Manipur: ಮಾಮೂಲಿ ಟ್ರಕ್‌ಗಳಿಗೆ ಸೇನೆ ಮಾದರಿ ಬಣ್ಣ ಬಳಿದ ಬಂಡುಕೋರರು!
ಸಂಘರ್ಷ ಪೀಡಿತ ಮಣಿಪುರದಲ್ಲಿ ಅಚ್ಚರಿಯ ಬೆಳವಣಿಗೆ - ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಅಸ್ಸಾಂ ರೈಫಲ್ಸ್ ಪತ್ರ
Team Udayavani, Sep 24, 2023, 10:14 PM IST
ಇಂಫಾಲ್: ಸಂಘರ್ಷ ಪೀಡಿತ ಮಣಿಪುರದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಅರೆಸೇನಾಪಡೆಯ ವಾಹನಗಳ ಮಾದರಿಯಲ್ಲೇ ಬಣ್ಣ ಬಳಿದಿರುವಂಥ ಹಲವಾರು ವಾಹನಗಳು ಪತ್ತೆಯಾಗಿವೆ. ಕಾಕ್‌ಚಿಂಗ್ ಜಿಲ್ಲೆಯಲ್ಲಿ ಇಂತಹ ಅನೇಕ ಟ್ರಕ್‌ಗಳು ಕಂಡುಬಂದಿದ್ದು, ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಮಣಿಪುರ ಪೊಲೀಸರಿಗೆ ಅಸ್ಸಾಂ ರೈಫಲ್ಸ್ ಪತ್ರ ಬರೆದಿದೆ.
ಕಣಿವೆ ಮೂಲದ ಬಂಡುಕೋರರು ಗುಂಪುಗಳ ಸಹಾಯದಿಂದ ಕೆಲವು ದುಷ್ಕರ್ಮಿಗಳು ಮಾರುಕಟ್ಟೆಯಿಂದ ಹಲವು ಟ್ರಕ್‌ಗಳನ್ನು ಖರೀದಿಸಿ, ಅವುಗಳಿಗೆ ಸೇನೆಯ ಮಾದರಿಯ ಬಣ್ಣಗಳನ್ನು ಹಚ್ಚಿದ್ದಾರೆ. ಜತೆಗೆ ಅಸ್ಸಾಂ ರೈಫಲ್ಸ್‌ನ ಲಾಂಛನವನ್ನೂ ಅಳವಡಿಸಿದ್ದಾರೆ. ನಾಗರಿಕ ವಾಹನಗಳನ್ನು ಸೇನಾ ವಾಹನಗಳಾಗಿ ಕಾಣುವಂತೆ ಬದಲಾಯಿಸಿದ್ದಾರೆ. ಇವುಗಳನ್ನು ಬಳಸಿಕೊಂಡು ದೇಶವಿರೋಧಿ ಕೃತ್ಯಗಳನ್ನು ನಡೆಸುವ ಅಪಾಯವಿದೆ ಎಂದು ಚುರಾಚಾಂದ್‌ಪುರ ಎಸ್‌ಪಿಗೆ ಬರೆದ ಪತ್ರದಲ್ಲಿ ಅಸ್ಸಾಂ ರೈಫಲ್ಸ್ ಕಳವಳ ವ್ಯಕ್ತಪಡಿಸಿದೆ. ಜತೆಗೆ, ಕೂಡಲೇ ಎಚ್ಚೆತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಸಂಭಾವ್ಯ ವಿಧ್ವಂಸಕ ಕೃತ್ಯವನ್ನು ತಪ್ಪಿಸುವಂತೆಯೂ ಮನವಿ ಮಾಡಿದೆ.
ಸತತ 4 ತಿಂಗಳಿಂದಲೂ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಈವರೆಗೆ 175ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamilnadu: ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು
Social Media A/c: ಮಕ್ಕಳ ಸೋಷಿಯಲ್ ಮೀಡಿಯಾ ಖಾತೆಗೆ ಹೆತ್ತವರ ಒಪ್ಪಿಗೆ ಕಡ್ಡಾಯ?
Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್ ಶವವಾಗಿ ಪತ್ತೆ!
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
Constitution; ಕೈ ಜೈ ಸಂವಿಧಾನ ಅಭಿಯಾನಕ್ಕೆ ಬಿಜೆಪಿಯಿಂದ ಪ್ರತ್ಯಭಿಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
Tamilnadu: ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು
Interview: ಚಿತ್ರ ಒಳ್ಳೆಯದಿದ್ರೆ ಪ್ರೇಕ್ಷಕರು ಕೈಹಿಡಿಯುತ್ತಾರೆ; ದಸ್ಕತ್ ನಿರ್ದೇಶಕ ಅನೀಶ್
Social Media A/c: ಮಕ್ಕಳ ಸೋಷಿಯಲ್ ಮೀಡಿಯಾ ಖಾತೆಗೆ ಹೆತ್ತವರ ಒಪ್ಪಿಗೆ ಕಡ್ಡಾಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.