಎರಡಕ್ಕೂ ಬಳಸಲಾಗುತ್ತದೆ. ಇಲ್ಲಿ ಚೌಹಾಣ್ ಅವರು ಯಾವ ಉದ್ದೇಶದಿಂದ ಹೀಗೆ ಬರೆದಿದ್ದಾರೆ ಎಂಬುದರ ಬಗ್ಗೆ ಹಲವು ವ್ಯಾಖ್ಯಾನಗಳು ಕೇಳಿಬರಲಾರಂಭಿಸಿವೆ. ಇದರ ಬೆನ್ನಲ್ಲೇ ಈ ಟ್ವೀಟ್ ಕೂಡ ಡಿಲೀಟ್ ಆಗಿದೆ.
ಈ ಕುರಿತು ಅವರನ್ನೇ ಪ್ರಶ್ನೆ ಮಾಡಿದಾಗ ಅವರು, “ಇದು ಭಗವಂತ ರಾಮನ ದೇಶ. ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ನಾವು ಪ್ರತಿದಿನ ಮುಂಜಾನೆ ರಾಮ್ ರಾಮ್ ಎಂದು ಹೇಳುತ್ತಲೇ ಒಬ್ಬರನ್ನೊಬ್ಬರು ನಮಸ್ಕರಿಸುತ್ತೇವೆ ಅಷ್ಟೆ” ಎಂದಿದ್ದಾರೆ.
ನಾಳೆ ಆಯ್ಕೆ: ಸೋಮವಾರ ಬೆಳಗ್ಗೆಯೇ ಭೋಪಾಲ್‌ಗೆ ಕೇಂದ್ರದ ಮೂವರು ವೀಕ್ಷಕರು ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ನಡೆಯುವ ಶಾಸಕರ ಸಭೆಯಲ್ಲಿ ನಾಯಕನ ಆಯ್ಕೆ ನಡೆಯಲಿದೆ.
ಇನ್ನೊಂದೆಡೆ, ವೀಕ್ಷಕರ ಸಮ್ಮುಖದಲ್ಲಿ ಛತ್ತೀಸ್‌ಗಡದ 54 ಬಿಜೆಪಿ ಶಾಸಕರು ಭಾನುವಾರ ಸಭೆ ಸೇರಲಿದ್ದು, ಇಲ್ಲೇ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ. ಮಾಜಿ ಸಿಎಂ ರಮಣ್ ಸಿಂಗ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದೇ ಇದ್ದರೆ ಬಿಜೆಪಿಯು ಒಬಿಸಿ ಅಥವಾ ಬುಡಕಟ್ಟು ಜನಾಂಗದ ನಾಯಕರನ್ನೇ ಸಿಎಂ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
ಕೆಸಿಆರ್‌ಗೆ ನಾಯಕ ಸ್ಥಾನ: ಹೈದರಾಬಾದ್‌ನಲ್ಲಿ ಶನಿವಾರ ತೆಲಂಗಾಣದ ಬಿಆರ್‌ಎಸ್ ಶಾಸಕರ ಸಭೆ ನಡೆದಿದ್ದು, ಮಾಜಿ ಸಿಎಂ ಕೆ. ಚಂದ್ರಶೇಖರ್‌ರಾವ್‌ರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. 119 ಸದಸ್ಯಬಲದ ವಿಧಾನಸಭೆಯಲ್ಲಿ ಬಿಆರ್‌ಎಸ್‌ನ 39 ಶಾಸಕರಿದ್ದಾರೆ.
ವಿಕ್ರಮಾರ್ಕಗೆ ಹಣಕಾಸು: ತೆಲಂಗಾಣದ ಕಾಂಗ್ರೆಸ್ ಸರಕಾರದಲ್ಲಿ ಶನಿವಾರ ಖಾತೆಗಳ ಹಂಚಿಕೆ ನಡೆದಿದ್ದು, ಸಿಎಂ ರೇವಂತ್ ರೆಡ್ಡಿ ಅವರು ನಗರಾಭಿವೃದ್ಧಿ, ಮುನ್ಸಿಪಲ್ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಹಂಚಿಕೆಯಾಗದ ಖಾತೆಗಳನ್ನು ವಹಿಸಿಕೊಂಡಿದ್ದಾರೆ. ಡಿಸಿಎಂ ಮಲ್ಲು ಭಟ್ಟಿ ವಿಕ್ರಮಾರ್ಕ ಅವರಿಗೆ ಹಣಕಾಸು,ಇಂಧನ ಖಾತೆಯ ಹೊಣೆ ವಹಿಸಲಾಗಿದೆ. ನೀರಾವರಿ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯನ್ನು ಉತ್ತಮ ಕುಮಾರ್ ರೆಡ್ಡಿ ವಹಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.