ರಣಜಿ: ಕರ್ನಾಟಕ-ರೈಲ್ವೇಸ್ ಪಂದ್ಯ ಡ್ರಾ
Team Udayavani, Feb 21, 2022, 5:30 AM IST
ಚೆನ್ನೈ: ಕರ್ನಾಟಕ-ರೈಲ್ವೇಸ್ ನಡುವಿನ ಎಲೈಟ್ “ಸಿ’ ವಿಭಾಗದ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ 3 ಅಂಕ ಪಡೆದ ಮನೀಷ್ ಪಾಂಡೆ ಬಳಗ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿದೆ. ಪುದುಚೇರಿಯನ್ನು ಮಣಿಸಿದ ಜಮ್ಮು ಮತ್ತು ಕಾಶ್ಮೀರ 6 ಅಂಕ ಗಳಿಸಿ ಅಗ್ರಸ್ಥಾನ ಅಲಂಕರಿಸಿದೆ.
55 ರನ್ ಮುನ್ನಡೆ ಪಡೆದ ಕರ್ನಾಟಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ 9 ವಿಕೆಟಿಗೆ 223 ರನ್ ಗಳಿಸಿ ಡಿಕ್ಲೇರ್ ಮಾಡಿತು. 279 ರನ್ ಗೆಲುವಿನ ಗುರಿ ಪಡೆದ ರೈಲ್ವೇಸ್ 4 ವಿಕೆಟಿಗೆ 69 ರನ್ ಗಳಿಸಿತು.
ಕರ್ನಾಟಕದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮಿಂಚಿದ ಆಟಗಾರರೆಂದರೆ ಆರಂಭಕಾರ ಮಾಯಾಂಕ್ ಅಗರ್ವಾಲ್ (56) ಮತ್ತು ಆರ್. ಸಮರ್ಥ್ (83). ಮೊದಲ ಪಂದ್ಯದ ಶತಕವೀರರಾದ ಸಿದ್ಧಾರ್ಥ್ 39, ಮನೀಷ್ ಪಾಂಡೆ 24 ರನ್ ಮಾಡಿದರು. ಅಮಿತ್ ಮಿಶ್ರಾ 4, ನಾಯಕ ಕಣ್ì ಶರ್ಮ 3 ವಿಕೆಟ್ ಉರುಳಿಸಿ ಉತ್ತಮ ನಿಯಂತ್ರಣ ಸಾಧಿಸಿದರು.
ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಡಲಿದೆ. ಈ ಪಂದ್ಯ ಚೆನ್ನೈಯಲ್ಲೇ ನಡೆಯಲಿದ್ದು, ಫೆ. 24ರಂದು ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-481 ಮತ್ತು 9 ವಿಕೆಟಿಗೆ 223 ಡಿಕ್ಲೇರ್ (ಸಮರ್ಥ್ 83, ಅಗರ್ವಾಲ್ 56, ಸಿದ್ಧಾರ್ಥ್ 39, ಅಮಿತ್ ಮಿಶ್ರಾ 58ಕ್ಕೆ 4, ಕಣ್ì ಶರ್ಮ 47ಕ್ಕೆ 3). ರೈಲ್ವೇಸ್-426 ಮತ್ತು 4 ವಿಕೆಟಿಗೆ 69 (ಸೈಫ್ ಔಟಾಗದೆ 27, ದೇವಧರ್ 20, ವೈಶಾಖ್ 16ಕ್ಕೆ 2).
ಪಂದ್ಯಶ್ರೇಷ್ಠ: ಮನೀಷ್ ಪಾಂಡೆ.
ಇದನ್ನೂ ಓದಿ:ಭಾರತದ ಅವಳಿ ವೈಟ್‌ವಾಶ್ ಪರಾಕ್ರಮ
ಸೋಲು ತಪ್ಪಿಸಿದ ಪೂಜಾರ, ಪಟೇಲ್
ಅಹ್ಮದಾಬಾದ್: ಆರಂಭಕಾರ ಸ್ನೆಲ್ ಪಟೇಲ್ ಮತ್ತು ಚೇತೇಶ್ವರ್ ಪೂಜಾರ ಅವರ ದಿಟ್ಟ ಬ್ಯಾಟಿಂಗ್ ಹೋರಾಟದ ಫಲದಿಂದ ಮುಂಬಯಿ ವಿರುದ್ಧದ ರಣಜಿ ಪಂದ್ಯದಲ್ಲಿ ಸೌರಾಷ್ಟ್ರ ಸೋಲಿನಿಂದ ಪಾರಾಗಿದೆ.
324 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಸೌರಾಷ್ಟ್ರ ಮೇಲೆ ಫಾಲೋಆನ್ ಹೇರಲಾಗಿತ್ತು. ಆದರೆ ಆರಂಭಿಕರಾದ ಹಾರ್ವಿಕ್ ದೇಸಾಯಿ (62)-ಸ್ನೆಲ್ ಪಟೇಲ್ (98) 163 ರನ್ ಜತೆಯಾಟ ನಿಭಾಯಿಸಿದರು. ಬಳಿಕ ಪೂಜಾರ 91 ರನ್ ಬಾರಿಸಿ ಮುಂಬಯಿಯ ಗೆಲುವಿನ ಕನಸನ್ನು ಛಿದ್ರಗೊಳಿಸಿದರು. ಎಂದಿನ ನಿಧಾನ ಗತಿಯ ಶೈಲಿಯನ್ನು ಬದಿಗಿಟ್ಟು ಆಕ್ರಮಣಕಾರಿಯಾಗಿ ಆಡಿದ ಪೂಜಾರ 83 ಎಸೆತಗಳಿಂದ 91 ರನ್ ಬಾರಿಸಿದರು (16 ಬೌಂಡರಿ, 1 ಸಿಕ್ಸರ್). ಪೂಜಾರ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವ ವೇಳೆ ಸೌರಾಷ್ಟ್ರ 9 ವಿಕೆಟಿಗೆ 372 ರನ್ ಪೇರಿಸಿತ್ತು.
ಮುಂಬೈ ಪರ ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ 114 ರನ್ ವೆಚ್ಚದಲ್ಲಿ 7 ವಿಕೆಟ್ ಉಡಾಯಿಸಿದರು. 275 ರನ್ ಬಾರಿಸಿದ ಸರ್ಫರಾಜ್ ಖಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.