Ranji: ಚಂಡೀಗಢ ವಿರುದ್ಧ ಕರ್ನಾಟಕಕ್ಕೆ ಬೃಹತ್ ಮುನ್ನಡೆ
Team Udayavani, Feb 18, 2024, 11:29 PM IST
ಹುಬ್ಬಳ್ಳಿ: ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಹಾಗೂ ಬೌಲರ್ ವೈಶಾಖ್ ವಿಜಯ್‌ಕುಮಾರ್ ಅವರ ಅಜೇಯ ಶತಕಗಳ ನೆರವು ಪಡೆದ ಕರ್ನಾಟಕ ತಂಡ ಚಂಡೀಗಢ ವಿರುದ್ಧದ ರಣಜಿ ಪಂದ್ಯದಲ್ಲಿ 296 ರನ್ನುಗಳ ಬೃಹತ್ ಮುನ್ನಡೆ ಸಾಧಿಸಿದೆ. ಚಂಡೀಗಢ ವಿಕೆಟ್ ನಷ್ಟವಿಲ್ಲದೆ 61 ರನ್ ಮಾಡಿ 3ನೇ ದಿನದಾಟ ಮುಗಿಸಿದೆ.
ದ್ವಿತೀಯ ದಿನದಾಟದಲ್ಲಿ ಮನೀಷ್ ಪಾಂಡೆ ಸೆಂಚುರಿ ಬಾರಿಸಿ ಮಿಂಚಿದ್ದರು. 102ರಲ್ಲಿದ್ದ ಅವರು 148ರ ತನಕ ಬ್ಯಾಟಿಂಗ್ ವಿಸ್ತರಿಸಿದರು (181 ಎಸೆತ, 17 ಬೌಂಡರಿ). 49 ರನ್ ಮಾಡಿ ಆಡುತ್ತಿದ್ದ ಹಾರ್ದಿಕ್ ರಾಜ್ 82ಕ್ಕೆ ಔಟಾಗಿ ಶತಕ ವಂಚಿತರಾದರು (178 ಎಸೆತ, 7 ಬೌಂಡರಿ).
ರವಿವಾರ ಕರ್ನಾಟಕದ ಸರದಿಯಲ್ಲಿ ಅವಳಿ ಶತಕ ದಾಖಲಾಯಿತು. ಶ್ರೀನಿವಾಸ್ ಶರತ್ ಔಟಾಗದೆ 100 ರನ್ ಹೊಡೆದರೆ (160 ಎಸೆತ, 11 ಬೌಂಡರಿ), ವೈಶಾಖ್ ವಿಜಯ್‌ಕುಮಾರ್ ಔಟಾಗದೆ 103 ರನ್ ಮಾಡಿದರು (141 ಎಸೆತ, 10 ಬೌಂಡರಿ, 2 ಸಿಕ್ಸರ್).
ಶ್ರೀನಿವಾಸ್ ಶರತ್ ಮತ್ತು ವಿಜಯ್‌ಕುಮಾರ್ ವೈಶಾಖ್ 5ನೇ ವಿಕೆಟಿಗೆ 198 ರನ್ ಪೇರಿಸಿ ಚಂಡೀಗಢವನ್ನು ಕಾಡಿದರು.
ಸಂಕ್ಷಿಪ್ತ ಸ್ಕೋರ್: ಚಂಡೀಗಢ-267 ಮತ್ತು ವಿಕೆಟ್ ನಷ್ಟವಿಲ್ಲದೆ ವಿಕೆಟ್ ನಷ್ಟವಿಲ್ಲದೆ 61. ಕರ್ನಾಟಕ-5 ವಿಕೆಟಿಗೆ 563 ಡಿಕ್ಲೇರ್ (ಪಾಂಡೆ 148, ವೈಶಾಖ್ ಔಟಾಗದೆ 103, ಎಸ್. ಶರತ್ ಔಟಾಗದೆ 100, ಹಾರ್ದಿಕ್ ರಾಜ್ 82, ಅಗರ್ವಾಲ್ 57, ಜೋಸ್ 37, ಕರಣ್ ಕೈಲ 143ಕ್ಕೆ 3)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.