ರಿಯಲ್‌ ಹೀರೋ ವೀರಪ್ಪ : ವೃತ್ತಿ, ರೈಲ್ವೆ ಸಹಾಯಕ ಪ್ರವೃತ್ತಿ ಶಿಕ್ಷಕ!


Team Udayavani, Jan 12, 2021, 1:08 PM IST

ರಿಯಲ್‌ ಹೀರೋ ವೀರಪ್ಪ :  ವೃತ್ತಿ, ರೈಲ್ವೆ ಸಹಾಯಕ ಪ್ರವೃತ್ತಿ ಶಿಕ್ಷಕ!

ಬಹುತೇಕರು ಸರ್ಕಾರಿ ನೌಕರಿಗೆ ಸೇರಿದ ಮೇಲೆ ನಮ್ಮ ‘ಲೈಫ್ ಸೆಟ್ಲ’ ಆಯ್ತು ಎಂದು ನಿಟ್ಟುಸಿರು ಬಿಡುತ್ತಾರೆ. ಆನಂತರದಲ್ಲಿ
ಅವರುಂಟು, ಅವರ ಸಂಸಾರ- ನೌಕರಿ ಉಂಟು. ಅಷ್ಟೇ ಅವರ ಪ್ರಪಂಚ ಆಗಿಬಿಡುತ್ತದೆ. ಈ ವೃತ್ತಿ ಬದುಕಿನಾಚೆ ನಮಗೆ ಇನ್ನೊಂದು ಸಾಮಾಜಿಕ ಜವಾಬ್ದಾರಿ ಇದೆ ಎಂದು ಯೋಚಿಸುವವರು ಅಪರೂಪ. ವಾಸ್ತವ ಹೀಗಿರುವಾಗ, ವೃತ್ತಿಯಿಂದ
‘ರೈಲ್ವೆ ಸಿಗ್ನಲ್‌ ಮ್ಯಾನ್‌’ ಆಗಿರುವ ವೀರಪ್ಪ ತಾಳದವರ, ಪ್ರವೃತ್ತಿಯಿಂದ ‘ಸ್ಕೂಲ್‌ ಮಾಸ್ತರ್‌’ ಆಗಿಯೂ ಕೆಲಸ ಮಾಡುತ್ತಿದ್ದಾರೆ.

ವೀರಪ್ಪ, ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ಲ ಗ್ರಾಮದವರು. ಬಾಗಲಕೋಟೆಯಲ್ಲಿ ರೈಲ್ವೆ ಇಲಾಖೆಯ
ಸಹಾಯಕ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುವ ಅವರು, ನಾನೊಬ್ಬನೇ ಚನ್ನಾಗಿ ಜೀವನ ನಡೆಸಿದರೆ ಸಾಲದು, ನನ್ನಂತೆ
ಇತರರೂ ನೆಮ್ಮದಿಯ ಬದುಕು ನಡೆಸಬೇಕು ಎನ್ನುತ್ತಾರೆ. ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಸದಾಶಯದಿಂದ ಹೊಸ
ಯೋಜನೆಯೊಂದನ್ನು ರೂಪಿಸಿದ್ದಾರೆ. ಅದುವೇ ಹಳ್ಳಿ ರಂಗಶಾಲೆ ಎಲ್ಲವೂ ಉಚಿತ!

ಇದನ್ನೂ ಓದಿ:ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಡೋಸ್ ಲಸಿಕೆ: ಸಚಿವ ಡಾ.ಕೆ.ಸುಧಾಕರ್

“ಊರಿನ ಎಲ್ಲಾ ಮಕ್ಕಳೂ ಅಕ್ಷರ ಕಲಿಯಬೇಕು. ಶಾಲೆಯಲ್ಲಿ ಓದಿದರೂ ಅದೆಷ್ಟೋ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ
ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಒಂದು ವೇದಿಕೆ ಒದಗಿಸಬೇಕೆಂಬ ಆಸೆಯಿತ್ತು. ಹೀಗಾಗಿ, ಅಕ್ಷರ ಕಲಿಕೆಯ ಜೊತೆಗೆ ಸಾಮಾನ್ಯ ಜ್ಞಾನ, ಕಥೆ, ಕವನ, ಚಿತ್ರಕಲೆ, ಹಾಡು, ಜಾನಪದ ಕಲೆ…

ಮುಂತಾದ ವಿಭಾಗದಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಹಳ್ಳಿ ರಂಗ ಶಾಲೆಯಲ್ಲಿ ಉಚಿತವಾಗಿ ತರಬೇತಿ ನೀಡುತ್ತಿರುವೆ’ ಎನ್ನುತ್ತಾರೆ ವೀರಪ್ಪ. ವೀರಪ್ಪ ಅವರ ರೈಲ್ವೆ ಇಲಾಖೆಯ ಕೆಲಸ ಸಂಜೆ 7ಗಂಟೆಗೆ ಮುಗಿಯುತ್ತದೆ. ಆನಂತರ ರಾತ್ರಿ 9 ಗಂಟೆಯವರೆಗೆ ಮಕ್ಕಳಿಗೆ ಪಾಠ ಮಾಡುತ್ತಾರೆ. ಈ ಕಾರ್ಯದಲ್ಲಿ ವೀರಪ್ಪ ಅವರಿಗೆ ಗೆಳೆಯರೂ ಸಾಥ್‌ ಕೊಡುತ್ತಿದ್ದಾರೆ. ವೀರಪ್ಪ ಅವರು “ಹಳ್ಳಿ ರಂಗಶಾಲೆ’ ನಡೆಸುತ್ತಿರುವುದು ತಮ್ಮ ಮನೆಯ ಕೋಣೆಯಲ್ಲಿ. ಮಕ್ಕಳಿಗೆ ಸಾಮಾನ್ಯ ಜ್ಞಾನ, ಬೇಸಿಕ್‌ ಕಲಿಕೆಯ ಜೊತೆಗೆ ಹಾಡು, ಭಾಷಣ,
ನೃತ್ಯ, ಕವಾಯತ್‌ ಕಲಿಸುತ್ತಾರೆ. ವೀರಪ್ಪ ಅವರು ಕವಿ, ಬರಹಗಾರ ಮತ್ತು ಛಾಯಾಗ್ರಹಕ ಕೂಡ ಹೌದು. ಹೀಗಾಗಿ ಮಕ್ಕಳಿಂದ ಕವಿತೆಗಳನ್ನು ಓದಿಸುತ್ತಾರೆ. ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಾರೆ., ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಮಾಹಿತಿ ನೀಡುತ್ತಾರೆ. ಹೀಗೆ ಮಾಡುವುದರಿಂದ, ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಕ್ಕಳಿಗೆ ಅನುಕೂಲ ಆಗುತ್ತದೆ ಎಂಬುದು ಅವರ ಮಾತು.

ಎಲ್ಲಾ ಮಕ್ಕಳಿಗೂ ಸಮವಸ್ತ್ರ “ಹಳ್ಳಿ ರಂಗಶಾಲೆ’ಯಲ್ಲಿ ಎಲ್ಲಾ ಮಕ್ಕಳಿಗೂ ಪ್ರತ್ಯೇಕ ಸಮವಸ್ತ್ರ ಇವೆ. ಒಂದಷ್ಟು ಹಣವನ್ನು
ದಾನಿಗಳು ನೀಡಿದ್ದಾರೆ. ಉಳಿದ ಹಣವನ್ನು ವೀರಪ್ಪ ಆವರೇ ಹಾಕಿ ಸಮವಸ್ತ್ರ ಖರೀದಿಸಿ ಅವನ್ನು ಹಳ್ಳಿ ರಂಗಶಾಲೆಯ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಕರ್ನಾಟಕ ರಾಜೋತ್ಸವ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ  ಆಚರಿಸುತ್ತಾರೆ. ಹಳ್ಳಿ ರಂಗಶಾಲೆಯ ಚಟುವಟಿಕೆ ಗದಗ ಜಿಲ್ಲಾದ್ಯಂತ ಮನೆ ಮಾತಾಗಿದೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಕೂಡ ಮನೆ ಮನೆಗೆ ತೆರಳಿ ಹೋಮ್‌ ವರ್ಕ್‌ ಕೊಟ್ಟು ಮಕ್ಕಳ ಕಲಿಕೆಗೆ
ಬ್ರೇಕ್‌ ಬೀಳದಂತೆ ನೋಡಿಕೊಂಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ನಗರಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಳ್ಳಿಯಲ್ಲಿಯೇ ತರಬೇತಿ ದೊರಕುವಂತೆ ಮಾಡುವುದು ಅವರ ಮುಂದಿನ ಗುರಿಯಂತೆ. ಸೇವೆಯೇ ಜೀವನ ಎಂದು ನಂಬಿರುವ ಇಂಥವರ ಸಂಖ್ಯೆ ಹೆಚ್ಚಲಿ.

– ಬಾಲಾಜಿ ಕುಂಬಾರ, ಚಟ್ನಾಳ

 

ಟಾಪ್ ನ್ಯೂಸ್

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.