ರಣಜಿ ಸಂಭಾವ್ಯ ತಂಡ ಪ್ರಕಟ: ಕೆ.ಎಲ್. ರಾಹುಲ್, ಅಗರ್ವಾಲ್ ಗೂ ಸ್ಥಾನ
Team Udayavani, Dec 30, 2021, 5:20 AM IST
ಬೆಂಗಳೂರು: ಮುಂಬರುವ ರಣಜಿ ಟ್ರೋಫಿ ಪಂದ್ಯಾವಳಿಗಾಗಿ ಕರ್ನಾಟಕ ಸಂಭಾವ್ಯ ತಂಡ ಪ್ರಕಟಗೊಂಡಿದೆ. 29 ಸದಸ್ಯರ ಈ ಬಳಗದಲ್ಲಿ ಟೀಮ್ ಇಂಡಿಯಾ ಪರ ಆಡುತ್ತಿರುವ ಕೆ.ಎಲ್. ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ಕೂಡ ಇರುವುದು ವಿಶೇಷ.
ಭಾರತದ-ದಕ್ಷಿಣ ಆಫ್ರಿಕಾ ಸರಣಿ ಜ. 23ರಂದು ಕೊನೆಗೊಳ್ಳುವ ಕಾರಣ ರಾಹುಲ್ ಮತ್ತು ಮಾಯಾಂಕ್ ಅವರನ್ನು ರಣಜಿ ಕೂಟಕ್ಕೆ ಪರಿಗಣಿಸಲಾಗಿದೆ.
ಭಾರತದ ಅಂಡರ್-19 ತಂಡದಲ್ಲಿ ಆಡುತ್ತಿರುವ ಅನೀಶ್ವರ್ ಗೌತಮ್, ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಕೃತಿಕ್ ಕೃಷ್ಣ, ಆಲ್‌ರೌಂಡರ್ ಶುಭಾಂಗ್ ಹೆಗ್ಡೆ ಮತ್ತು ಅಂಡರ್-25 ಆಟಗಾರ ಕೆ.ವಿ. ಅನೀಶ್ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದ ಹೊಸಬರು. ಇವರ ಜತೆಗೆ ಅನುಭವಿ ಆಟಗಾರರಾದ ಕೆ.ಸಿ. ಕಾರ್ಯಪ್ಪ, ದೇವದತ್ತ ಪಡಿಕ್ಕಲ…, ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ವಿಜಯ್ ಹಜಾರೆ ಟೂರ್ನಿ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚಿದವರನ್ನು ಆಯ್ಕೆ ಮಾಡಲಾಗಿದೆ. ಆದರೆ ಫಾರ್ಮ್ನಲ್ಲಿಲ್ಲದ ಪ್ರತೀಕ್ ಜೈನ್ ಅವರನ್ನು ಕೈಬಿಡಲಾಗಿದೆ.
ಮನೀಷ್ ಪಾಂಡೆಗೆ ನಾಯಕತ್ವ?
ಸಯ್ಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆಯಲ್ಲಿ ತಂಡವನ್ನು ಮುನ್ನಡೆಸಿದ್ದ ಮನೀಷ್ ಪಾಂಡೆ ರಣಜಿಯಲ್ಲಿಯೂ ಕರ್ನಾಟಕ ತಂಡದ ನೇತೃತ್ವ ವಹಿಸುವ ಸಾಧ್ಯತೆಯಿದೆ.
ಇದನ್ನೂ ಓದಿ:ಬೆಂಗಾಲ್ ಕದನ ಗೆದ್ದ ದಿಲ್ಲಿ; ಮತ್ತೆ ನವೀನ್ ಕುಮಾರ್ ಆರ್ಭಟ
ಸಂಭಾವ್ಯ ಆಟಗಾರರಿಗೆ ಬುಧವಾರದಿಂದ ಶಿಬಿರ ಆರಂಭವಾಗಿದ್ದು, ಮುಂದಿನ ವಾರ ತ್ರಿದಿನ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ತಂಡವನ್ನು ಅಂತಿಮಗೊಳಿಸಲಾಗುವುದು. ಜ. 8ರಂದು ತಂಡ ಕೋಲ್ಕತಾಕ್ಕೆ ಪ್ರಯಾಣಿಸಲಿದೆ. ಎಲೈಟ್ ಬಿ ವಿಭಾಗದಲ್ಲಿ ಸ್ಥಾನ ಪಡೆಸಿರುವ ಕರ್ನಾಟಕ ಮೊದಲ ಪಂದ್ಯದಲ್ಲಿ ಉತ್ತರಾಖಂಡ ವನ್ನು ಎದುರಿಸಲಿದೆ. ಈ ವಿಭಾಗದ ಉಳಿದ ತಂಡಗಳೆಂದರೆ ದಿಲ್ಲಿ, ಮುಂಬಯಿ, ಹೈದರಾಬಾದ್ ಮತ್ತು ಮಹಾರಾಷ್ಟ್ರ.
ಸಂಭಾವ್ಯ ತಂಡ
ಕೆ.ಎಲ್. ರಾಹುಲ್, ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್, ಆರ್. ಸಮರ್ಥ್, ಡಿ. ನಿಶ್ಚಲ್, ಅಭಿನವ್ ಮನೋಹರ್, ಕೆ.ವಿ. ಸಿದ್ಧಾರ್ಥ್, ಕೆ.ವಿ. ಅನೀಶ್, ಅನೀಶ್ವರ್ ಗೌತಮ್ ವಿಶಾಲ್ ಒ., ಕೃಷ್ಣಪ್ಪ ಗೌತಮ್ , ಶ್ರೇಯಸ್ ಗೋಪಾಲ್, ಜೆ. ಸುಚಿತ್, ಪ್ರವೀಣ್ ದುಬೆ, ಕೆ.ಸಿ. ಕಾರ್ಯಪ್ಪ, ರಿತೇಶ್ ಭಟ್ಕಳ್, ಶುಭಾಂಗ್ ಹೆಗ್ಡೆ, ಪ್ರಸಿದ್ಧ ಕೃಷ್ಣ, ರೋನಿತ್ ಮೋರೆ, ವೈಶಾಖ್ ವಿಜಯ್‌ಕುಮಾರ್, ಎಂ. ವೆಂಕಟೇಶ್, ವಿದ್ಯಾಧರ್ ಪಾಟೀಲ್, ಶರತ್ ಶ್ರೀನಿವಾಸ್, ಬಿ.ಆರ್. ಶರತ್, ಕೃತಿಕ್ ಕೃಷ್ಣ, ಚಿನ್ಮಯ್ ಎನ್.ಎ.
ಕೋಚ್: ಯೆರೇ ಗೌಡ. ಬೌಲಿಂಗ್ ಕೋಚ್ ಶ್ರೀನಾಥ್ ಅರವಿಂದ್. ಫೀಲ್ಡಿಂಗ್ ಕೋಚ್ ದೀಪಕ್ ಚೌಗುಲೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.