ಖೇಲ್‌ರತ್ನಕ್ಕೆ ರಾಣಿ ಹೆಸರು ಶಿಫಾರಸು
Team Udayavani, Jun 3, 2020, 5:45 AM IST
ಹೊಸದಿಲ್ಲಿ: ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಹೆಸರನ್ನು ಅತ್ಯುನ್ನತ ಕ್ರೀಡಾ ಪುರಸ್ಕಾರವಾದ ಖೇಲ್‌ರತ್ನಕ್ಕೆ ಹಾಕಿ ಇಂಡಿಯಾ ಮಂಗಳವಾರ ಶಿಫಾರಸು ಮಾಡಿದೆ.
ರಾಣಿ ನಾಯಕತ್ವದಲ್ಲಿ ಭಾರತ 2017ರಲ್ಲಿ ಏಷ್ಯಾ ಕಪ್, 2018ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವನ್ನು ಗೆದ್ದಿತ್ತು. ರಾಣಿ ನಾಯಕತ್ವದಲ್ಲಿ ಭಾರತ 2016 ಮತ್ತು 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉಳಿದಂತೆ ರಾಣಿ ವಿಶ್ವ ಗೇಮ್ಸ್ ವರ್ಷದ ಅಥ್ಲೀಟ್ ಪ್ರಶಸ್ತಿ ಮತ್ತು 2016ರಲ್ಲಿ ಅರ್ಜುನ ಹಾಗೂ 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದಿತ್ತು.
ಅರ್ಜುನಕ್ಕೆ ವಂದನಾ,
ಮೊನಿಕಾ, ಹರ್ಮನ್‌ಪ್ರೀತ್
ಅರ್ಜುನ ಪುರಸ್ಕಾರಕ್ಕೆ ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿ ಯರಾದ ವಂದನಾ ಕಠಾರಿಯಾ, ಮೊನಿಕಾ ಹೆಸರನ್ನು ಶಿಫಾರಸು ಗೊಳಿ ಸಲಾಗಿದೆ. ಭಾರತ ಪುರುಷರ ತಂಡದ ಆಟಗಾರ ಡ್ರ್ಯಾಗ್‌ಫ್ಲಿಕ್ ಸ್ಪೆಷಲಿಸ್ಟ್ ಹರ್ಮನ್‌ಪ್ರೀತ್ ಸಿಂಗ್ ಅವರನ್ನೂ ಅರ್ಜುನ ಪ್ರಶಸ್ತಿಗೆ ಹಾಕಿ ಇಂಡಿಯಾ ಶಿಫಾರಸು ಮಾಡಿದೆ.
ಮಾಜಿ ಆಟಗಾರ ಡಾ.ಆರ್. ಪಿ.ಸಿಂಗ್, ಖಾಂಡ್ಕರ್ ಅವರನ್ನು ಜೀವನಶ್ರೇಷ್ಠ ಸಾಧನೆ ಗಾಗಿ ಧ್ಯಾನ್‌ಚಂದ್ ಪ್ರಶಸ್ತಿಗೆ ಶಿಫಾರಸು ಮಾಡ ಲಾಗಿದೆ. ಜೀವಮಾನ ಶ್ರೇಷ್ಠ ಸಾಧನೆಗಾಗಿ ಕಾರಿಯಪ್ಪ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಉಳಿದಂತೆ ಭಾರತದ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಒಳಗೊಂಡಂತೆ ಪುರು ಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಆಟಗಾರ ಸಮೀರ್ ವರ್ಮ ಅವರ ಹೆಸರನ್ನು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಪ್ ಇಂಡಿಯಾ ಶಿಫಾರಸು ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.