ಆರ್‌ಸಿಬಿ ಸೋಲಿಸಿದ ಅಂಪೈರ್
ಅಂತಿಮ ಎಸೆತ ನೋಬಾಲ್ ಆಗಿದ್ದರೂ ಗಮನಿಸದ ಅಂಪೈರ್
Team Udayavani, Mar 29, 2019, 7:05 AM IST
ಬೆಂಗಳೂರು: ಪ್ರೇಕ್ಷಕರನ್ನು ರೋಚಕತೆಯ ಶೃಂಗಕ್ಕೆ ತಲುಪಿದ್ದ 12ನೇ ಐಪಿಎಲ್‌ನ ಗುರುವಾರ ರಾತ್ರಿಯ ಪಂದ್ಯದಲ್ಲಿ ಆತಿಥೇಯ ಆರ್‌ಸಿಬಿ, ಮುಂಬೈ ವಿರುದ್ಧ 6 ರನ್‌ಗಳ
ಸೋಲನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತು.
ಪಂದ್ಯದ ಕೊನೆಯ ಎಸೆತ ನೋಬಾಲ್ ಆಗಿದ್ದರೂ, ಅದನ್ನು ಅಂಪೈರ್ ಗಮನಿಸಲಿಲ್ಲ. ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ. ಅಂಪೈರ್ ತಪ್ಪೇ ಬೆಂಗಳೂರು ಸೋಲಿಗೆ
ಕಾರಣ ಎಂಬ ಗಲಾಟೆ ಶುರುವಾಗಿದೆ. ಆರ್‌ಸಿಬಿ ರನ್ ಬೆನ್ನತ್ತುವ ಆರಂಭದಲ್ಲಿ ಕೊಹ್ಲಿ ಅದ್ಭುತವಾಗಿ ಆಡಿ 46 ರನ್ ಗಳಿಸಿದರು. ಇದರ ನಂತರ ಜವಾಬ್ದಾರಿ ಹೊತ್ತುಕೊಂಡ ಡಿವಿಲಿಯರ್ಸ್, ಅಸಾಮಾನ್ಯ ಬ್ಯಾಟಿಂಗ್ ಮಾಡಿ, 41 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ನೆರವಿನಿಂದ70 ರನ್ ಗಳಿಸಿದರು. ಈ ವೇಳೆ ಮುಂ ಬೈ ವೇಗಿ ಜಸಿøàತ್
ಬುಮ್ರಾ, 20 ರನ್ ನೀಡಿ 3 ವಿಕೆಟ್ ಕಿತ್ತರು ಮಾತ್ರವಲ್ಲಮುಂಬೈ ಪಂದ್ಯವನ್ನು ಗೆಲ್ಲಲು ಕಾರಣವಾದರು.
ಕೊಹ್ಲಿ 5000 ರನ್: ಐಪಿಎಲ್ ಇತಿಹಾಸದಲ್ಲೇ ಅತಿವೇಗವಾಗಿ 5000 ರನ್ ಗಳಿಸಿದ ದಾಖಲೆಯನ್ನು ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ನಿರ್ಮಿಸಿದರು. ಅವರು 165 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ಇದಕ್ಕೂ ಮುನ್ನ 5000 ರನ್ ಗಳಿಸಿದ್ದ
ಚೆನ್ನೈನ ಸುರೇಶ್ ರೈನಾ, ಇದಕ್ಕಾಗಿ 177 ಪಂದ್ಯ ಬಳಸಿಕೊಂಡಿದ್ದರು.
ಕಳಪೆ ಅಂಪೈರಿಂಗ್‌ನಿಂದ ಸೋಲು
ಕೊನೆ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ 17 ರನ್ ಬೇಕಿತ್ತು. ಮಾಲಿಂಗ ಓವರ್‌ನ ಮೊದಲ
ಎಸೆತದಲ್ಲಿ ದುಬೆ ಸಿಕ್ಸರ್ ಚಚ್ಚಿದರು. ಆ ನಂತರ 4 ಎಸೆತಗಳಲ್ಲಿ ಕೇವಲ 4 ರನ್ ಅಷ್ಟೇ ಬಂತು. ಕೊನೆಯ ಎಸೆತದಲ್ಲಿ ಗೆಲುವಿಗೆ 7 ರನ್ ಬೇಕಿತ್ತು. ಆ ಎಸೆತದಲ್ಲಿ ದುಬೆ ಬಾರೀ ಹೊಡೆತಕ್ಕೆ ಮುಂದಾದರೂ ಸಾಧ್ಯವಾಗಲಿಲ್ಲ. ಮುಂಬೈ ಆಟಗಾರರು ಗೆಲುವಿನ ಸಂಭ್ರಮ ಆಚರಿಸಿದರು. ಎಲ್ಲರು ಪೆವಿಲಿಯನ್ ಕಡೆಗೆ ನಡೆದರು. ಆದರೆ ರಿಪ್ಲೇ ನೋಡಿದಾಗ ಮಾಲಿಂಗ ಕೊನೆ ಎಸೆತದಲ್ಲಿ ನೋಬಾಲ್ ಹಾಕಿರುವುದು ಸ್ಪಷ್ಟವಾಗಿತ್ತು. ಇದನ್ನು ಅಂಪೈರ್ ಗಮನಿಸಿದ್ದರೆ ಬಹುಶಃ ಆರ್‌ಸಿಬಿ ಸೋಲು ತಪ್ಪುವ ಸಾಧ್ಯತೆ ಇತ್ತು.
ನಾವು ಆಡುತ್ತಿರುವುದು ಐಪಿಎಲ್ ದರ್ಜೆ ಕ್ರಿಕೆಟ್. ಕ್ಲಬ್ ಕ್ರಿಕೆಟ್ ಅಲ್ಲ. ಕೂದಲೆಳೆಯಲ್ಲಿ
ನಿರ್ಧಾರವಾಗುವ ಪಂದ್ಯಗಳಲ್ಲಿ ಅಂಪೈರ್‌ಗಳು ಕಣ್ಣು ಬಿಟ್ಟು ನೋಡುತ್ತಿರಬೇಕು.
● ವಿರಾಟ್ ಕೊಹ್ಲಿ, ಆರ್‌ಸಿಬಿ ನಾಯಕ
ಪಂದ್ಯದ ತಿರುವು
ಆರ್‌ಸಿಬಿ ರನ್ ಬೆನ್ನತ್ತುವ ವೇಳೆ ಕೊನೆಯ ಹಂತದಲ್ಲಿ 24 ಎಸೆತಕ್ಕೆ 41 ರನ್ ಬೇಕಿತ್ತು. ಆಗ ಬುಮ್ರಾ ಎಸೆದ ಎರಡು ಓವರ್‌ಗಳು ಪಂದ್ಯದ ಹಣೆಬರಹ ಬದಲಿಸಿದವು. 17
ಓವರ್‌ನಲ್ಲಿ ಕೇವಲ 1 ರನ್ ನೀಡಿದ ಅವರು, 19ನೇ ಓವರ್‌ನಲ್ಲಿ 5 ರನ್ ಮಾತ್ರ ನೀಡಿದರು.
ಇತ್ತಂಡಗಳಿಗೆ ಮುಂದಿನ ಪಂದ್ಯ
ಪಂಜಾಬ್ v/s ಮುಂಬೈ, ಆರ್‌ಸಿಬಿ v/sಹೈದ್ರಾಬಾದ್
ಮುಂಬೈ : 20 ಓವರ್‌ಗೆ 187/8
ಕ್ವಿಂಟನ್ ಡಿ ಕಾಕ್ ಬಿ ಚಹಲ್ 23
ರೋಹಿತ್ ಶರ್ಮ ಸಿ ಸಿರಾಜ್ ಬಿ ಯಾದವ್ 48
ಸೂರ್ಯಕುಮಾರ್ ಯಾದವ್ ಸಿ ಅಲಿ ಬಿ ಚಹಲ್ 38
ಯುವರಾಜ್ ಸಿಂಗ್ ಸಿ ಸಿರಾಜ್ ಬಿ ಚಹಲ್ 23
ಕೈರನ್ ಪೊಲಾರ್ಡ್ ಸಿ ಹೆಟ್‌ಮೈರ್ ಬಿ ಚಹಲ್ 5
ಕೃಣಾಲ್ ಪಾಂಡ್ಯ ಸಿ ಸೈನಿ ಬಿ ಯಾದವ್ 1
ಹಾರ್ದಿಕ್ ಪಾಂಡ್ಯ ಅಜೇಯ 32
ಮೆಕ್ಲೆನಗನ್ ಬಿ ಸಿರಾಜ್ 1
ಮಾರ್ಕಂಡೆ ಸಿ ಪಟೇಲ್ ಬಿ ಸಿರಾಜ್ 6
ಜಸಿøàತ್ ಬುಮ್ರಾ ಅಜೇಯ 0
ಇತರೆ: 10
ವಿಕೆಟ್ ಪತನ: 1-54, 2-87, 3-124, 4-142,
5-145, 6-146, 7-147, 8-172
ಉಮೇಶ್ ಯಾದವ್ 4 0 26 2
ನವದೀಪ್ ಸೈನಿ 4 0 40 0
ಮೊಹಮ್ಮದ್ ಸಿರಾಜ್ 4 0 38 2
ಯಜುವೇಂದ್ರ ಚಹಲ್ 4 0 38 4
ಗ್ರ್ಯಾನ್‌ಹೋಮ್ 3 0 27 0
ಮೊಯಿನ್ ಅಲಿ 1 0 13 0
ಆರ್‌ಸಿಬಿ 20 ಓವರ್‌ಗೆ 181/5
ಪಾರ್ಥಿವ್ ಪಟೇಲ್ ಬಿ ಮಾರ್ಕಂಡೆ 31
ಮೊಯಿನ್ ಅಲಿ ರನೌಟ್ 13
ವಿರಾಟ್ ಕೊಹ್ಲಿ ಸಿ ಹಾರ್ದಿಕ್ ಬಿ ಬುಮ್ರಾ 46
ಎಬಿಡಿ ವಿಲಿಯರ್ ಅಜೇಯ 70
ಹೆಟ್‌ಮೈರ್ ಸಿ ಹಾರ್ದಿಕ್ ಬಿ ಬುಮ್ರಾ 5
ಗ್ರ್ಯಾನ್‌ಹೋಮ್ ಸಿ ಕೃಣಾಲ್ ಬಿ ಬುಮ್ರಾ 2
ಶಿವಂ ದುಬೆ ಅಜೇಯ 9
ಇತರೆ 5
ವಿಕೆಟ್ ಪತನ: 1-27, 2-67, 3-116, 4-147, 5-169
ಮೆಕ್ಲೆನಗನ್ 2 0 24 0 ಮಾಲಿಂಗ 4 0 47 0
ಜಸಿøàತ್ ಬುಮ್ರಾ 4 0 20 3
ಹಾರ್ದಿಕ್ ಪಾಂಡ್ಯ 3 0 37 0
ಕೃಣಾಲ್ ಪಾಂಡ್ಯ 4 0 28 0
ಮಾಯಾಂಕ್ ಮಾರ್ಕಂಡೆ 3 0 23 1
● ಕೆ.ಪೃಥ್ವಿಜಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.