ತುಳುನಾಡಿನಲ್ಲಿ ಸರಳ “ಬಿಸು ಪರ್ಬ’
Team Udayavani, Apr 15, 2020, 9:13 AM IST
ಮಂಗಳೂರು: ತುಳುನಾಡಿನಲ್ಲಿ “ಬಿಸು ಪರ್ಬ’ ಎಂದೇ ಮನೆಮಾತಾದ ವಿಷು ಹಬ್ಬವನ್ನು ಈ ಬಾರಿ ಕೊರೊನಾ ಹಿನ್ನೆಲೆಯೆಲ್ಲಿ ಮನೆಗಳಲ್ಲಿಯೇ ಅತ್ಯಂತ ಸರಳವಾಗಿ ಆಚರಿಸಲಾಯಿತು,
ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಷು ಸಂಕ್ರಮಣದ ಅಂಗ ವಾಗಿ ವಿಷುಕಣಿ ಪೂಜೆ ಭಕ್ತರಿಲ್ಲದೆ ಸರಳವಾಗಿ ಸೋಮವಾರ ರಾತ್ರಿ ಆಚರಿಸ ಲಾಯಿತು. ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ನೇತೃತ್ವದಲ್ಲಿ ವಿಷು ಕಣಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಸಂಜೆ ದೇವರ ಉತ್ಸವ ಮೂರ್ತಿಯನ್ನು ಪಲ್ಲಕಿ ಯಲ್ಲಿಟ್ಟು ದೇವಸ್ಥಾನದೊಳಗೆ ಪ್ರದ ಕ್ಷಿಣೆ ಹಾಕಲಾಯಿತು. ಬಳಿಕ ದೇವರ ಮೂರ್ತಿ ಯನ್ನು ಉಯ್ನಾಲೆಯಲ್ಲಿ ತೂಗಿ ಅನಂತರ ಪೂಜೆ ನಡೆದು ಗರ್ಭಗುಡಿಗೆ ತರಲಾಯಿತು. ಅರ್ಚಕರು ವಿಷುಕಣಿಯನ್ನಿಟ್ಟು ಅದರ ಸುತ್ತ ಬಾಳೆಹಣ್ಣು, ಸೀಯಾಳ, ಹೂವಿನಿಂದ ಅಲಂಕರಿಸಿದ್ದರು.
ಮಹತೋಭಾರ ಶ್ರೀ ಮಂಗಳಾದೇವಿ ದೇಗುಲದಲ್ಲಿ ಮಂಗಳವಾರದಂದು ಶ್ರೀ ಮಾತೆಗೆ ವಿಷುಕಣಿ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಬಾರಿ ವಿಷು ಹಬ್ಬದ ಸಡಗರಕ್ಕೆ ಕೊರೊನಾ ಆತಂಕ ಮನೆಮಾಡಿತ್ತು. ಸಾಮಾನ್ಯವಾಗಿ ವಿಷು ಹಬ್ಬದಂದು ಭಕ್ತರು ಹತ್ತಿರದ ದೇವಾಲ ಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಕಾರಣದಿಂದ ಎಲ್ಲ ದೇಗುಲಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧವಿತ್ತು. ಇದೇ ಕಾರಣಕ್ಕೆ ಈ ಬಾರಿ ಮನೆಮಂದಿ ಒಟ್ಟಾಗಿ ಹಬ್ಬ ಆಚರಿಸಿದ್ದು ವಿಶೇಷ. ತುಳು ನಾಡಿನಲ್ಲಿ ವಿಶೇಷವಾಗಿ ಭಕ್ತರು ಫಲ- ಪುಷ್ಪಗಳನ್ನು, ದವಸ ಧಾನ್ಯ, ತರಕಾರಿ, ಹಣ, ಚಿನ್ನವನ್ನು ದೇವರ ಎದುರು ಇಟ್ಟು ಪೂಜಿಸಿದರು.
ಹೊಸ ಉಡುಪು ಧರಿಸಿ, ವಿವಿಧ ಖಾದ್ಯಗಳನ್ನು ತಯಾರಿಸಿ ಮನೆಮಂದಿ ಒಟ್ಟಾಗಿ ಕುಳಿತು ವಿಷು ಭೋಜನ ಉಂಡು ಖುಷಿಪಟ್ಟರು. ಅದೇ ರೀತಿ ಕಿರಿಯರು, ಹಿರಿಯರ ಆಶೀರ್ವಾದ ಪಡೆದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಹೊಸ ಜೋಡಿಗಳು ಮೊದಲ ವಿಷು ಹಬ್ಬವನ್ನು ಎರಡು ಕುಟುಂಬಗಳನ್ನು ಬೆಸೆಯುವ ಹಬ್ಬವಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಆತಂಕದಿಂದ ಕೇವಲ ಮನೆ ಮಂದಿಯಷ್ಟೇ ಹಬ್ಬದ ಸಡಗರದಲ್ಲಿ ಭಾಗಿಯಾದರು.
ಸಾಂಕೇತಿಕ ಆಚರಣೆ
ಪುತ್ತೂರು ಮಹಾಲಿಂಗೇಶ್ವರ ದೇಗುಲವೂ ಸೇರಿದಂತೆ ತಾ|ನ ವಿವಿಧ ದೇಗುಲಗಳಲ್ಲಿ ವಿಷು ಹಬ್ಬವನ್ನು ಪೂರ್ವಶಿಷ್ಟ ಸಂಪ್ರದಾಯದಂತೆ ಸಾಂಕೇತಿಕ ವಾಗಿ ಆಚರಿಸ ಲಾಯಿತು. ಮಹಾಲಿಂಗೇಶ್ವರ ದೇಗುಲ ದಲ್ಲಿ “ಬಿಸುಕಣಿ’ (ಫಲವಸ್ತು ಗಳು)ಯನ್ನು ದೇವರಿಗೆ ಅರ್ಪಿಸ ಲಾಯಿತು. ಕೆಲವು ಭಾಗಗಳಲ್ಲಿ ಮನೆಗಳಲ್ಲಿನ ದೈವಗಳಿಗೆ ತಂಬಿಲ ಸೇವೆ ನಡೆಸಲಾಯಿತು. ಮನೆ ಮಂದಿ ಮಾತ್ರ ಸೇರಿಕೊಂಡು ಹಬ್ಬ ಆಚರಿಸಿದರು.
ಕಾಸರಗೋಡು
ಜಿಲ್ಲೆಯ ಜನರು ಕೂಡ ಮನೆಗಳ ಲ್ಲಿಯೇ ವಿಷು ಆಚರಣೆ ಮಾಡಿ ದರು. ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುತ್ತಿದ್ದ “ವಿಷು ಕಣಿ’ ಉತ್ಸವವನ್ನು ರದ್ದುಗೊಳಿಸಲಾಗಿತ್ತು. ಮನೆಗಳಲ್ಲಿ ವಿಷು ಕಣಿಯ ದರ್ಶನ ಮಾಡಿದ ಮೇಲೆ ಕಿರಿಯರೆಲ್ಲ ಹಿರಿಯರ ಆಶೀರ್ವಾದ ಪಡೆದರು. ಕಿರಿಯರಿಗೆ ಹಿರಿಯರು ನಾಣ್ಯ ನೀಡಿ ಹರಸಿದರು. ಇದಕ್ಕೆ ವಿಷು “ಕೈನೀಟ್ಟಂ’ ಎಂದು ಹೆಸರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.