ಒತ್ತಡ ನಿವಾರಿಸುವ ನೌಕಾಸನ
ಉಸಿರೆಳೆದುಕೊಂಡು ನಿಧಾನವಾಗಿ ಎದೆ ಹಾಗೂ ಪಾದವನ್ನು ನೆಲದ ಮೇಲಿಂದ ಎತ್ತಬೇಕು.
Team Udayavani, Aug 5, 2021, 2:36 PM IST
ರಕ್ತದೊತ್ತಡ, ತಲೆ ನೋವು, ನಿದ್ರಾಹೀನತೆ ಸಮಸ್ಯೆಯುಳ್ಳವರು ವಿಪರೀತ ದೈಹಿಕ, ಮಾನಸಿಕ ಒತ್ತಡವನ್ನು ಅನುಭವಿಸುತ್ತಿರುವವರು ರೂಢಿಸಿಕೊಳ್ಳಬೇಕಾದ ಆಸನಗಳಲ್ಲಿ ನೌಕಾಸನ ಪ್ರಮುಖವಾದದ್ದು. ಇದು ಎಲ್ಲ ರೀತಿಯ ಒತ್ತಡಗಳಿಂದ ಮನಸ್ಸನ್ನು ಮುಕ್ತಗೊಳಿಸುತ್ತದೆ.
ನೌಕಾಸನವು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲ. ಸುಲಭವಾಗಿ ಯಾರೂ ಬೇಕಾದರೂ ಇದನ್ನು ಮಾಡಬಹುದು. ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ ನಿತ್ಯದ ಅಭ್ಯಾಸದಿಂದ ಸುಲಭವಾಗುತ್ತದೆ. ಈ ಆಸನಕ್ಕೆ ಸಮತೋಲನತೆ ಬೇಕಾಗುತ್ತದೆ.
ಮಾಡುವ ವಿಧಾನ
ಯೋಗ ಮ್ಯಾಟಿನ ಮೇಲೆ ಕುಳಿತು ಎರಡೂ ತೋಳುಗಳು ದೇಹದ ಎರಡೂ ಬದಿಯಲ್ಲಿರಿ ಪಾದ ಗಳನ್ನು ಒಂದಕ್ಕೊಂದು ಜೋಡಿಸಬೇಕು. ದೀರ್ಘವಾದ ಉಸಿರೆಳೆದುಕೊಂಡು ನಿಧಾನವಾಗಿ ಎದೆ ಹಾಗೂ ಪಾದವನ್ನು ನೆಲದ ಮೇಲಿಂದ ಎತ್ತಬೇಕು. ಹೀಗೆ ಮಾಡುವಾಗ ಕೈಗಳನ್ನು ಚಾಚಿರಬೇಕು. ಪರಿಣಾಮ ಹೊಟ್ಟೆಯ ಹಿಗ್ಗುವಿಕೆಯ ಅನುಭವವಾಗಬೇಕು.
ಬೆರಳುಗಳು ನೇರವಾಗಿರಲಿ. ಕಣ್ಣುಗಳ ದೃಷ್ಟಿಯೂ ನೇರವಾಗಿರಬೇಕು. ಇದೇ ಭಂಗಿಯಲ್ಲಿ ಕೆಲ ಕಾಲವಿದ್ದು ನಿಧಾನಕ್ಕೆ ಮೊದಲಿನ ಸ್ಥಿತಿಗೆ ತಲುಪ ಬೇಕು. ಈ ರೀತಿ ದಿನಕ್ಕೆ 4- 5 ಬಾರಿ ಅಭ್ಯಾಸ ಮಾಡುವುದರಿಂದ ದೇಹಾರೋಗ್ಯಕ್ಕೆ ಉತ್ತಮ ಲಾಭವಿದೆ.
ನೌಕಾಸನವನ್ನು ನಿತ್ಯ ಮಾಡುವುದರಿಂದ ಕಿಬ್ಬೊಟ್ಟೆ, ತೋಳು, ಭುಜಗಳು ಶಕ್ತಿಯುತವಾಗು ತ್ತದೆ. ತೊಡೆ, ಕಾಲುಗಳು, ಸ್ನಾಯುಗಳಿಗೆ ಸದೃಢತೆ ಸಿಗುವುದು. ಪಚನ ಕ್ರಿಯೆ ಉತ್ತ ಮಗೊಂಡು ಮಲಬದ್ಧತೆ ನಿವಾರಣೆಯಾಗುತ್ತದೆ. ಮನಸ್ಸಿಗೆ ಆರಾಮ ದೊರೆಯುತ್ತದೆ. ಬೆನ್ನು, ತಲೆ ನೋವು, ಮೈಗ್ರೇನ್, ಕಡಿಮೆ ರಕ್ತದೊತ್ತಡದ ಸಮಸ್ಯೆ ಇರುವವರು ಈ ಆಸನವನ್ನು ಮಾಡಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.