ರಣಜಿ ಕ್ವಾರ್ಟರ್ ಫೈನಲ್ಸ್: ಮೊದಲ ದಿನವೇ ಕರ್ನಾಟಕ ಮೇಲುಗೈ
Team Udayavani, Jan 31, 2023, 11:37 PM IST
ಬೆಂಗಳೂರು: ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನವೇ ಕರ್ನಾಟಕದ ಮುನ್ನಡೆ ಖಾತ್ರಿಯಾಗಿದೆ. ಉತ್ತರಾಖಂಡ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿ ಚಾಲಕನ ಸ್ಥಾನದಲ್ಲಿ ಕುಳಿತಿದೆ. ರಣಜಿ ಪದಾರ್ಪಣೆ ಮಾಡಿದ ಮಧ್ಯಮ ವೇಗಿ ಮುರಳೀಧರ್ ವೆಂಕಟೇಶ್ ಮೊದಲ ದಿನದ ಹೀರೋ ಎನಿಸಿದರು. ಅವರದು 5 ವಿಕೆಟ್ ಸಾಧನೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕರ್ನಾಟಕ ಘಾತಕ ದಾಳಿ ನಡೆಸಿ ಉತ್ತರಾಖಂಡವನ್ನು 116 ರನ್ನಿಗೆ ಉದುರಿಸಿತು. ಬಳಿಕ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿ ವಿಕೆಟ್ ನಷ್ಟವಿಲ್ಲದೆ 123 ರನ್ ಪೇರಿಸಿ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು. ಈ ಮುನ್ನಡೆ ದೊಡ್ಡ ಮೊತ್ತಕ್ಕೆ ವಿಸ್ತರಿಸಲ್ಪಟ್ಟರೆ ಅಗರ್ವಾಲ್ ಪಡೆಯ ಇನ್ನಿಂಗ್ಸ್ ಗೆಲುವನ್ನು ನಿರೀಕ್ಷಿಸಲಡ್ಡಿಯಿಲ್ಲ.
ಮುರಳೀಧರ್ ವೆಂಕಟೇಶ್ ಎಸೆತಗಳಿಗೆ ಉತ್ತರಾ ಖಂಡದ ಬಳಿ ಉತ್ತರವೇ ಇರಲಿಲ್ಲ. ವೆಂಕಟೇಶ್ 36 ರನ್ ವೆಚ್ಚದಲ್ಲಿ 5 ವಿಕೆಟ್ ಉರುಳಿಸಿದರು. ವಿದ್ವತ್ ಕಾವೇರಪ್ಪ ಮತ್ತು ಕೃಷ್ಣಪ್ಪ ಗೌತಮ್ ತಲಾ 2, ವಿಜಯಕುಮಾರ್ ವೈಶಾಖ್ ಒಂದು ವಿಕೆಟ್ ಕೆಡವಿದರು. 31 ರನ್ ಮಾಡಿದ ಕುಣಾಲ್ ಚಂಡೇಲ ಅವರದೇ ಉತ್ತರಾಖಂಡ ಸರದಿಯ ಗರಿಷ್ಠ ಗಳಿಕೆ ಕರ್ನಾಟಕಕ್ಕೆ ಆರ್. ಸಮರ್ಥ್ -ಮಾಯಾಂಕ್ ಅಗರ್ವಾಲ್ ಪ್ರಚಂಡ ಆರಂಭ ಒದಗಿಸಿದ್ದು, 26 ಓವರ್‌ಗಳ ಆಟದಲ್ಲಿ 123 ರನ್ ಪೇರಿಸಿದ್ದಾರೆ. ಇದರಲ್ಲಿ ಕಪ್ತಾನ ಅಗರ್ವಾಲ್ ಕೊಡುಗೆ ಅಜೇಯ 65 ರನ್ (86 ಎಸೆತ, 9 ಬೌಂಡರಿ, 1 ಸಿಕ್ಸರ್). ಸಮರ್ಥ್ 54 ರನ್ ಮಾಡಿ ಆಡುತ್ತಿದ್ದಾರೆ (74 ಎಸೆತ, 7 ಬೌಂಡರಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.