Renukaswamy, 17 ಆರೋಪಿಗಳ ಹೆಸರಲ್ಲಿ ಡೂಪ್ಲಿಕೇಟ್ ಸಿಮ್ ಖರೀದಿ
ಹೊಸ ಸಿಮ್ ಖರೀದಿಸಿ ಮೊಬೈಲ್ ಮಾಹಿತಿಗಾಗಿ ಶೋಧ, ರೇಣುಕ ಇ ಮೇಲ್ ತಲಾಷ್
Team Udayavani, Jun 26, 2024, 11:45 AM IST
ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರ ಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಸೇರಿ 17 ಮಂದಿ ಆರೋಪಿಗಳು, ಕೊಲೆ ಯಾದ ರೇಣುಕಸ್ವಾಮಿ ಹೆಸರಿನಲ್ಲಿ ಡೂಪ್ಲಿಕೇಟ್ ಸಿಮ್ ಖರೀದಿಸಿರುವ ಪೊಲೀಸರು, ಸರ್ವೀಸ್ ಪ್ರೊವೈಡರ್ ಮೂಲಕ ಎಲ್ಲರ ಮೊಬೈಲ್ ಡೇಟಾಗಳನ್ನು ಮರು ಪಡೆದುಕೊಂಡಿದ್ದಾರೆ.
ಆರೋಪಿಗಳು ವೆಬ್ ಆ್ಯಪ್‌ಗ್ಳ ಮೂಲಕ ತಮ್ಮ ಮೊಬೈಲ್‌ಗಳಲ್ಲಿರುವ ಡೇಟಾ ನಿಷ್ಕ್ರಿ ಯಗೊಳಿಸಿದ್ದಾರೆ. ಇನ್ನು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ರೇಣುಕಸ್ವಾಮಿ ಮೊಬೈಲ್ ಅನ್ನು ಸುಮನಹಳ್ಳಿಯ ರಾಜ ಕಾಲುವೆಗೆ ಎಸೆದಿದ್ದಾರೆ. ಹೀಗಾಗಿ ಎಲ್ಲರ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಲಾಗುತ್ತಿದೆ. ಇನ್ನು ಪ್ರಮುಖವಾಗಿ ಆರೋಪಿಗಳ ಪೈಕಿ ದರ್ಶನ್, ಧನರಾಜ್, ವಿನಯ್ ಮತ್ತು ಪ್ರದೂಷ್ ಮೊಬೈಲ್‌ಗಳನ್ನು ಅನ್‌ಸೀಲ್ ಮಾಡಿ ರೀ ಆ್ಯಕ್ಸಸ್ ಮಾಡಲಾ ಗಿದ್ದು, ಕೊಲೆ ಬಳಿಕ ಈ ನಾಲ್ವರು ಆರೋಪಿಗಳು ಸಾಕ್ಷ್ಯ ನಾಶಪಡಿಸಲು ಯಾರೆಗಿಲ್ಲ ಕರೆ ಮಾಡಿ ದ್ದರು ಎಂಬೆಲ್ಲ ಮಾಹಿತಿಯನ್ನು ಪಡೆಯಲಾಗಿದೆ.
ರೇಣುಕಸ್ವಾಮಿ ಇ-ಮೇಲ್ ಶೋಧ: ಕೊಲೆಯಾದ ರೇಣುಕಸ್ವಾಮಿ ವಿರುದ್ಧ ಕೆಲವೊಂದು ಗಂಭೀರ ಆರೋಪಗಳು ಕೇಳಿ ಬಂದಿವೆ. ಈತ ಪವಿತ್ರಾಗೌಡಗೆ ಮಾತ್ರವಲ್ಲ, ಬೇರೆ ಕಿರುತೆರೆ ನಟಿಯರಿಗೂ ಅಶ್ಲೀಲ ಸಂದೇಶ ಕಳುಹಿಸಿದ್ದ. ಜತೆಗೆ ತಾನು ಕೆಲಸ ಮಾಡುತ್ತಿದ್ದ ಔಷಧಿ ಮಳಿಗೆಯಲ್ಲೂ ಹೀಗೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಹೀಗಾಗಿ, ಆತನ ಮೊಬೈಲ್‌ಅನ್ನು ರೀ ಆಕ್ಸಿಸ್ ಮಾಡಿದ್ದು, ಇ-ಮೇಲ್ ಶೋಧಿ ಸಲಾ ಗಿದೆ. ಆತನ ಕಾಲ್ ಲಿಸ್ಟ್‌ನಲ್ಲಿ ಯಾರೆಲ್ಲ ಇದ್ದಾ ರೆ? ಮೆಸೆಸ್‌ಗಳನ್ನು ಪರಿ ಶೀಲಾಗಿದೆ. ಜತೆಗೆ ಈತ ನಕಲಿ ಖಾತೆ ತೆರೆದು, ಬೇರೆ ಯಾರಿಗೆಲ್ಲ ಸಂದೇಶ ಕಳುಹಿಸಿದ್ದಾನೆ. ಬಂದಿರುವ ಪ್ರತಿಕ್ರಿಯೆ ಏನು ಎಂಬುದನ್ನು ಪಡೆ ಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉಮಾಪತಿ, ಪ್ರಥಮ್‌ಗೆ ಬೆದರಿಕೆ: ದರ್ಶನ್ ಅಭಿಮಾನಿ ಬಂಧನ
ಬೆಂಗಳೂರು: ಸಾರ್ವಜನಿಕವಾಗಿ ನಿರ್ಮಾ ಪಕ ಉಮಾಪತಿಗೌಡ ಮತ್ತು ನಟ ಪ್ರಥಮ್ ಗೆ ಬೆದರಿಕೆ ಹಾಕಿದ ಆರೋಪದಡಿ ದರ್ಶನ್ ಅಭಿಮಾನಿಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಮಲಾನಗರ ನಿವಾಸಿ ಚೇತನ್(35) ಬಂಧಿತ. ಆರೋಪಿಯ ವಿರುದ್ಧ ನಿರ್ಮಾ ಪಕ ಉಮಾಪತಿ ಗೌಡ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾದಾಗ ನೂರಾರು ಅಭಿಮಾನಿಗಳು ಅನ್ನಪೂರ್ಣೇಶ್ವರಿನಗರ ಠಾಣೆ ಮುಂಭಾಗ ಜಮಾಯಿಸಿ, ಘೋಷಣೆ ಕೂಗಿದ್ದರು. ಅದಕ್ಕೆ ನಟ ಪ್ರಥಮ್, ಅಂಧಾಭಿಮಾನಗಳು ಎಂದೆಲ್ಲ ನಿಂದಿಸಿದ್ದರು. ಮತ್ತೂಂದೆಡೆ ನಿರ್ಮಾಪಕ ಉಮಾಪತಿಗೌಡ ಕೂಡ ದರ್ಶನ್ ಮತ್ತು ತಮ್ಮ ನಡುವಿನ ಹಣಕಾಸು ವಿಚಾರ ಹಾಗೂ ಇತರೆ ವಿಚಾರ ಗಳ ಮಾಧ್ಯಮ ಹೇಳಿಕೆ ನೀಡಿದ್ದರು.
ಈ ಸಂಬಂಧ ಚೇತನ್ ಮಾಧ್ಯಮಗಳ ಮುಂದೆ ಪ್ರಥಮ್ ಮತ್ತು ಉಮಾಪತಿ ಗೌಡಗೆ ಜೀವ ಬೆದರಿಕೆ ಹಾಕುವ ರೀತಿ ಮಾತನಾಡಿದ್ದ. ಈ ಸಂಬಂಧ ಉಮಾಪತಿಗೌಡ ಬಸವೇಶ್ವರನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಐಪಿಸಿ 504 ಶಾಂತಿ ಭಂಗ ಮತ್ತು 506 ಜೀವ ಬೆದರಿಕೆ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.