ಕೆಲಸಕ್ಕೆ ಹೋಗಿ ಬೆಣ್ಣೆಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ರೈತ : ರಕ್ಷಣಾ ತಂಡದಿಂದ ರಕ್ಷಣೆ
Team Udayavani, Oct 22, 2020, 1:03 PM IST
ನವಲಗುಂದ: ಬೆಣ್ಣೆಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ರೈತನನ್ನು ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡದವರು ರಕ್ಷಿಸಿ ದಡಕ್ಕೆ ಕರೆದುಕೊಂಡು ಬಂದರು.
ತಾಲೂಕಿನ ಸೊಟಕನಾಳ ಗ್ರಾಮದ ರೈತ ಹೇಮರಡ್ಡಿ ವೆಂಕರಡ್ಡಿ ನಾವಳ್ಳಿ(60) ಹಳ್ಳದ ಅರಿವು ಇಲ್ಲದೇ ಜಮೀನಿನ ಕೆಲಸಕ್ಕೆಂದು ಹೋಗಿದ್ದ. ಸಂಜೆ ಬೆಣ್ಣೆಹಳ್ಳ ಪ್ರವಾಹ ಬಂದಿರುವುದರಿಂದ ಆತನಿಗೆ ಬರಲು ಸಾಧ್ಯವಾಗಿಲ್ಲ. ನಡುಗಡ್ಡೆಯ ಮಧ್ಯೆ ಸಿಲುಕಿದ್ದ ರೈತನ ಹತ್ತಿರ ಮೊಬೈಲ್ ಇಲ್ಲದೇ ಇರುವುದರಿಂದ ಆತನಿಗೆ ತಾನು ಅಪಾಯದಲ್ಲಿ ಇರುವುದನ್ನು ತಿಳಿಸಲು ಆಗಿರಲಿಲ್ಲ. ಮನೆಯವರು ಹೊಲಕ್ಕೆ ಹೋದವರು ಬರದೆ ಇರುವುದನ್ನು ಕಂಡು ಹಳ್ಳದ ದಂಡೆಯಲ್ಲಿ ಕೂಗಿದಾಗ ನಡುಗಡ್ಡೆಯಲ್ಲಿ ಸಿಲುಕಿರುವುದು ತಿಳಿದು ಬಂದಿದೆ. ನಂತರ ಗ್ರಾಮಸ್ಥರು ತಾಲೂಕಾಡಳಿತಕ್ಕೆ ತಿಳಿಸಿದ ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ, ರಕ್ಷಣಾ
ತಂಡ ಹಾಗೂ ಅಮರಗೋಳದ ಈಜು ತಜ್ಞರ ಸಹಾಯದಿಂದ ಬೋಟ್ ಮೂಲಕ ನಡುಗಡ್ಡೆಯಲ್ಲಿದ್ದ ರೈತನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಇದನ್ನೂ ಓದಿ :ಲಾಕ್ ಡೌನ್ ವೇಳೆ ಕಾರ್ಮಿಕರ ಪಾಡನ್ನು ಹಾಡಿನ ರೂಪದಲ್ಲಿ ಬರೆದು “RAPPER” ಆದ ದಲಿತ ಹುಡುಗ.!
ತಹಶೀಲ್ದಾರ್ ನವೀನ ಹುಲ್ಲೂರ ಸ್ಥಳದಲ್ಲಿ ಮುಕ್ಕಾಂ ಹೂಡಿ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ. ಸೊಟಕನಾಳ ಗ್ರಾಮದಿಂದ ಬೆಣ್ಣೆಹಳ್ಳ ದಾಟಿ ಕೃಷಿ ಕೆಲಸ ಮಾಡಬೇಕು. ನಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಅಲ್ಲಿಯೇ ಬಿಟ್ಟಿದ್ದೇವೆ. ಅವುಗಳನ್ನು ತರಬೇಕೆಂದರೆ ರಸ್ತೆ ಸಂಪರ್ಕವಿಲ್ಲ. ಸೊಟಕನಾಳದಲ್ಲಿ ಬರುವ ಬೆಣ್ಣೆಹಳ್ಳಕ್ಕೆ ರಸ್ತೆ ಸಂಪರ್ಕ ನೀಡಲು
ನಡುಗಡ್ಡೆಯ ರೈತರು ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ. ನಮ್ಮ ಕಷ್ಟ ಕೇಳುವವರೆ ಇಲ್ಲ ಎಂದು ಸೊಟಕನಾಳ ಗ್ರಾಮದ ರೈತ ರಂಗರಡ್ಡಿ ಕಿರೇಸೂರ ನೋವು ತೋಡಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.