ಕೋವಿಡ್-19 ಹರಡುವವರ ವಿರುದ್ಧ ಕ್ರಮಕ್ಕೆ ಆಗ್ರಹ
Team Udayavani, May 12, 2020, 6:31 AM IST
ಬೆಂಗಳೂರು: ದೇಶ ಮತ್ತು ರಾಜ್ಯದ ಹಲವೆಡೆ ಕೋವಿಡ್-19 ಸೋಂಕು ಅತಿ ವೇಗವಾಗಿ ಹರಡಲು ತಬ್ಲಿಘಿ ಜಮಾತ್‌ಗಳೇ ಕಾರಣ. ಲಾಕ್‌ಡೌನ್ ಸಡಿಲಿಕೆಯ ಬಳಿಕ ತಬ್ಲಿಘಿಗಳು, ಅಜ್ಮೇರಿಗಳು ಕಳ್ಳರಂತೆ ತಪ್ಪಿಸಿಕೊಂಡು ರಾಜ್ಯಗಳಿಂದ ರಾಜ್ಯಕ್ಕೆ ಸಂಚರಿಸಿ ಸೋಂಕು ಹೆಚ್ಚಲು ಕಾರಣರಾಗಿದ್ದು ಇಂಥವರ ವಿರುದ್ಧ ಸರಕಾರ ಕಠಿನ ಕ್ರಮ ಜರಗಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮುದಾಯದವರಿಗೂ ಕೋವಿಡ್-19 ಸೋಂಕು ಹರಡಿ ಅವರನ್ನೂ ಸಾಯಿಸಿ ತಾವೂ ಸಾಯುವ ಮನೋಧರ್ಮಕ್ಕೆ ಏನು ಹೇಳಬೇಕು. ಇಂಥವರಿಗೆ ಅವರ ಯಾವ ನಾಯಕರು ಬುದ್ಧಿ ಹೇಳುತ್ತಿಲ್ಲ. ಇದು ಜೆಹಾದ್, ಸಂಚು ಅಲ್ಲವೆಂದರೆ ಬೇರೇನು? ಇಷ್ಟಾದರೂ ಬುದ್ದಿಜೀವಿಗಳು, ಪ್ರಗತಿಪರರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಜಾಮುದ್ದೀನ್‌ನ ಮಸೀದಿಯಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ 9,000 ಮಂದಿ ತಬ್ಲಿಘಿಗಳಿಂದ ಕೋವಿಡ್-19 ಸೋಂಕು ವ್ಯಾಪಕತೆ ಪಡೆದಿದೆ ಎಂಬುದು ಗಮನಾರ್ಹ. ಈ ಪೈಕಿ ತಲೆಮರೆಸಿಕೊಂಡಿದ್ದ 1,890 ತಬ್ಲಿಘಿ ಗಳು, 500 ಮಂದಿ ಅಜ್ಮೇರಿ ಗಳು ಈಗ ಎರಡನೇ ಹಂತದಲ್ಲಿ ಕೋವಿಡ್-19 ಸೋಂಕು ಹರಡುತ್ತಿ ದ್ದಾರೆ. ಜಿಲ್ಲಾ ಗಡಿಗಳಲ್ಲಿ ಸರಿಯಾದ ಕಾವಲು ವ್ಯವಸ್ಥೆ ಮತ್ತು ಸರಕಾರದ ಅಧೀನದಲ್ಲೇ ಕ್ವಾರೆಂಟೈನ್ ಮಾಡಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.