“ಇ-ಸಾರ್ವಜನಿಕ ಗ್ರಂಥಾಲಯ’ದೆಡೆಗೆ ಓದುಗರ ಚಿತ್ತ
15 ಸಾವಿರಕ್ಕೂ ಹೆಚ್ಚು ಮಂದಿಯಿಂದ ಆ್ಯಪ್ ಡೌನ್‌ಲೋಡ್
Team Udayavani, Apr 25, 2020, 6:39 AM IST
ಸಾಂದರ್ಭಿಕ ಚಿತ್ರ..
ಮಂಗಳೂರು: ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಗ್ರಂಥಾಲಯ ಇಲಾಖೆ ಸಿದ್ಧಪಡಿಸಿದ ಇ-ಪುಸ್ತಕ ಒದಗಿಸುವ ಇ-ಸಾರ್ವಜನಿಕ ಗ್ರಂಥಾಲಯಕ್ಕೆ ಒಂದೂವರೆ ತಿಂಗಳಲ್ಲೇ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಲಾಕ್‌ಡೌನ್ ಅವಧಿಯಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಸ್ಮಾರ್ಟ್‌ಫೋನ್‌ನಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಂಥಾಲಯ ಇಲಾಖೆಫೆ. 26ರಂದು ಇ-ಪುಸ್ತಕ ಓದುವ ಯೋಜನೆಗೆ ಚಾಲನೆ ನೀಡಿತ್ತು. ಇದಕ್ಕಾಗಿ ಕರ್ನಾಟಕ ಸರಕಾರದ ಲೋಗೋ ಹೊಂದಿರುವ ಇ-ಸಾರ್ವಜನಿಕ ಗ್ರಂಥಾಲಯ ಎಂಬ ಆ್ಯಪ್‌ನ್ನು ಸಿದ್ಧಪಡಿಸಲಾಗಿತ್ತು. ಮೊದಲ ಒಂದೂವರೆ ತಿಂಗಳ ಅವಧಿಯಲ್ಲಿ ಒಟ್ಟು 16,500ಕ್ಕೂ ಹೆಚ್ಚು ಮಂದಿ ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲೂ ಲಾಕ್‌ಡೌನ್ ಆರಂಭವಾದ ಮಾ. 22ರ ಅನಂತರ 15 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ರಜೆ ಸದುಪಯೋಗಕ್ಕೆ ಇ- ಪುಸ್ತಕ
ಲಾಕ್‌ಡೌನ್ ಅವಧಿಯಲ್ಲಿ ಕೆಲವರಿಗೆ ಮನೆಯಲ್ಲೇ ಕೆಲಸ ನಿರ್ವಹಿಸಲು ಅವಕಾಶ ವಿದ್ದರೆ, ಇನ್ನು ಕೆಲವರಿಗೆ ರಜೆ ನೀಡಲಾಗಿದೆ. ಇ-ಸಾರ್ವಜನಿಕ ಗ್ರಂಥಾಲಯ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕೆಲವರು ಪುಸ್ತಕ ಗಳನ್ನು ಓದುತ್ತಿದ್ದಾರೆ. ಇ-ಸಾರ್ವಜನಿಕ ಗ್ರಂಥಾಲಯ ಆ್ಯಪ್‌ನಲ್ಲಿ ಬುದ್ಧಿ ಮತ್ತೆಯನ್ನು ಪ್ರಚೋದಿಸುವ ಎಲ್ಲ ರೀತಿಯ ಪುಸ್ತಕಗಳು ಲಭ್ಯವಿವೆ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು, ಸ್ಪರ್ಧಾತ್ಕಕ ಪರೀಕ್ಷೆಗಳಿಗೆ ತಯಾರಾಗುತ್ತಿರುವವರಿಗೆ ಪಠ್ಯ, ಕನ್ನಡ, ಇಂಗ್ಲಿಷ್ ಸಹಿತ ಹಲವು ಭಾಷೆಗಳ ಕ್ಲಾಸಿಕ್ ಕಾದಂಬರಿಗಳು- ಹೀಗೆ ಎಲ್ಲ ಓದುಗರಿಗೆ ಬೇಕಾದ ಇ-ಪುಸ್ತಕಗಳು ಈ ಆ್ಯಪ್‌ನಲ್ಲಿ ಇವೆ.
ಆ್ಯಪ್ ಬಳಕೆ ಹೆಚ್ಚುತ್ತಿದೆ
ಇ-ಸಾರ್ವಜನಿಕ ಗ್ರಂಥಾಲಯ ಆ್ಯಪ್ ಪರಿಚಯಿಸಿದ ಮೇಲೆ ಒಂದೂವರೆ ತಿಂಗಳಿನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡವರ ಸಂಖ್ಯೆ ಹೆಚ್ಚಿದೆ. ಲಾಕ್‌ಡೌನ್ ಅವಧಿಯಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ಆ್ಯಪ್ ಬಳಕೆ ಹೆಚ್ಚುತ್ತಿರುವುದನ್ನು ನೋಡಿದಾಗ ಇದು ಕನ್ನಡ ಪುಸ್ತಕೋದ್ಯಮಕ್ಕೂ ಹೊಸದಾದ ಆಲೋಚನೆ ಮಾಡಲು ಸದವಕಾಶ ಎನ್ನುವುದು ನನ್ನ ಭಾವನೆ.
-ಎಸ್. ಸುರೇಶ್‌ಕುಮಾರ್
ಶಿಕ್ಷಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.