Report: ಅಹಮದಾಬಾದ್‌ನಲ್ಲಿ ಬದುಕು ಸುಲಭ
-ಮುಂಬೈ ದುಬಾರಿ ನಗರ, ಬೆಂಗಳೂರಿಗೆ ನಾಲ್ಕನೇ ಸ್ಥಾನ: ನೈಟ್ ಫ್ರಾಂಕ್ ಇಂಡಿಯಾ ವರದಿ
Team Udayavani, Aug 19, 2023, 6:52 AM IST
ನವದೆಹಲಿ: ಭಾರತದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಆರಾಮದಾಯಕವಾಗಿ ಬದುಕಬಹುದಾದ ನಗರ ಯಾವುದು ಗೊತ್ತಾ? ಗುಜರಾತ್‌ನ ಅಹಮದಾಬಾದ್ ಎನ್ನುತ್ತದೆ ಪ್ರಾಪರ್ಟಿ ಕನ್ಸಲ್ಟೆಂಟ್ ಸಂಸ್ಥೆ ನೈಟ್ ಫ್ರಾಂಕ್ ಇಂಡಿಯಾ ಬಿಡುಗಡೆ ಮಾಡಿರುವ ವರದಿ.
ಆಯಾ ನಗರದ ಪ್ರತಿ ನಿವಾಸಿಯು ಪಾವತಿಸುವ ಇಎಂಐ (ಸಾಲದ ಮಾಸಿಕ ಕಂತು) ಮೊತ್ತವನ್ನು ಆ ನಗರದ ಸರಾಸರಿ ಕುಟುಂಬವೊಂದರ ಒಟ್ಟು ಆದಾಯದೊಂದಿಗೆ ಭಾಗಿಸಿದಾಗ ಸಿಗುವ ಮೊತ್ತದ ಆಧಾರದಲ್ಲಿ “ಅತ್ಯಂತ ವಾಸ ಯೋಗ್ಯ ನಗರ’ ಯಾವುದು ಎಂಬುದನ್ನು ನಿರ್ಧರಿಸಿ, ಈ ಸಂಸ್ಥೆಯು ವರದಿ ಬಿಡುಗಡೆ ಮಾಡಿದೆ. ಅದರಂತೆ, ಅಹಮದಾಬಾದ್ ನಗರವನ್ನು ಅತ್ಯಂತ ವಾಸಯೋಗ್ಯ ನಗರ ಎಂದು ಪರಿಗಣಿಸಲಾಗಿದೆ. ಇಲ್ಲಿ ಸಾಮಾನ್ಯ ಕುಟುಂಬವೊಂದು ತನ್ನ ಒಟ್ಟು ಆದಾಯದ ಶೇ.23ರಷ್ಟನ್ನು ಮಾತ್ರ ಗೃಹ ಸಾಲದ ಇಎಂಐಗೆ ಮೀಸಲಿಡುತ್ತದೆಯಂತೆ.
ವೆಚ್ಚದಾಯಕ ನಗರ ಮುಂಬೈ:
ಈ ಸೂಚ್ಯಂಕದ ಪ್ರಕಾರ, ದೇಶದಲ್ಲಿ ಅತಿ ವೆಚ್ಚದಾಯದ ನಗರವೆಂದರೆ ಮುಂಬೈ. ಇಲ್ಲಿ ಗೃಹ ಸಾಲ ಇಎಂಐಗೆ ಆದಾಯದ ಅನುಪಾತವು ಶೇ.55ರಷ್ಟಿದೆ. ಅಂದರೆ, ಸಾಮಾನ್ಯ ಕುಟುಂಬವೊಂದು ಗೃಹ ಸಾಲ ಪಡೆದರೆ, ಆ ಕುಟುಂಬವು ತನ್ನ ಒಟ್ಟು ಆದಾಯದ ಅರ್ಧಕ್ಕಿಂತ ಹೆಚ್ಚನ್ನು ಇಎಂಐಗೆ ವ್ಯಯಿಸಬೇಕಾಗುತ್ತದೆ. ಈ ಪಟ್ಟಿಯಲ್ಲಿ ಬೆಂಗಳೂರು 4ನೇ ಸ್ಥಾನ ಪಡೆದಿದೆ.
ದುಬಾರಿ ನಗರಗಳು
- ಮುಂಬೈ
- ಹೈದರಾಬಾದ್
- ದೆಹಲಿ ಎನ್‌ಸಿಆರ್ ಪ್ರದೇಶ
- ಬೆಂಗಳೂರು ಮತ್ತು ಚೆನ್ನೈ
- ಪುಣೆ
ಮಧ್ಯಮ ವರ್ಗದ ಆದಾಯ 3 ಪಟ್ಟು ಹೆಚ್ಚಳ
ಮಹತ್ವದ ಬೆಳವಣಿಗೆ ಎಂಬಂತೆ, ಭಾರತದ ಮಧ್ಯಮ ವರ್ಗದವರ ಆದಾಯವು ಕಳೆದ 10 ವರ್ಷಗಳಲ್ಲಿ 3 ಪಟ್ಟು ಹೆಚ್ಚಳವಾಗಿದೆ. 2012-13ರ ವಿತ್ತೀಯ ವರ್ಷದಲ್ಲಿ 4.4 ಲಕ್ಷ ರೂ.ಗಳಾಗಿದ್ದ ಆದಾಯವು 2021-22ರ ವೇಳೆಗೆ 13 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ಹೇಳಿದೆ. 10 ವರ್ಷಗಳ ಅವಧಿಯಲ್ಲಿ ದೇಶದ ಶೇ.13.6ರಷ್ಟು ಜನರು ಕಡಿಮೆ ಆದಾಯದ ವರ್ಗದಿಂದ ಹೆಚ್ಚಿನ ಆದಾಯದ ವರ್ಗಕ್ಕೆ ಬದಲಾಗಿದ್ದಾರೆ ಎಂದೂ ವರದಿ ಹೇಳಿದೆ. 2011-12ರಲ್ಲಿ 16 ದಶಲಕ್ಷ ಮಂದಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ್ದರೆ, ಪ್ರಸಕ್ತ ವರ್ಷ 68.5 ದಶಲಕ್ಷ ಮಂದಿ ಐಟಿಆರ್ ಸಲ್ಲಿಸಿದ್ದಾರೆ ಎಂದೂ ಉಲ್ಲೇಖೀಸಲಾಗಿದೆ. ಜತೆಗೆ, ಪ್ರಸಕ್ತ ಹಣಕಾಸು ವರ್ಷದಲ್ಲಿ 2 ಲಕ್ಷ ರೂ. ಆಗಿರುವ ಭಾರತದ ತಲಾ ಆದಾಯವು 2047ರ ವೇಳೆಗೆ 14.9 ಲಕ್ಷ ರೂ.ಗಳಾಗಲಿವೆ ಎಂದೂ ವರದಿ ಭವಿಷ್ಯ ನುಡಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.