ರಣಜಿ: ಬಂಗಾಲ ಸೆಮಿಫೈನಲ್‌ ಪ್ರವೇಶ: ಕ್ರೀಡಾ ಸಚಿವ ತಿವಾರಿ ಸೆಂಚುರಿ


Team Udayavani, Jun 10, 2022, 11:27 PM IST

ರಣಜಿ: ಬಂಗಾಲ ಸೆಮಿಫೈನಲ್‌ ಪ್ರವೇಶ: ಕ್ರೀಡಾ ಸಚಿವ ತಿವಾರಿ ಸೆಂಚುರಿ

ಬೆಂಗಳೂರು: ಕ್ರಿಕೆಟಿಗರು ನಿವೃತ್ತರಾದ ಬಳಿಕ ರಾಜಕೀಯ ಪ್ರವೇಶಿಸಿ ವಿಧಾನಸಭೆ, ಲೋಕಸಭೆ, ಮೇಲ್ಮನೆ ಪ್ರವೇಶಿಸುವುದು ಭಾರತದಲ್ಲಿ ಹೊಸತೇನಲ್ಲ. ಆದರೆ ವಿಧಾನಸಭೆ ಪ್ರವೇಶಿಸಿದ ಶಾಸಕರೊಬ್ಬರು ರಾಜ್ಯದ ಕ್ರೀಡಾ ಸಚಿವರಾಗಿ, ರಣಜಿ ಪಂದ್ಯದಲ್ಲಿ ಶತಕ ಬಾರಿಸುವುದು ಮಾತ್ರ ವಿಶೇಷ ವಿದ್ಯಮಾನವೇ ಸೈ. ಈ ಹೆಗ್ಗಳಿಕೆಗೆ ಪಾತ್ರರಾದವರು ಪಶ್ಚಿಮ ಬಂಗಾಲದ ಕ್ರೀಡಾ ಸಚಿವರಾಗಿರುವ, ಭಾರತದ ಮಾಜಿ ಬ್ಯಾಟರ್‌ ಮನೋಜ್‌ ತಿವಾರಿ!

ಜಾರ್ಖಂಡ್‌ ಎದುರಿನ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯದ ಅಂತಿಮ ದಿನವಾದ ಶುಕ್ರವಾರ ಮನೋಜ್‌ ತಿವಾರಿ 5ನೇ ಕ್ರಮಾಂಕ ದಲ್ಲಿ ಆಡಲಿಳಿದು 136 ರನ್‌ ಬಾರಿಸಿದರು. ಮಮತಾ ಬ್ಯಾನರ್ಜಿ ಸರಕಾರದಲ್ಲಿ ಕ್ರೀಡಾ ಸಚಿವರಾಗಿ ಕರ್ತವ್ಯ ನಿಭಾಯಿಸುತ್ತಿರುವ 36 ವರ್ಷದ ತಿವಾರಿ, 185 ಎಸೆತಗಳಿಂದ ಈ ಅಮೋಘ ಇನ್ನಿಂಗ್ಸ್‌ ಕಟ್ಟಿದರು. ಸಿಡಿಸಿದ್ದು 19 ಫೋರ್‌ ಹಾಗೂ 2 ಸಿಕ್ಸರ್‌. ಅಂತಿಮವಾಗಿ ರನೌಟ್‌ ಆಗಿ ನಿರ್ಗಮಿ ಸಿದರು. ಬಂಗಾಲದ ಮೊದಲ ಇನ್ನಿಂಗ್ಸ್‌ ನಲ್ಲಿ ತಿವಾರಿ 73 ರನ್‌ ಬಾರಿಸಿದ್ದರು.

ಈ ಪಂದ್ಯ ಡ್ರಾದಲ್ಲಿ ಮುಕ್ತಾಯ ಗೊಂಡಿತು. 4 ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಸ್ಪಷ್ಟ ಫ‌ಲಿತಾಂಶ ಕಾಣದ ಪಂದ್ಯ ಇದೊಂದೇ. 5 ದಿನಗಳ ಆಟದಲ್ಲಿ ಉರುಳಿದ್ದು 24 ವಿಕೆಟ್‌ ಮಾತ್ರ. ಆದರೆ 475 ರನ್ನುಗಳ ಮೊದಲ ಇನ್ನಿಂಗ್ಸ್‌ ಲೀಡ್‌ ಪಡೆದ ಬಂಗಾಲ ಸೆಮಿಫೈನಲ್‌ ಪ್ರವೇಶಿಸಿತು.

ಬಂಗಾಲ ಮೊದಲ ಇನ್ನಿಂಗ್ಸ್‌ನಲಿ,É 7 ವಿಕೆಟಿಗೆ 773 ರನ್‌ ಪೇರಿಸಿತ್ತು. 250 ವರ್ಷಗಳ ಇತಿಹಾಸವುಳ್ಳ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9ನೇ ಕ್ರಮಾಂಕದ ವರೆಗಿನ ಬ್ಯಾಟರ್‌ಗಳೆಲ್ಲರೂ ಮೊದಲ ಸಲ 50 ಪ್ಲಸ್‌ ರನ್‌ ಬಾರಿಸಿದ ಅಪೂರ್ವ ದಾಖಲೆಯೊಂದನ್ನು ಬಂಗಾಲ ನಿರ್ಮಿಸಿತ್ತು.

2021ರಲ್ಲಿ ವಿಧಾನಸಭೆಗೆ
2021ರ ವಿಧಾನಸಭಾ ಚುನಾವಣೆ ಯಲ್ಲಿ ಶಿಬ್‌ಪುರ್‌ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮನೋಜ್‌ ತಿವಾರಿ, ಬಿಜೆಪಿಯ ರತ್ನಿನ್‌ ಚಕ್ರವರ್ತಿ ವಿರುದ್ಧ ಗೆಲುವು ಸಾಧಿಸಿದ್ದರು. ರಾಜ್ಯದ ಕ್ರೀಡಾ ಸಚಿವರಾಗಿ ನೇಮಕಗೊಂಡರು.

ಮನೋಜ್‌ ತಿವಾರಿ ಕ್ರೀಡಾ ಸಚಿವರಾದ ಬಳಿಕ ಬಾರಿಸಿದ ಮೊದಲ ಸೆಂಚುರಿ ಇದಾಗಿದೆ. ಪ್ರಥಮ ದರ್ಜೆ ಕ್ರಿಕೆಟಿನ 28ನೇ ಶತಕ. ಇವರ ಕೊನೆಯ ಶತಕ 2019-20ರ ರಣಜಿ ಸೀಸನ್‌ನಲ್ಲಿ ಹೈದರಾಬಾದ್‌ ವಿರುದ್ಧ ದಾಖಲಾಗಿತ್ತು. ಅಂದು ಅಜೇಯ 303 ರನ್‌ ಹೊಡೆದಿದ್ದರು.

ತಿವಾರಿ ಭಾರತದ ಪರ 12 ಏಕದಿನ ಹಾಗೂ 3 ಟಿ20 ಪಂದ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. 98 ಐಪಿಎಲ್‌ ಪಂದ್ಯಗಳಲ್ಲಿ ಆಡಿದ್ದಾರೆ. 2015ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಕೊನೆಯ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.

ಸಂಕ್ಷಿಪ್ತ ಸ್ಕೋರ್‌: ಬಂಗಾಲ-7 ವಿಕೆಟಿಗೆ 773 ಡಿಕ್ಲೇರ್‌ ಮತ್ತು 7 ವಿಕೆಟಿಗೆ 318 (ಮನೋಜ್‌ ತಿವಾರಿ 136, ಶಾಬಾಜ್‌ ಅಹ್ಮದ್‌ 46, ಶಾಬಾಜ್‌ ನದೀಂ 59ಕ್ಕೆ 5). ಜಾರ್ಖಂಡ್‌-298.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

KLR

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.