![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 8, 2022, 5:41 PM IST
ಶಿರಸಿ: ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅರಣ್ಯ ಭೂಮಿ ಅವಲಂಬಿತವಾಗಿರುವ ಕುಟುಂಬಗಳ ಭೂಮಿ ಹಕ್ಕಿಗಾಗಿ ಕೇಂದ್ರ ಸರಕಾರವು ಅರಣ್ಯವಾಸಿಗಳ ಪರ ಹೊಸ ನೀತಿ ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯವಾಸಿಗಳು ನಿರಾಶ್ರಿತರಾಗುವುದರಲ್ಲಿ ಸಂಶಯವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
”ಅರಣ್ಯವಾಸಿಗಳ ಉಳಿಸಿ”ಜಾಥದ ಅಂಗವಾಗಿ ಸಾಲ್ಕಣಿ, ಅರೇ ಹುಲೇಕಲ್, ವಾನಳ್ಳಿ, ಕಕ್ಕಳ್ಳಿ, ಶಿರಪಾಲ್, ಕೋಡ್ನಗದ್ದೆ, ಧೂಳಳ್ಳಿ, ಸೋಂದಾ, ಕರ್ಕೋಳ್ಳಿ, ತೆಂಕಿನಬೈಲ್ ಮುಂತಾದ ಅರಣ್ಯ ಪ್ರದೇಶಗಳಲ್ಲಿ ನಡೆದ ಸಭೆಗಳಲ್ಲಿ ಸರಕಾರಕ್ಕೆ ಆಗ್ರಹಿಸಿದರು.
ಸುಮಾರು ಒಂದುಕೋಟಿ ಮಿಕ್ಕಿ ದೇಶದಲ್ಲಿ ಅರಣ್ಯವಾಸಿಗಳು ಅರಣ್ಯ ಭೂಮಿಯ ಮೇಲೆ ಅವಲಂಭಿತರಾಗಿದ್ದು ಈಗಾಗಲೇ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿಗಳು ಕಾನೂನು ವ್ಯತಿರಿಕ್ತವಾಗಿ ತಿರಸ್ಕರಿಸಿಸುತ್ತಿದೆ. ಕೇಂದ್ರ ಸರಕಾರವು ಅರಣ್ಯವಾಸಿಗಳ ಪರವಾಗಿ ನಿಲುವನ್ನು ಪ್ರಕಟಿಸದಿದ್ದಲ್ಲಿ ಅರಣ್ಯವಾಸಿಗಳು ಅತಂತ್ರರಾಗುತ್ತಾರೆ ಎಂದು ಆತಂಕ ಹೊರ ಹಾಕಿದರು.
ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ೧೫ ವರ್ಷಗಳಾದರೂ ಮಂಜೂರಿ ಪ್ರಕ್ರಿಯೆಗೆ ಗ್ರಹಣ ಹಿಡಿದಂತಾಗಿದೆ ಎಂದೂ ರವೀಂದ್ರ ನಾಯ್ಕ ಅಸಮಧಾನ ಹೊರ ಹಾಕಿದರು.
ಸಭೆಯಲ್ಲಿ ಮಂಜುನಾಥ ಪೂಜಾರಿ, ಮಂಜು ನಾಯ್ಕ, ಶಂಕರ ಪೂಜಾರಿ, ಸುಬ್ಬಾ ಮುಂತಾದವರು ಉಪಸ್ಥಿತರಿದ್ದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.