Republic Day: 40 ವರ್ಷಗಳ ಬಳಿಕ ಬಂದ ಸಾರೋಟು!
ರಾಷ್ಟ್ರಪತಿ ಭವನದಿಂದ ಕರ್ತವ್ಯ ಪಥಕ್ಕೆ ಮುರ್ಮು, ಮ್ಯಾಕ್ರನ್ ಆಗಮನ
Team Udayavani, Jan 27, 2024, 12:46 AM IST
ಬರೋಬ್ಬರಿ 40 ವರ್ಷಗಳ ಬಳಿಕ ಗಣರಾಜ್ಯೋತ್ಸವದ ದಿನ ಸಾಂಪ್ರದಾಯಿಕ ಸಾರೋಟು ಬಳಕೆಯಾಗಿದೆ. ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ “ಕುದುರೆಗಳ ಸಾರೋಟಿ’ನಲ್ಲಿ ಕರ್ತವ್ಯಪಥಕ್ಕೆ ಆಗಮಿಸಿದರು. ಅವರಿಗೆ 21 ಗನ್ ಸೆಲ್ಯೂಟ್‌ಗಳ ಮೂಲ ಕ ಗೌರವ ವಂದನೆ ಅರ್ಪಿಸಿ ಪರೇಡ್‌ಗೆ ಅಧಿಕೃತ ಚಾಲನೆ ನೀಡಲಾಯಿತು. ಈ ಸಾರೋಟಿನ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಸಾರೋಟಿನ ಇತಿಹಾಸ: ಕಪ್ಪು-ಬಣ್ಣದ ಈ ಸಾರೋಟು ಚಿನ್ನ ಲೇಪಿತ ರಿಮ್‌ಗಳು ಮತ್ತು ವೆಲ್ವೆಟ್ ಒಳಾಂಗಣವನ್ನು ಹೊಂದಿದೆ. ಇದರಲ್ಲಿ ಅಶೋಕ ಚಕ್ರವನ್ನು ಕೆತ್ತಲಾಗಿದೆ. ಆರು ಕುದುರೆ ಗಳ ಮೂಲಕ ಈ ಸಾರೋಟು ಸಂಚರಿಸುತ್ತದೆ. ಬ್ರಿಟಿಷರ ಆಳ್ವಿಕೆ ಅವಧಿಯಲ್ಲಿ ಭಾರತದ ವೈಸ್‌ರಾಯ್ ಈ ಸಾರೋಟನ್ನು ಬಳಸುತ್ತಿದ್ದರು.
ಟಾಸ್ ಹಾಕಿ ಅದೃಷ್ಟ ಪರೀಕ್ಷೆ: ಬ್ರಿಟಿಷ್ ಆಡಳಿತ ಕೊನೆಗೊಂಡ ಬಳಿಕ, ಭಾರತ ಮತ್ತು ಪಾಕಿಸ್ಥಾನದ ನಡುವೆ ಸಾರೋಟಿಗಾಗಿ ಕಚ್ಚಾಟ ಆರಂಭವಾಯಿತು. ಕೊನೆಗೆ “ಟಾಸ್ ಹಾಕುವ’ ನಿರ್ಧಾರಕ್ಕೆ ಬರಲಾಯಿತು. ನಾಣ್ಯ ವೊಂದನ್ನು ಚಿಮ್ಮಿಸಿ ಟಾಸ್ ಹಾಕಿದಾಗ, ಅದೃಷ್ಟ ಭಾರತದ ಕಡೆಗೆ ಒಲಿದಿತು.
ಬಳಕೆ ನಿಂತಿದ್ದು ಏಕೆ?: ಪ್ರಧಾನಿ ಇಂದಿರಾಗಾಂಧಿ ಹತ್ಯೆಯ ಬಳಿಕ ಭದ್ರತಾ ದೃಷ್ಟಿಯಿಂದ ಬಳಕೆ ಸ್ಥಗಿತಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.