ಸಂಘ ಪರಿವಾರಕ್ಕೆ ಮರಳಲು ಸಿದ್ಧ: ಪ್ರಮೋದ್ ಮುತಾಲಿಕ್
Team Udayavani, May 23, 2019, 6:00 AM IST
ಶಿರಸಿ: ಶ್ರೀರಾಮ ಸೇನೆ ಹಿಂದೂತ್ವದ ಸಂಘಟನೆ, ರಾಜಕೀಯ ಪಕ್ಷವಲ್ಲ. ಹಿಂದೂತ್ವಕ್ಕಾಗಿ ಬಯಸಿದರೆ ಮರಳಿ ನನ್ನ ತವರುಮನೆ ಸಂಘ ಪರಿವಾರಕ್ಕೆ ಸೇರಲು ಸಿದ್ಧನಿದ್ದೇನೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಸೋದೆ ವಾದಿರಾಜ ಮಠದಲ್ಲಿ ಮೂರು ದಿನಗಳ ಬೈಠಕ್ ಬಳಿಕ ಮಾತನಾಡಿದ ಅವರು, ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಶ್ರೀರಾಮ ಸೇನೆಗೂ ಬೇರಾವ ಭಿನ್ನವಿಲ್ಲ. ಹಿಂದುತ್ವ ವಿಚಾರಕ್ಕೆ ಕೈ ಜೋಡಿಸಿ ಎಂದರೆ ನಾವು ಸಿದ್ಧ. ನರೇಂದ್ರ ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್, ವಿಎಚ್ಪಿ ಯಾರೇ ಕರೆದರೂ ಹೋಗುತ್ತೇವೆ ಎಂದರು.
ಗೋಡ್ಸೆ ಕುರಿತು ಚರ್ಚಿಸಲು ವೇದಿಕೆ ಸಿದ್ಧವಿದ್ದರೆ ಚರ್ಚೆ ಮಾಡಲು ನಾನೂ ಸಿದ್ಧ. ಹಿಂದೂ ಉಗ್ರ ಎಂಬ ಶಬ್ಧವನ್ನು ಕಮಲ ಹಾಸನ್ ಅವರು ಬಳಕೆ ಮಾಡಿದ್ದ ಬಳಿಕ ಚರ್ಚೆ ಆರಂಭವಾಗಿದೆ. ಆಗಿನ ಕಾಲದ ಮನಸ್ಥಿತಿ ನೋಡಿ ಚರ್ಚೆ ಆಗಬೇಕು. ಅಯೋಧ್ಯೆ ರಾಮ ಜನ್ಮಭೂಮಿ. ಅಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಲೇಬೇಕು. ಅಲ್ಲಿಯ ತನಕ ನಾವು ಹೋರಾಟ ನಡೆಸುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು