ಕರಸೇವಕರ ತಲುಪಿದ ರಾಮನ ಕರೆ!- ಪ್ರಾಣ ಪ್ರತಿಷ್ಠೆಗೆ ವಿಶೇಷ ಆಹ್ವಾನ ಪಡೆದ ರಾಮಸೇವಕರಿವರು

Team Udayavani, Jan 22, 2024, 6:37 AM IST

babri masjib

ಅಯೋಧ್ಯೆಯ ರಾಮ ಮಂದಿರವು ಸುದೀರ್ಘ‌ 500 ವರ್ಷಗಳ ಹೋರಾಟದ ಫ‌ಲವಾಗಿದ್ದು,  ಈ ಹೋರಾಟದ ಹಾದಿಯಲ್ಲಿ ಕೋಟ್ಯಂತರ ಕರಸೇವಕರ ಶ್ರಮ , ಸೇವೆ, ಭಕ್ತಿ ಮತ್ತು ಸಮರ್ಪಣೆ ಹುದುಗಿದೆ. ಅಂಥ ಕರಸೇವಕರನ್ನೆಲ್ಲಾ ಮಂದಿರ ಟ್ರಸ್ಟ್‌ ಸ್ಮರಿಸಿದ್ದು, ಎಲ್ಲರಿಗೂ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ. ಆ ಪೈಕಿ ಕೆಲ ವಿಶೇಷ ಆಹ್ವಾನಿತರ ಕುರಿತ ವಿವರ ಹೀಗಿದೆ..

 125 ಕರಸೇವಕರಿಗೆ ಆಶ್ರಯ ನೀಡಿದಾಕೆ

1990ರಲ್ಲಿ ನಡೆದ ಮಂದಿರ ಹೋರಾಟದಲ್ಲಿ ಕರಸೇವಕರ ಮೇಲೆ ನಡೆದ ಗುಂಡಿನ ದಾಳಿಯನ್ನು ಪ್ರತ್ಯಕ್ಷವಾಗಿ ಕಂಡಿದ್ದ ಮಹಿಳೆ ಶ್ರೀ ಓಂ ಭಾರತಿ ಅವರಿಗೆ ಟ್ರಸ್ಟ್‌ ಆಹ್ವಾನ ನೀಡಿದೆ. ಕರಸೇವಕರ ಮೇಲೆ ಗುಂಡಿನ ದಾಳಿ ಶುರುವಾ­ಗುತ್ತಿದ್ದಂತೆಯೇ ವಿಎಚ್‌ಪಿ ಮಾಜಿ ಅಧ್ಯಕ್ಷರಾದ ಅಶೋಕ್‌ ಸಿಂಘಾಲ್‌, ಕೊಠಾರಿ ಸಹೋದರರು ಸೇರಿದಂತೆ 125 ಮಂದಿ ಕರಸೇವಕರಿಗೆ ಭಾರತಿ ಅವರು ತಮ್ಮ ನಿವಾಸದಲ್ಲಿ  ಆಶ್ರಯ ನೀಡುವ ಮೂಲಕ ಅವರ ಪ್ರಾಣ ಉಳಿಸಲು ನೆರವಾಗಿದ್ದರು.

 ಚಳವಳಿಗಾಗಿ 60 ಕಿ.ಮೀ ನಡೆದಿದ್ದ ಕರಸೇವಕಿ

ಮಹಾರಾಷ್ಟ್ರದ ಮುಂಬೈ ನಿವಾಸಿಯಾಗಿರುವ ಶಾಲಿನಿ ದಬೀರ್‌ (90) ಮಂದಿರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕರಸೇವಕಿ. ಚಳವಳಿಯನ್ನು ಮುನ್ನಡೆಸುತ್ತಾ ಪಾದಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಲಿನಿ ಬರೋಬ್ಬರಿ 60 ಕಿ.ಮೀ. ದೂರ ಪಾದಯಾತ್ರೆ ನಡೆಸಿದ್ದರು. ಅಂದು ವಿವಾದಿತ ಕಟ್ಟಡದ ಮೇಲೆ ಹಾರಿದ್ದ ಕೇಸರಿ ಧ್ವಜವನ್ನು ಕಣ್ತುಂಬಿಕೊಂಡಿದ್ದ ಶಾಲಿನಿ ಅವರಿಗೆ ಇದೀಗ ನಿರ್ಮಾಣಗೊಂಡಿರುವ ಮಂದಿರ ಮೇಲೆ ಹಾರಲಿರುವ ಭಗವಾಧ್ವಜವನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಿಸಿ ಮಂದಿರ ಉದ್ಘಾಟನೆಗೆ ಆಹ್ವಾನಿಸಲಾಗಿದೆ.

 ಶ್ರೀರಾಮನೇ ಪೂರ್ವಜನೆಂದ ಮುಸ್ಲಿಂ ಕರಸೇವಕ

ಶ್ರೀರಾಮ ಚಂದ್ರನನ್ನು ನಮ್ಮ ಪೂರ್ವಜನೆಂದು ಭಾವಿಸಿದ್ದ ಹಲವಾರು ಮಂದಿ ಮುಸ್ಲಲ್ಮಾನರು ಕೂಡ ಮಂದಿರ ಹೋರಾಟದಲ್ಲಿ ಕರಸೇವಕರಾಗಿ ಪಾಲ್ಗೊಂಡಿದ್ದರು. ಆ ಪೈಕಿ ಉತ್ತರ ಪ್ರದೇಶದ ಮಿರ್ಜಾಪುರದ ನಿವಾಸಿಯಾ ಗಿರುವ ಹಬೀಬ್‌ ಮೊಹಮ್ಮದ್‌ ಕೂಡ ಒಬ್ಬರು. 1990ರ ಸಂದರ್ಭದಲ್ಲಿ 5-6 ದಿನಗಳ ಕಾಲ ಅಯೋಧ್ಯೆಯಲ್ಲೇ ತಂಡದೊಂದಿಗೆ ಉಳಿದಿದ್ದ ಹಬೀಬ್‌ ಮಂದಿರ ಪರವಾಗಿ ಹೋರಾಟ ನಡೆಸಿದ್ದರು. ಇದೀಗ ಅವರಿಗೂ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ.

 ಕರಸೇವಕ ದಲಿತ ದಂಪತಿಗೆ ಮಂದಿರ ಪೂಜೆಯ ಅವಕಾಶ

ಮಂದಿರ ಹೋರಾಟದಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ ನವಿ ಮುಂಬೈ ಮೂಲದ ದಲಿತ ದಂಪತಿ ವಿಟuಲ್‌ ಕಾಂಬ್ಳೆ ಹಾಗೂ ಅವರ ಪತ್ನಿ ಉಜ್ವಲಾ ಅವರಿಗೆ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಅಲ್ಲದೇ, ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿರುವ ಪ್ರಾಣ ಪ್ರತಿಷ್ಠೆ ಪೂಜೆಯಲ್ಲಿ ದೇಶದ 11 ದಂಪತಿ ಭಾಗಿಯಾಗಲಿದ್ದು, ಆ ಪೈಕಿ ವಿಟuಲ್‌ ಕಾಂಬ್ಳೆ ದಂಪತಿಯೂ ಇರಲಿದ್ದಾರೆ. ಮಂದಿರ ತಮ್ಮನ್ನು ನೆನಪಿಸಿ­ಕೊಂಡು ಆಹ್ವಾನ ಕಳುಹಿಸಿರುವುದು ಕಂಡು ಕಣ್ಣು ತುಂಬಿ ಬಂದಿದೆ ಎಂಬುದು ಈ ದಂಪತಿಯ ಮಾತು.

 ಗೋಧ್ರಾ: ಹತ ಕರಸೇವಕರ ಕುಟುಂಬಕ್ಕೆ ಆಮಂತ್ರಣ

2002ರಲ್ಲಿ ಗುಜರಾತ್‌ನ ಗೋಧ್ರಾದಲ್ಲಿ ಸಬರ­ಮತಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪ್ರಾಣ ಕಳೆದುಕೊಂಡ 18 ಮಂದಿ ಕರಸೇವಕರ ಕುಟಂಬಕ್ಕೂ ಮಂದಿರದ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಮೃತಪಟ್ಟ ಎಲ್ಲಾ ಕರಸೇವಕ ನಿವಾಸದಿಂದ ಓರ್ವ ವ್ಯಕ್ತಿ ಸಮಾರಂಭದಲ್ಲಿ ಭಾಗವಹಿಸಬಹುದಾಗಿದೆ.

 ಮೋದಿ ವೀಸಾಕ್ಕಾಗಿ ಹೋರಾಡಿದ ವೈದ್ಯ

ಮೋದಿ ಸಿಎಂ ಆಗಿದ್ದಾಗ ಅವರ ಯುಎಸ್‌ ಭೇಟಿಗೆ ಹೇರಿದ್ದ ನಿರ್ಬಂಧ ತೆರವುಗೊಳಿಸಿ, ಅವರ ವೀಸಾಗೆ ಒತ್ತಾಯಿಸಿದ ವೈದ್ಯ, ಕ್ಯಾನ್ಸರ್‌ ತಜ್ಞ ಭರತ್‌ ಬರಾಯಿ ಅವರಿಗೂ ಆಹ್ವಾನ ನೀಡಲಾಗಿದೆ.

 700 ಶವ ಪರೀಕ್ಷೆ ನಡೆಸಿದ್ದ ಮಹಿಳೆ

ಛತ್ತೀಸ್‌ಗಢ ದಲ್ಲಿ ಕಳೆದ 18 ವರ್ಷಗಳಿಂದ 700 ಶವಗಳ ಪರೀಕ್ಷೆ ನಡೆಸಿರುವ ಆರೋಗ್ಯ ಕಾರ್ಯಕರ್ತೆ ಸಂತೋಷಿ ದುರ್ಗಾ ಅವರಿಗೂ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ.

ಟಾಪ್ ನ್ಯೂಸ್

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

death

Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.