Japan: ಜಪಾನ್‌ನಲ್ಲಿ ಆರ್ಥಿಕ ಹಿಂಜರಿತ: 3ನೇ ಆರ್ಥಿಕತೆಯಿಂದ 4ಕ್ಕೆ ಕುಸಿತ
ಜಪಾನ್‌ನ ಸ್ಥಾನವನ್ನು ಆಕ್ರಮಿಸಿಕೊಂಡ ಜರ್ಮನಿ
Team Udayavani, Feb 15, 2024, 9:00 PM IST
ಟೋಕಿಯೋ: ಇದುವರೆಗೆ ವಿಶ್ವದ 3ನೇ ಬೃಹತ್ ಆರ್ಥಿಕತೆಯಾಗಿದ್ದ ಜಪಾನ್ ಈಗ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ್ದು, 4ನೇ ಸ್ಥಾನಕ್ಕೆ ಕುಸಿದಿದೆ.
ಪ್ರಸ್ತುತ ಇಡೀ ಜಗತ್ತಿನಲ್ಲಿ ಆರ್ಥಿಕ ಹಿಂಜರಿತದ ಸ್ಥಿತಿಯಿದೆ. 2023ರಲ್ಲಿ ಒಟ್ಟಾರೆಯಾಗಿ ಜಪಾನ್ ಜಿಡಿಪಿಯಲ್ಲಿ ಶೇ.1.9 ಏರಿಕೆಯಾಗಿದೆ. ಆದರೆ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಶೇ.0.4, ಅದಕ್ಕೂ ಮುಂಚಿನ ಜುಲೈ-ಸೆಪ್ಟೆಂಬರ್‌ನಲ್ಲಿ ಶೇ.2.9ರಷ್ಟು ಕುಸಿತವಾಗಿತ್ತು. ಸತತ ಎರಡು ತ್ತೈಮಾಸಿಕಗಳ ಕುಸಿತವನ್ನು ನೋಡಿದಾಗ, ಜಪಾನ್ ತಾಂತ್ರಿಕವಾಗಿ ಹಿಂಜರಿತಕ್ಕೆ ತುತ್ತಾಗಿದೆ ಎಂದು ಹೇಳಲಾಗಿದೆ. 2010ರವರೆಗೆ ವಿಶ್ವದ 2ನೇ ಬೃಹತ್ ಆರ್ಥಿಕತೆಯಾಗಿದ್ದ ಜಪಾನ್ ನಂತರ 3ಕ್ಕೆ ಕುಸಿದಿತ್ತು. ಚೀನಾ 2ನೇ ಸ್ಥಾನ ಪಡೆದುಕೊಂಡಿತ್ತು. ಈಗ ಜಪಾನ್ 3ನೇ ಸ್ಥಾನವನ್ನೂ ಕಳೆದುಕೊಂಡು, ಅದನ್ನು ಜರ್ಮನಿಗೆ ಬಿಟ್ಟುಕೊಟ್ಟಿದೆ.
ಕಾರಣವೇನು?
– ಡಾಲರ್ ಎದುರು ಜಪಾನಿನ ಯೆನ್ ಮೌಲ್ಯ ಕುಸಿತ
– ಜನಸಂಖ್ಯೆಯಲ್ಲಾದ ತೀವ್ರ ಕುಸಿತ
– ಇಳಿಮುಖವಾದ ಉತ್ಪಾದಕತೆ
– ದೇಶದ ಸ್ಪರ್ಧಾಶಕ್ತಿ ಕಡಿಮೆಯಾಗಿದ್ದು
ಬ್ರಿಟನ್‌ಗೂ ಹಿಂಜರಿತದ ಬಿಸಿ
ಲಂಡನ್: ಜಗತ್ತಿನ 6ನೇ ಬೃಹತ್ ಆರ್ಥಿಕತೆಯಾಗಿರುವ ಬ್ರಿಟನ್ ಕೂಡ ಆರ್ಥಿಕ ಹಿಂಜರಿತಕ್ಕೆ ತುತ್ತಾಗಿದೆ. ಈ ವರ್ಷಾಂತ್ಯಕ್ಕೆ ರಾಷ್ಟ್ರೀಯ ಚುನಾವಣೆಗೆ ಸಿದ್ಧವಾಗುತ್ತಿರುವ ಪ್ರಧಾನಿ ರಿಷಿ ಸುನಕ್‌ಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. 2023 ಅಕ್ಟೋಬರ್-ಡಿಸೆಂಬರ್ ತ್ತೈಮಾಸಿಕದಲ್ಲಿ ಬ್ರಿಟನ್ ಜಿಡಿಪಿ ಶೇ.0.1 ಕುಸಿತಕ್ಕೊಳಗಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಮೀರಿ ಶೇ.0.3ರಷ್ಟು ಕುಸಿದಿದೆ. ಜುಲೈ-ಸೆಪ್ಟೆಂಬರ್‌ನಲ್ಲೂ ಶೇ.0.1 ಕುಸಿತವಾಗಿತ್ತು. ಸತತ 2ನೇ ತ್ತೈಮಾಸಿಕದಲ್ಲಿ ಕುಸಿತ ಕಂಡಿದ್ದು, ಬ್ರಿಟನ್ ಸರ್ಕಾರವನ್ನು ಕಂಗೆಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.