ಚಿಕ್ಕೋಡಿ- ರಾಯಬಾಗ ಏತ ನೀರಾವರಿಗೆ ಅನುದಾನಕ್ಕೆ ಸಿಎಂ ಬಳಿ ಮನವಿ


Team Udayavani, Feb 12, 2022, 6:13 PM IST

1-rqwrq

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಏತ ನೀರಾವರಿ ಯೋಜನೆಗಳನ್ನು ಬಜೆಟ್‌ನಲ್ಲಿ ಮಂಜೂರ ಮಾಡಿ ಅನುದಾನವನ್ನು ಮೀಸಲಿಡಬೇಕೆಂದು ಶಾಸಕ ದುರ್ಯೋಧನ ಐಹೊಳೆ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

ಬೆಳಗಾವಿಯಲ್ಲಿ ಮುಖ್ಯಮಂತ್ರಿ ಆಗಮಿಸಿದ ಹಿನ್ನಲ್ಲೆಯಲ್ಲಿ ಶಾಸಕ ಐಹೊಳೆ ಅವರು, ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಗ್ರಾಮಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಪ್ರತಿ ವರ್ಷ ಬರಗಾಲ ಚಾಯೆ ಮೂಡುತ್ತಿರುವದರಿಂದ ನೀರಿನ ಸಮಸ್ಯೆ ಉದ್ಭವಿಸುತ್ತಿದ್ದು, ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರ ಜಮೀನುಗಳು ಫಲವತ್ತಾದ ಭೂಮಿಗಳಿದ್ದು ನೀರಾವರಿ ಸೌಲಭ್ಯವಿಲ್ಲದೆ. ರೈತರಿಗೆ ಬೆಳೆಗಳಿಗಳನ್ನು ಬೆಳೆಯಲು ತುಂಬಾ ತೊಂದರೆಯಾಗುತ್ತಿದೆ.
ಹೀಗಾಗಿ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದೇ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದರಿಂದ ಇಲ್ಲಿನ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರ ಫಲವತ್ತಾದ ಭೂಮಿಗಳಿಗೆ ನೀರು ಇಲ್ಲದೇ ತುಂಬಾ ತೊಂದರೆಯಾಗುತ್ತಿದ್ದು, ಆದ್ದರಿಂದ ಈ ಏತ ನೀರಾವರಿ ಯೋಜನೆಗಳನ್ನು ಬಜೆಟ್‌ನಲ್ಲಿ ಮಂಜೂರ ಮಾಡಿ ಅನುದಾನವನ್ನು ಮೀಸಲಿಡಬೇಕೆಂದು ಮನವಿ ಮಾಡಿದರು.

ಕರಗಾಂವ ಏತ ನೀರಾವರಿ ಯೋಜನೆಯಡಿ ಒಟ್ಟು ೧೪ ಗ್ರಾಮಗಳು ಬರುತ್ತಿದ್ದು, ಅದರ ವಿಸ್ತಿರ್ಣ ಒಟ್ಟು ೮೧೧೯ ಹೆಕ್ಟೇರ್ ಪ್ರದೇಶ ಆಗುತ್ತಿದ್ದು, ಅದರ ಅಂದಾಜು ವೆಚ್ಚ ರೂ.೪೭೧.೦೦ ಕೋಟಿ ಆಗುತ್ತದೆ. ಜೈ ಹನುಮಾನ ಏತ ನೀರಾವರಿ ಯೋಜನೆಯಡಿ ಒಟ್ಟು ೮ ಗ್ರಾಮಗಳು ಬರುತ್ತಿದ್ದು, ಅದರ ವಿಸ್ತಿರ್ಣ ಒಟ್ಟು ೪೦೨೫ ಹೆಕ್ಟೇರ್‌ ಪ್ರದೇಶ ಆಗುತ್ತಿದ್ದು, ಅದರ ಅಂದಾಜು ವೆಚ್ಚ ರೂ.೪೮೩.೬೬ ಕೋಟಿ ಆಗುತ್ತದೆ.

ಬೆಂಡವಾಡ ಏತ ನೀರಾವರಿ ಯೋಜನೆಯಡಿ ಒಟ್ಟು ೧೬ ಗ್ರಾಮಗಳು ಬರುತ್ತಿದ್ದು, ಅದರ ವಿಸ್ತರ‍್ಣ ಒಟ್ಟು ೯೬೩೫ ಹೆಕ್ಟೇರ್ ಪ್ರದೇಶ ಆಗುತ್ತಿದ್ದು, ಅದರ ಅಂದಾಜು ವೆಚ್ಚ ರೂ.೭೯೬.೦೦ ಕೋಟಿ ಆಗುತ್ತದೆ. ನಾಗರಮುನ್ನೋಳ್ಳಿ ಏತ ನೀರಾವರಿ ಯೋಜನೆಯು ಅಂರ‍್ಜಲ ಮಟ್ಟವನ್ನು ಸುಧಾರಿಸಲು ೧೯ ಬ್ಯಾರೇಜುಗಳು/ಚೆಕ್ ಡ್ಯಾಮಗಳನ್ನು ತುಂಬುವ ಪ್ರಸ್ತಾವನೆ ಒಟ್ಟು ೨ ಗ್ರಾಮಗಳು ಅದರ ಅಂದಾಜು ವೆಚ್ಚ ರೂ.೩೫.೨೦ ಕೋಟಿ ಆಗುತ್ತದೆ.

ಈ ಸಂದರ್ಭದಲ್ಲಿ ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಭಾಕರ್ ಕೋರೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಂತೇಶ ಕವಟಗಿಮಠ, ಮಾಜಿ ಲೋಕಸಭಾ ಸದಸ್ಯರಾದ ಅಮರಸಿಂಹ ಪಾಟೀಲ್, ರಾಯಬಾಗ್ ಮತಕ್ಷೇತ್ರದ ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ಮುಖಂಡರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ: 12 ತಾಸು ಈಜಿ ತಾಯಿ-ಮಗ ದಾಖಲೆ

ಬೆಳಗಾವಿ: 12 ತಾಸು ಈಜಿ ತಾಯಿ-ಮಗ ದಾಖಲೆ

Jaya-Swamiji

Reservation: ಬೆಳಗಾವಿಯಲ್ಲಿ ಸೆ.22ಕ್ಕೆ ಲಿಂಗಾಯತ ಪಂಚಮಸಾಲಿ ವಕೀಲರ ಬೃಹತ್ ಸಮಾವೇಶ

Belagavi: ಸಾಲಬಾಧೆಯಿಂದ ಬೇಸತ್ತು ನೇಕಾರ ಆತ್ಮಹತ್ಯೆ…

Belagavi: ಸಾಲಬಾಧೆಯಿಂದ ಬೇಸತ್ತು ನೇಕಾರ ಆತ್ಮಹತ್ಯೆ…

Belagavi: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿಎ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

Belagavi: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿಎ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

Coat ಧರಿಸಿ ಕೋರ್ಟ್ ಗೆ ಆಗಮಿಸಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ

Missing Case; ಕೋಟ್ ಧರಿಸಿ ಕೋರ್ಟ್ ಗೆ ಆಗಮಿಸಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.