ರಣಜಿ ಟ್ರೋಫಿ ಫೈನಲ್: ಬಂಗಾಲದ ಟ್ರೋಫಿ ಬರಗಾಲ ನೀಗೀತೇ?
Team Udayavani, Feb 16, 2023, 7:50 AM IST
ಕೋಲ್ಕತಾ: ಸೌರಾಷ್ಟ್ರ ವಿರುದ್ಧ ತವರಿನಂಗಳದಲ್ಲಿ ರಣಜಿ ಟ್ರೋಫಿ ಫೈನಲ್ ಸಮರಕ್ಕೆ ಸಜ್ಜಾಗಿರುವ ಬಂಗಾಲ ತನ್ನ 33 ವರ್ಷಗಳ ಪ್ರಶಸ್ತಿ ಬರಗಾಲ ನೀಗಿಸಿಕೊಳ್ಳಲು ಟೊಂಕಕಟ್ಟಿದೆ. ಇದೇ ವೇಳೆ ಸೌರಾಷ್ಟ್ರ ಕೂಡ ಕಠಿನ ಸವಾಲೊಡ್ಡಲು ಸಜ್ಜಾಗಿ ನಿಂತಿದೆ. ಗುರುವಾರದಿಂದ 5 ದಿನಗಳ ಕಾಲ “ಈಡನ್ ಗಾರ್ಡನ್ಸ್’ನಲ್ಲಿ ಇತ್ತಂಡಗಳ ಮಹಾಕಾಳಗವನ್ನು ನಿರೀಕ್ಷಿಸಬಹುದು.
ಬಂಗಾಲ ರಣಜಿ ಟ್ರೋಫಿ ಯಿಂದ ವಿಮುಖವಾಗಿ 33 ವರ್ಷಗಳೇ ಉರುಳಿವೆ. 1990 ರಷ್ಟು ಹಿಂದೆ ಕೊನೆಯ ಸಲ ಈಡನ್ ಗಾರ್ಡನ್ಸ್‌ನಲ್ಲೇ ಟ್ರೋಫಿ ಎತ್ತಿತ್ತು. ದಿಲ್ಲಿ ಅಂದಿನ ಎದುರಾಳಿ ಯಾಗಿತ್ತು.ಇದು 2019-20ರ ರಣಜಿ ಋತುವಿನ ಫೈನಲ್‌ನ ಪುನರಾ ವರ್ತನೆ ಆಗಲಿದೆ. ರಾಜ್‌ಕೋಟ್‌ನಲ್ಲಿ ನಡೆದ ಅಂದಿನ ಪ್ರಶಸ್ತಿ ಸಮರದಲ್ಲಿ ಸೌರಾಷ್ಟ್ರ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮೊದಲ ಸಲ ರಣಜಿ ಕಿರೀಟ ಏರಿಸಿಕೊಂಡಿತ್ತು.
ಕ್ರೀಡಾ ಸಚಿವರೇ ಸಾರಥಿ!
ರಾಜ್ಯ ಕ್ರೀಡಾ ಸಚಿವರೂ ಆಗಿರುವ ಮನೋಜ್ ತಿವಾರಿ ಬಂಗಾಲದ ಯಶಸ್ವಿ ಸಾರಥಿಯಾಗಿದ್ದಾರೆ. 3 ವರ್ಷಗಳ ಬಳಿಕ ಅವರು ತಂಡವನ್ನು ಮುನ್ನಡೆಸುತ್ತಿರುವುದು ವಿಶೇಷ. ಬ್ಯಾಟಿಂಗ್‌ನಲ್ಲಿ ಕ್ಲಿಕ್ ಆಗದಿದ್ದರೂ (398 ರನ್), ತಂಡಕ್ಕೆ ಸ್ಫೂರ್ತಿ ತುಂಬಿರುವುದು ಸುಳ್ಳಲ್ಲ.ಬಂಗಾಲ ಸಾಕಷ್ಟು ಮಂದಿ ಸ್ಟಾರ್ ಆಟಗಾರರನ್ನು ಹೊಂದಿದೆ.
ಆರಂಭಕಾರ ಅಭಿಮನ್ಯು ಈಶ್ವರನ್, ಆಲ್‌ರೌಂಡರ್ ಶಾಬಾಜ್ ಅಹ್ಮದ್, ಪೇಸರ್ ಮುಕೇಶ್ ಕುಮಾರ್ ಅವ ರೆಲ್ಲ ಇತ್ತೀಚೆಗೆ ರಾಷ್ಟ್ರೀಯ ತಂಡದ ಸಂಪರ್ಕದಲ್ಲಿದ್ದರು. ಮತ್ತೋರ್ವ ಪೇಸ್ ಬೌಲರ್ ಆಕಾಶ್ ದೀಪ್ 9 ಪಂದ್ಯಗಳಿಂದ 37 ವಿಕೆಟ್‌ಗಳನ್ನು ಬೇಟೆಯಾಡಿ ದ್ದಾರೆ. ಪೊರೆಲ್ ಮತ್ತೋರ್ವ ಅಪಾಯಕಾರಿ ಬೌಲರ್.
ಅನುಭವಿ ಅನುಸ್ತೂಪ್ ಮಜುಮಾªರ್ 790 ರನ್, ಯುವ ಬ್ಯಾಟರ್ ಸುದೀಪ್ ಘರಾಮಿ 789 ರನ್ ಪೇರಿಸಿ ಈ ಋತುವಿನ ಟಾಪ್-2 ಸ್ಕೋರರ್ ಆಗಿದ್ದಾರೆ. ಹಾಲಿ ಚಾಂಪಿಯನ್ ಮಧ್ಯ ಪ್ರದೇಶವನ್ನು ಅವರ ತವರಲ್ಲೇ ದೊಡ್ಡ ಸೋಲಿಗೆ ಗುರಿಪಡಿಸಿದ ಸಾಧನೆ ಬಂಗಾಲದ್ದು.
ಉನಾದ್ಕತ್ ಬಲ
ಟೀಮ್ ಇಂಡಿಯಾದಲ್ಲಿದ್ದ ಎಡಗೈ ವೇಗಿ ಜೈದೇವ್ ಉನಾದ್ಕತ್ ಅವರನ್ನು ಬಿಟ್ಟುಕೊಟ್ಟಿರುವುದು ಸೌರಾಷ್ಟ್ರ ಪಾಲಿಗೆ ಬಿಗ್ ಬೂಸ್ಟ್ ಆಗಿ ಪರಿಣಮಿಸಿದೆ. ಇವರಿಗೆ ಜತೆ ನೀಡಲು ಸಕಾರಿಯಾ ಇದ್ದಾರೆ. ವಸವಾಡ, ಶೆಲ್ಡನ್ ಜಾಕ್ಸನ್, ಚಿರಾಗ್ ಜಾನಿ, ಹಾರ್ವಿಕ್ ದೇಸಾಯಿ ಟಾಪ್ ಫಾರ್ಮ್ ನಲ್ಲಿರುವ ಬ್ಯಾಟರ್‌ಗಳಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಕರ್ನಾ ಟಕವನ್ನು ಬೆಂಗಳೂರಿನ ಅಂಗಳ ದಲ್ಲೇ ಮಣಿಸಿದ್ದು ಸೌರಾಷ್ಟ್ರದ ಹೆಗ್ಗಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.