ರೆಗ್ಯುಲರ್ ಸಂಚಾರ ಮುಂದಿನ ತಿಂಗಳು?
ಪ್ರಯಾಣಿಕರ ಕೊರತೆ: ಬಸ್‌ನಲ್ಲಿ ಸಾಮಾಜಿಕ ಅಂತರ
Team Udayavani, May 17, 2020, 6:00 AM IST
ಉಡುಪಿ: ಜಿಲ್ಲಾಡಳಿತ ಬಸ್ಸುಗಳನ್ನು ಓಡಿಸಲು ಅನುವು ಮಾಡಿಕೊಟ್ಟರೂ ಪ್ರಯಾಣಿಕರ ಕೊರತೆ ಇರುವುದರಿಂದ ಆರಂಭಗೊಂಡ ಬೆರಳೆಣಿಕೆ ಬಸ್ಸುಗಳು ಸಂಚರಿಸುತ್ತಿದ್ದು ಹೊಸ ಬಸ್ಸುಗಳು ರಸ್ತೆಗಿಳಿದಿಲ್ಲ.
ಕೆಎಸ್ಸಾರ್ಟಿಸಿ ಬಸ್ಸುಗಳು ಉಡುಪಿ- ಕುಂದಾಪುರ, ಕುಂದಾಪುರ-ಬೈಂದೂರು, ಉಡುಪಿ- ಜಿಲ್ಲಾಧಿಕಾರಿ ಕಚೇರಿ ನಡುವೆ ಸಂಚರಿಸುತ್ತಿವೆ. ಇದೀಗ ಉಡುಪಿ- ಹೆಜಮಾಡಿ ನಡುವೆ ಓಡಾಡಿವೆ.
ಪ್ರಯಾಣಿಕರಿಲ್ಲದಿದ್ದರೆ ಬಸ್ಸುಗಳನ್ನು ಓಡಿಸಿಯೂ ಪ್ರಯೋಜನವಿಲ್ಲ ಎಂದು ಕೆಎಸ್ಸಾರ್ಟಿಸಿ ಉಡುಪಿ ಡಿಪೋ ಮೆನೇಜರ್ ಉದಯಕುಮಾರ್ ಶೆಟ್ಟಿ ತಿಳಿಸಿದರು.
ಕರಾವಳಿ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಮಾಲಕತ್ವದ ಭಾರತೀ ಮೋಟಾರ್ ಉಡುಪಿ- ಕುಂದಾಪುರ ನಡುವೆ ಮಾತ್ರ ಸಂಚರಿಸುತ್ತಿವೆ. “ಕೊಲ್ಲೂರಿಗೆ ನಾವು ಬಸ್ಸುಗಳನ್ನು ಓಡಿಸಬಹುದಾದರೂ ಕೊಲ್ಲೂರು ದೇವಸ್ಥಾನ ತೆರೆಯದಿದ್ದರೆ ಅಲ್ಲಿಗೆ ಯಾರೂ ಹೋಗುವುದಿಲ್ಲ. ಹೀಗಾಗಿ ನಾವು ಅಲ್ಲಿಗೆ ಬಸ್‌ಗಳನ್ನು ಓಡಿಸುತ್ತಿಲ್ಲ. ಇನ್ನು ಉಡುಪಿ-ಕುಂದಾಪುರ ನಡುವೆಯೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರಿಲ್ಲ’ ಎಂದು ರಾಘವೇಂದ್ರ ಭಟ್ ತಿಳಿಸಿದರು.
ಕೋವಿಡ್ 19 ಹಿನ್ನೆಲೆಯಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಾಗಿದೆ. ಸ್ಯಾನಿಟೈಸರ್ ಬಳಸುತ್ತಿದ್ದಾರೆ. ಪ್ರಯಾಣಿಕರು ಕಡಿಮೆ ಇರುವುದರಿಂದ ಸಹಜವಾಗಿಯೇ ಸಾಮಾಜಿಕ ಅಂತರ ಕಾಪಾಡಲಾಗುತ್ತಿದೆ.
ಬಸ್ಸುಗಳನ್ನು ರಸ್ತೆಗಿಳಿಸಲು ಬಸ್ ಮಾಲಕರು ಹಿಂದೇಟು ಹಾಕಲು ಇನ್ನೊಂದು ಕಾರಣ ಹಣಕಾಸು ಸಂಸ್ಥೆಗಳು ಕಂತುಗಳನ್ನು ಕಟ್ಟಲು ಒತ್ತಾಯಿಸುವುದು.
ಬಸ್ಸುಗಳು ನಷ್ಟದಲ್ಲಿ ಓಡುತ್ತಿರುವುದರಿಂದ ಈ ಮಾಸಾಂತ್ಯದ ವರೆಗೂ ಪರಿಸ್ಥಿತಿ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ.
“ಬೇಡಿಕೆ ಈಡೇರಿಸಲು ಮೀನಮೇಷ’
ಸರಂಡರ್ ಮಾಡದ ಬಸ್ಸುಗಳಿಗೆ ಎಪ್ರಿಲ್, ಮೇ, ಜೂನ್ ತಿಂಗಳ ತೆರಿಗೆಯನ್ನು ರಿಯಾಯಿತಿ ಮಾಡಲು ಕೋರಿದ್ದೇವೆ. ಸರಂಡರ್ ಮಾಡದ ಇರುವುದು ಕೇವಲ ಶೇ.15ರಷ್ಟು ಬಸ್ಸುಗಳು. ಒಡಿಶಾ, ಪಂಜಾಬ್‌ನಲ್ಲಿ ಎರಡು ಪಟ್ಟು ದರ ಹೆಚ್ಚಳ ಮಾಡಲು ಅನುಮತಿ ಕೊಟ್ಟಿದ್ದಾರೆ. ಜನರನ್ನು ಕಡಿಮೆ ಸಂಖ್ಯೆಯಲ್ಲಿ ಕರೆದೊಯ್ಯಬೇಕಾದರೆ ಈಗಿನ ದರದಲ್ಲಿ ಸಾಧ್ಯವಿಲ್ಲ. ನಾವು ಒಂದೂವರೆ ಪಟ್ಟು ಹೆಚ್ಚಿಗೆ ಮಾಡಲು ಕೇಳಿದ್ದೇವೆ. ಜುಲೈ, ಆಗಸ್ಟ್, ಸೆಪ್ಟಂಬರ್ ತಿಂಗಳ ತೆರಿಗೆಯನ್ನು ವರ್ಷಾಂತ್ಯಕ್ಕೆ ಪಾವತಿಸುವುದಾಗಿ ತಿಳಿಸಿದ್ದೇವೆ.
ಎರಡು ತಿಂಗಳ ವಿಮೆ ಸೌಲಭ್ಯವನ್ನು ವಿಸ್ತರಿಸಲು ಕೇಂದ್ರ ಸರಕಾರಕ್ಕೆ ಕೇಳಿದ್ದೇವೆ. ಇವೆಲ್ಲದಕ್ಕೂ ತಾತ್ವಿಕ ಒಪ್ಪಿಗೆ ದೊರಕಿದೆಯೇ ವಿನಾ ಆದೇಶವಿನ್ನೂ ಬಂದಿಲ್ಲ. ಪ್ರಾಯಃ ಮುಂದಿನ ತಿಂಗಳು ಬಸ್ಸುಗಳನ್ನು ಆರಂಭಿಸಬಹುದು ಎಂಬ ಅಭಿಪ್ರಾಯ ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ. ಸುರೇಶ ನಾಯಕ್ ಅವರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್ ಸಿಟಿʼ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.