Reliance: ರಿಲಯನ್ಸ್ ಇಂಡಸ್ಟ್ರೀಸ್ ಲಾಭ ಹೆಚ್ಚಳ
Team Udayavani, Oct 28, 2023, 12:00 AM IST
ಹೊಸದಿಲ್ಲಿ: ಸೆಪ್ಟಂಬರ್ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭ ಶೇ.27ರಷ್ಟು ಏರಿಕೆ ಕಂಡಿದ್ದು, 17,394 ಕೋಟಿ ರೂ.ಗೆ ತಲುಪಿದೆ. ತೈಲ ಮತ್ತು ಅನಿಲ ಉದ್ಯಮದಲ್ಲಿ ಆದ ಚೇತರಿಕೆಯೇ ನಿವ್ವಳ ಲಾಭ ಹೆಚ್ಚಳವಾಗಲು ಕಾರಣ ಎಂದು ಕಂಪೆನಿ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ 13,656 ಕೋಟಿ ರೂ. ಆಗಿತ್ತು.
ಇದೇ ವೇಳೆ, ರಿಲಯನ್ಸ್ ರಿಟೇಲ್ನ ಲಾಭವು ಶೇ.21ರಷ್ಟು ಏರಿಕೆಯಾಗಿ, 2,790 ಕೋಟಿ ರೂ.ಗೆ ತಲುಪಿದೆ. ಜುಲೈ-ಸೆಪ್ಟಂಬರ್ ಅವಧಿಯಲ್ಲಿ ಸಂಸ್ಥೆಯ ಕಾರ್ಯಾಚರಣ ಆದಾಯ 57,694 ಕೋಟಿ ರೂ.ಗೆ ಏರಿದೆ. ಇನ್ನು, ದೂರಸಂಪರ್ಕ ಸಂಸ್ತೆ ರಿಲಯನ್ಸ್ ಜಿಯೋ 5,058 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ.12ರಷ್ಟು ಏರಿಕೆ ಕಂಡುಬಂದಿದೆ. ಕಾರ್ಯಾಚರಣ ಆದಾಯವು ಶೇ.9.8 ಹೆಚ್ಚಳವಾಗಿ, 24,750 ಕೋಟಿ ರೂ.ಗೆ ತಲುಪಿರುವುದಾಗಿ ಕಂಪೆನಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.