ಬಾಡಿಗೆ ಅಂಗನವಾಡಿ ಸರಕಾರಿ ಶಾಲೆಗೆ ಸ್ಥಳಾಂತರ
ಕೊಠಡಿ ಖಾಲಿ ಇರುವ ಶಾಲೆಗಳಿಗಾಗಿ ಜಂಟಿ ಸಮೀಕ್ಷೆ
Team Udayavani, Mar 30, 2022, 7:15 AM IST
ದಾವಣಗೆರೆ: ರಾಜ್ಯದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಇರುವ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಹತ್ತಿರದ ಸರಕಾರಿ ಶಾಲಾ ಆವರಣಕ್ಕೆ ಸ್ಥಳಾಂತರಿಸಲು ನಿರ್ಧರಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಾಲಾ ಕಟ್ಟಡ ಸಮೀಕ್ಷೆ ನಡೆಸಲು ಮುಂದಾಗಿದೆ.
ಮಾರ್ಚ್ ಆರಂಭದಲ್ಲಿ ನ್ಯಾ| ಎ.ಎನ್. ವೇಣುಗೋಪಾಲ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಸರಕಾರಿ ಶಾಲಾ ಆವರಣಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿತ್ತು.
ಒಂದು ವೇಳೆ ಶಾಲಾ ಆವರಣದಲ್ಲಿ ಸ್ಥಳಾವಕಾಶವಿದ್ದೂ ಸ್ಥಳಾಂತರಿಸಲು ಶಿಕ್ಷಣ ಇಲಾಖೆಯಿಂದ ಸಮಸ್ಯೆಗಳಿ ದ್ದಲ್ಲಿ ಪ್ರತೀ ಪ್ರಕರಣದ ಬಗ್ಗೆ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಚೇರಿಗೆ ಕಳುಹಿಸಬೇಕು. ಸಮೀಕ್ಷೆ ವರದಿಯನ್ನು ಮಾ. 30ರೊಳಗೆ ಕಳುಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು, ರಾಜ್ಯದ ಎಲ್ಲ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಮಂಗಳೂರು: ಬೆಂಕಿಗಾಹುತಿಯಾದ ಕಾರು: ಮಹಿಳೆ, ನಾಯಿ ಪಾರು
ಎಷ್ಟು ಅಂಗನವಾಡಿ ಸ್ಥಳಾಂತರ?
ರಾಜ್ಯದಲ್ಲಿ ಒಟ್ಟು 65,911 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ 44,312 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. ಇನ್ನುಳಿದ 21,599 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. 38,646 ಅಂಗನವಾಡಿ ಕೇಂದ್ರಗಳಲ್ಲಿ ಸ್ವಂತ ಅಡುಗೆ ಕೋಣೆಗಳಿವೆ. 8,640 ಕೇಂದ್ರಗಳಲ್ಲಿ ಇತರ ಕಟ್ಟಡಗಳಲ್ಲಿ ಅಡುಗೆ ಕೋಣೆ ಮಾಡಿಕೊಳ್ಳಲಾಗಿದೆ. 37,751 ಕೇಂದ್ರ ಗಳಲ್ಲಿ ಸ್ವಂತ ಶೌಚಾಲಯ ಇದ್ದು, 8,716 ಕೇಂದ್ರಗಳಲ್ಲಿ ಸ್ವಂತ ಶೌಚಾಲಯ ಇಲ್ಲ.
ಸ್ವಂತ ಕಟ್ಟಡವಿಲ್ಲದ ಅಂಗನವಾಡಿಗಳನ್ನು ಸರಕಾರಿ ಶಾಲೆಯ ಕೊಠಡಿಗಳಿಗೆ ಸ್ಥಳಾಂತರಿಸಿದರೆ ಅಂಗನವಾಡಿಗಳಿಗೆ ಮೂಲ ಸೌಲಭ್ಯ ದೊರಕುವ ಜತೆಗೆ ಮಕ್ಕಳಿಗೆ ಮುಂದಿನ ತರಗತಿಗೆ ಹೋಗಲು ಅನುಕೂಲವಾಗುತ್ತದೆ ಎಂಬ ಯೋಚನೆ ಸರಕಾರದ್ದು.
ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಕೊಠಡಿಗಳು ಲಭ್ಯವಿರುವ ಹತ್ತಿರದ ಸರಕಾರಿ ಶಾಲೆಗಳಿಗೆ ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಇಲಾಖೆ ಜಂಟಿ ಸಮೀಕ್ಷೆ ಮಾಡಲು ಸೂಚಿಸಲಾಗಿದೆ.
-ಕೆ.ಎಚ್. ವಿಜಯಕುಮಾರ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಯಾವ ಸ್ಥಳದಲ್ಲಿದ್ದರೆ ಮಕ್ಕಳಿಗೆ ಅನುಕೂಲ ಎಂದು ಸಮೀಕ್ಷೆ ಮಾಡಿ ಬಾಡಿಗೆ ಕಟ್ಟಡ ಪಡೆದು ಅಂಗನವಾಡಿ ಕೇಂದ್ರ ಗಳನ್ನು ತೆರೆಯಲಾಗಿದೆ. ಈಗ ಕೇಂದ್ರ ಗಳನ್ನು ಸರಕಾರಿ ಶಾಲೆಗಳಿಗೆ ಸ್ಥಳಾಂ ತರಿ ಸಿದರೆ ಚಿಣ್ಣರ ಕಲಿಕೆಗೆ ತೊಂದರೆ ಯಾಗಲಿದೆ.
– ಹೊನ್ನಪ್ಪ ಮರೆಮ್ಮನವರ, ಉಪಾಧ್ಯಕ್ಷರು, ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಶನ್
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.