ಕೆಂಪು ಕಲ್ಲು ಗಣಿಗಾರಿಕೆ : ಮೂಡುಗಲ್ಲು ‘ಗುಹಾಂತರ’ ದೇಗುಲಕ್ಕೆ ಆಪತ್ತು
Team Udayavani, Mar 10, 2022, 12:25 PM IST
ಕುಂದಾಪುರ : ಕೆರಾಡಿ ಗ್ರಾಮದ ಮೂಡುಗಲ್ಲು ಎಂಬಲ್ಲಿ ಗುಹಾಂತರ ದೇಗುಲವಿದ್ದು ಕೆಂಪು ಕಲ್ಲು ಗಣಿಗಾರಿಕೆಯಿಂದ ದೇಗು ಲಕ್ಕೆ ಆಪತ್ತು ಎದು ರಾಗಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಪ್ರಕೃತಿಯ ವಿಸ್ಮಯದಂತೆ ಕಂಡು ಬರುವ ಈ ಸಹಜ, ಸುಂದರ ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೂ ಈಗ ಕಂಟಕ ಎದುರಾದಂತಿದೆ. ಈ ದೇವಸ್ಥಾನದ ತುಸು ದೂರದಲ್ಲಿಯೇ ಭಾರೀ ಪ್ರಮಾಣದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಈ ಗಣಿಗಾರಿಕೆ ನಡೆಯುತ್ತಿದೆ.
ಅಕ್ರಮವೋ? ಸಕ್ರಮವೋ?: ಇದು ಅಕ್ರಮವೋ ಅಥವಾ ಸಕ್ರಮವೋ ಎನ್ನುವ ಬಗ್ಗೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದಾಗ, ಕಳೆದ ವರ್ಷ ಇಲ್ಲಿ
ಪಟ್ಟ ಜಾಗದಲ್ಲಿ ಕೃಷಿ ಉದ್ದೇಶಕ್ಕಾಗಿ ಮಾತ್ರ ಅನುಮತಿ ನೀಡಲಾಗಿದೆ. ಅದು ಒಂದು ಅಡಿ ಕಲ್ಲು ತೆಗೆದು, ಕೃಷಿ ಮಾಡಲು ಅವಕಾಶ ನೀಡಲಾಗಿದೆ.
ಆದರೆ ಇಲ್ಲಿ ಈಗ ಹಲವರ ಜಾಗದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಮತ್ತೂಂದು ಮುಖ್ಯವಾದ ವಿಚಾರವೆಂದರೆ ಈಗ ಗಣಿಗಾರಿಕೆ ನಡೆಯುತ್ತಿರುವ ಬಹುಪಾಲು ಜಾಗಗಳಿಗೆ ಅವರ ಹೆಸರಲ್ಲಿ ದಾಖಲೆಯೇ ಇಲ್ಲ. ಅಂದರೆ ಅದು ಖಾಸಗಿ ಜಾಗವಲ್ಲ. ಸರಕಾರಿ ಅಧೀನದ ಜಾಗ. ಹಾಗಾದರೆ ಇದು ಹೇಗೆ ಸಕ್ರಮ ಆಗುತ್ತದೆ. ಇದು ಅಕ್ರಮ ಅಲ್ಲವಾ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಡಿಸಿ ಕಣ್ಣು, ಮುಚ್ಚಿ ಕುಳಿತಿದ್ದಾರೆಯೇ ಎನ್ನುವುದು ದೇಗುಲದ ಭಕ್ತರ ಪ್ರಶ್ನೆ.
ಅಧಿಕಾರಿಗಳುಕೃಷಿ ಅಭಿವೃದ್ಧಿಗಾಗಿ ಇಲ್ಲಿ ಒಂದಡಿ ಕಲ್ಲು ತೆಗೆಯಲು ಮಾತ್ರ ಅನುಮತಿನೀಡಿರುವುದು. ಆದರೆ ಇಲ್ಲಿ ಒಂದಲ್ಲ, 10ಕ್ಕಿಂತ ಹೆಚ್ಚು ಅಡಿಗಳವರೆಗೆ ಕಲ್ಲುಗಳನ್ನು ತೆಗೆದು, ಸಾಗಿಸಲಾಗಿದೆ. ಅದು ಒಂದೇ ಜಾಗ ಮಾತ್ರವಲ್ಲ, ಎಕರೆಗಟ್ಟಲೆ ಜಾಗದಿಂದ ಕೆಂಪು ಕಲ್ಲು ತೆಗೆಯಲಾಗಿದೆ.
ರಸ್ತೆ ಧೂಳುಮಯ: ಈ ದೇವಸ್ಥಾನವನ್ನು ಸಂಪರ್ಕಿಸುವ ಸುಮಾರು 3 ಕಿ.ಮೀ. ದೂರದ ಮಣ್ಣಿನ ರಸ್ತೆಯು ನಿತ್ಯ ಸಂಚರಿಸುವ ಹತ್ತಾರು ಕೆಂಪು ಕಲ್ಲು ಸಾಗಾಟದ ವಾಹನಗಳಿಂದಾಗಿ ಸಂಪೂರ್ಣ ಧೂಳುಮಯವಾಗಿದೆ.
ಇದನ್ನೂ ಓದಿ : ಕಾರ್ಕಳ ಉತ್ಸವಕ್ಕೆ ಇಂದು ಚಾಲನೆ, ಸಾಂಸ್ಕೃತಿಕ ಲೋಕ ಅನಾವರಣ
ಅನುಮತಿ ಕೊಟ್ಟದ್ದು ಹೇಗೆ
ರಸ್ತೆ ಅಭಿವೃದ್ಧಿಯ ಜತೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ, ಮೀಸಲು ಅರಣ್ಯ ಪ್ರದೇಶ ನಿಯಮ ಎನ್ನುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಅಡ್ಡಗಾಲು ಹಾಕುತ್ತಾರೆ. ನಿಯಮದ ಪ್ರಕಾರ ಮೀಸಲು ಅರಣ್ಯದ 10 ಕಿ.ಮೀ. ದೂರದವರೆಗೆ ಗಣಿಗಾರಿಕೆಗೆ ಅನುಮತಿಯಿಲ್ಲ. ಹಾಗಾದರೆ ಇಲ್ಲಿ ಅದು ಹೇಗೆ ಕೆಂಪು ಕಲ್ಲು ಗಣಿಗಾರಿಕೆಗೆ ಅನುಮತಿ ಸಿಕ್ಕಿದೆ. ತತ್‌ಕ್ಷಣ ಗಣಿಗಾರಿಕೆ ನಿಲ್ಲಿಸಿ, ದೇವಸ್ಥಾನವನ್ನು ಕಾಪಾಡಿ ಎನ್ನುವುದು ಊರವರ ಆಗ್ರಹವಾಗಿದೆ.
ದೇವಸ್ಥಾನಕ್ಕೆ ಹೇಗೆ ತೊಂದರೆ?
ಇಲ್ಲಿ ಈಶ್ವರ ಲಿಂಗಕ್ಕೆ ಕಲ್ಲಿನಿಂದ ನಿರ್ಮಿತವಾದ ಗುಹೆಯೇ ಆಲಯ. ಗುಹೆಯೊಳಗೆ ಸುಮಾರು 20 ಅಡಿಗಳಷ್ಟು ವಿಶಾಲ ಜಾಗದಲ್ಲಿ ಎಲ್ಲ ಕಾಲದಲ್ಲಿಯೂ ಮೊಣಕಾಲಿನಷ್ಟು ಪನ್ನೀರಿನಂತಹ ನೀರು ಇಲ್ಲಿ ಹರಿಯುತ್ತಿರುತ್ತದೆ. ಇಲ್ಲಿನ ಹಿರಿಯರೊಬ್ಬರು ಹೇಳುವ ಪ್ರಕಾರ ಇದು ಇಡೀ ಮೂಡಗಲ್ಲು ಪರಿಸರದಾದ್ಯಂತ ಏಕ ಶಿಲೆಯಾಗಿದೆ. ಸುಮಾರು ದೂರದವರೆಗೆ ಈ ಕಲ್ಲು ವ್ಯಾಪಿಸಿದೆ. ಈಗ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಲ್ಲಿ 30-40 ಅಡಿ ಆಳದವರೆಗೆ ಹೊಂಡ ಮಾಡಿದರೆ, ದೇವಸ್ಥಾನದಲ್ಲಿರುವ ನೀರು ಬತ್ತುವ ಸಾಧ್ಯತೆಗಳು ಇವೆ. ಅಲ್ಲಿ ಆಳವಾದಷ್ಟು, ದೇಗುಲದ ನೀರಿನ ಮಟ್ಟ ಆಳಕ್ಕೆ ಇಳಿದು, ಮುಂದೊಂದು ದಿನ ನೀರು ಸಂಪೂರ್ಣ ಬತ್ತಿ ಹೋಗುವ ಅಪಾಯವೂ ಇದೆ ಎನ್ನುವ ಆತಂಕ ಭಕ್ತರದು.
ವರದಿ ತರಿಸಿಕೊಂಡು ಕ್ರಮ
ಮೂಡುಗಲ್ಲು ಗಣಿಗಾರಿಕೆ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ಸಂಬಂಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆಗೆ ಕಳುಹಿಸಲಾಗಿದೆ. ಅವರಿಂದ ವರದಿ ತರಿಸಿಕೊಂಡು, ಸೂಕ್ತ ಕ್ರಮಕೈಗೊಳ್ಳಲಾಗುವುದು. ಅಲ್ಲಿ ಕೃಷಿ ಉದ್ದೇಶಕ್ಕೆ ಷರತ್ತುಗಳನ್ವಯ ಖಾಸಗಿ ಜಾಗದಲ್ಲಿ ಮಾತ್ರ ಅನುಮತಿ ನೀಡಲಾಗಿದೆ. ದೇವಸ್ಥಾನಕ್ಕೆ ತೊಂದರೆಯಾಗುವ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮಕೈಗೊಳ್ಳಲಾಗುವುದು.
– ಕೂರ್ಮಾ ರಾವ್ ಎಂ., ಉಡುಪಿ ಜಿಲ್ಲಾಧಿಕಾರಿ
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.