Kashmir: ಮೂರು ದಶಕಗಳ ಬಳಿಕ ನೈಜ ಸಂಭ್ರಮ
ಬದುಕು ಇರುವುದು ಬಂದೂಕು, ಕಲ್ಲಿನಲ್ಲಲ್ಲ, ಭಾರತದಲ್ಲಿ !: ಕಾಶ್ಮೀರ ಕಣಿವೆ ರಾಜ್ಯದಲ್ಲಿ ಸ್ವಾತಂತ್ರ್ಯದ ಹೊಂಬಿಸಿಲು
Team Udayavani, Aug 16, 2023, 1:11 AM IST
ಶ್ರೀನಗರ: ಕಣಿವೆ ರಾಜ್ಯದ ಜೇಲಂ, ಚೆನಾಬ್, ಸಿಂಧ್ ಸಹಿತ ಎಲ್ಲ ನದಿಗಳ ಜುಳು ಜುಳು ನಾದದಲ್ಲೂ ಮಂಗಳವಾರ ಕೇಳಿಬಂದದ್ದು ಭಾರತ್ ಮಾತಾ ಕೀ ಜೈ!
ನಿಜ. ಸುಮಾರು ಮೂವತ್ತು ವರ್ಷಗಳಿಂದ ಉಗ್ರ ವಾದದ ದಳ್ಳುರಿಯಲ್ಲಿ ನಲುಗಿದ ಕಾಶ್ಮೀರ ದಲ್ಲಿ 370ನೇ ವಿಧಿ ರದ್ದತಿಯ ಬಳಿಕ ಸುಧಾ ರಣೆಯ ಹೊಂಬಿಸಿಲು ಹೊಳೆಯುತ್ತಿದೆ. ಇದಕ್ಕೆ ಸಾಕ್ಷಿಯಾ ದದ್ದು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ.
ನಗರದ ಏಕೈಕ ಕ್ರೀಡಾಂಗಣವಾದ ಭಕ್ಷಿ ಸ್ಟೇಡಿಯಂ ನಲ್ಲಿ ಮೂರು ದಶಕಗಳಿಂದೀಚೆಗೆ ಕಾಣಿಸದ ಜನಸಂದಣಿ. ಕಾರಣ: 77ನೇ ಸ್ವಾತಂತ್ರ್ಯೋತ್ಸವ! ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ 1989ರ ಬಳಿಕ ಸ್ವಾತಂತ್ರ್ಯ ದಿನಾಚರಣೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡಿದ್ದು ಇದೇ ಮೊದಲ ಬಾರಿ. ಅಚ್ಚರಿ ಎಂಬಂತೆ ಸ್ಟೇಡಿಯಂ ಹೊರಗೆ ಜನರು ಸಾಲುಗಟ್ಟಿ ನಿಂತಿದ್ದರು. ಸುಮಾರು 10 ಸಾವಿರಕ್ಕೂ ಅಧಿಕ ಕಾಶ್ಮೀರಿಗರು ಸಂಭ್ರಮವನ್ನು ಕಣ್ತುಂಬಿಕೊಂಡದ್ದು ವಿಶೇಷ.
ಕಾಶ್ಮೀರದಲ್ಲಿ ಎಂದೂ ಊಹಿಸಲಾಗದ ಘಟನೆ ನಡೆಯುತ್ತಿದೆ. ಸ್ವಾತಂತ್ರ್ಯ ದಿನವನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಿರು ವುದನ್ನು ಇಲ್ಲಿಯವರೆಗೆ ನನ್ನ ಜೀವನದಲ್ಲಿ ಕಂಡಿರಲಿಲ್ಲ.
– ಷಾ ಫೈಸಲ್, ಐಎಎಸ್ ಅಧಿಕಾರಿ
ಭಾರತೀಯರಾಗಿಯೇ ಇರುತ್ತೇವೆ
ಉಗ್ರಗಾಮಿ ಜಾವೆದ್ ಮಟ್ಟೂ ಅವರ ಸೋದರ ರಯೀಸ್ ಮಟ್ಟೂ ಅವರು ತ್ರಿವರ್ಣ ಧ್ವಜ ಹಿಡಿದುಕೊಂಡ ವೀಡಿಯೋ ಆಗಸ್ಟ್ 14ರಂದು ಸುದ್ದಿಯಾಗಿತ್ತು. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, “ಭಾರತವು ಅಭಿವೃದ್ಧಿಯಾಗುತ್ತಿದೆ. ನನ್ನ ಸಹೋದರ ಒಂದು ವೇಳೆ ಬದುಕಿದ್ದರೆ ಭಾರತಕ್ಕೆ ಹಿಂದಿರುಗಲು ಕೇಳಿಕೊಳ್ಳುತ್ತೇನೆ. ನಾವು ಭಾರತೀಯರಾಗಿದ್ದೆವು, ಭಾರತೀಯರಾಗಿಯೇ ಇರುತ್ತೇವೆ’ ಎಂದಿರುವುದು ಸುಧಾರಣೆಯ ಪರ್ವಕ್ಕೆ ಹೊಸ ಅಧ್ಯಾಯದಂತಿದೆ.
ಪರೇಡ್ ನೋಡಲು ಹಲವು ವರ್ಷಗಳಿಂದ ಕಾಯುತ್ತಿದ್ದೆ. ಸಮಾರಂಭದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು ಎಂದು ಘೋಷಣೆಯಾದ ತತ್‌ಕ್ಷಣ ಇದರಲ್ಲಿ ಭಾಗವಹಿಸಲು ನಿಶ್ಚಯಿಸಿದ್ದೆ.
– ಶಾಯಿಸ್ತಾ ಬಾನು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.