ಸಮಾಜದಲ್ಲಿ ಮಹಿಳೆಯರಿಗೂ ಅವರದೇ ಆದ ವ್ಯಕ್ತಿತ್ವವಿದೆ ಅದನ್ನು ಗೌರವಿಸಿ


Team Udayavani, May 27, 2020, 6:16 PM IST

Modern-Woman

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಆಧುನಿಕತೆಯ ಗಾಳಿ ಬೀಸುತ್ತಿದ್ದಂತೆ ಪರಿವರ್ತನೆಗಳಿಗೆ ಜಗದ ನಿಯಮಗಳಲ್ಲಿ ಬದಲಾವಣೆಯಾಗುತ್ತಿದ್ದಂತೆ ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದ ಮಹಿಳೆ ಇಂದು ಪುರುಷನ ಸರಿ ಸಮಾನವಾಗಿ ದುಡಿಯುತ್ತಿದ್ದಾಳೆ. ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹಲವರಿಗೆ ಮಾದರಿಯಾಗಿದ್ದಾಳೆ.

ಇಷ್ಟೆಲ್ಲಾ ಪರಿವರ್ತನೆಗಳ ನಡುವೆಯೂ ಕುಟುಂಬ ಮನೆ ಮಕ್ಕಳು ಸಮಾಜ ಕೆಲಸ ಎಲ್ಲವನ್ನೂ ಸಮಾನವಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ ಈ ದೇಶದಲ್ಲಿ ಹಲವು ಮಹಾನ್ ಸಾಧಕರು ಜನಿಸಿದ್ದಾರೆ ಅದರಲ್ಲಿ ಸಾಕಷ್ಟು ಮಹಿಳೆಯರ ಪಟ್ಟಿಯೂ ಇದೆ. ಬದಲಾದ ಕಾಲಕ್ಕೆ ಹೊಂದಿಕೊಂಡ ಮಹಿಳೆ ತನ್ನ ಅಸ್ಮಿತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಬದಲಾವಣೆಯನ್ನು ಒಪ್ಪಿಕೊಂಡಿದ್ದರೂ ಕೆಲವು ಮೂಲಭೂತ ಸಮಸ್ಯೆಗಳನ್ನು ಮಹಿಳೆ ಎದುರಿಸುತ್ತಿದ್ದಾಳೆ.

ವರ್ಕ್ ಲೈಫ್ ಬ್ಯಾಲೆನ್ಸ್ ಹೊಸ ಪರಿಕಲ್ಪನೆಯಲ್ಲಿ 18ನೇ ಶತಮಾನದ ದ್ವಿತೀಯಾರ್ಧದಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಕೆಲಸದ ಮಾದರಿಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ wlp ಪರಿಕಲ್ಪನೆಯಲ್ಲಿ ಹೊಸ ಆಯಾಮವನ್ನೇ ನೀಡಿತು ಭಾರತದಲ್ಲಿ ಈ ಪರಿಕಲ್ಪನೆ ನಾನಾ ಆಯಾಮಗಳನ್ನು ಹೊಂದಿದೆ.

ನಮ್ಮ ದೇಶದಲ್ಲಿ ಸರಕಾರಿ ಕೆಲಸದಷ್ಟು ಸುರಕ್ಷಿತವಾದ ಕೆಲಸ ಇನ್ನೊಂದಿಲ್ಲ. ಬ್ರಾಹ್ಮಣ ಎನ್ನುವ ಒಂದು ವರ್ಗ ಸರಕಾರಿ ಸೇವೆ ನಿರ್ವಹಿಸುವ ಭಾಗ್ಯದಿಂದ ಶೇಕಡ 98 ಪರ್ಸೆಂಟ್ ಹೊರಗುಳಿದಿದೆ. ಸರಕಾರಿ ವಲಯ ಬಿಟ್ಟು ಕಾರ್ಪೋರೇಟ್ ಕಂಪನಿಗಳಲ್ಲಿ ಬ್ಯಾಂಕಿಂಗ್ ವಲಯ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರು ಸಹ ಪುರುಷರಿಗೆ ಸಮಾನವಾಗಿ ಹಗಲಿರುಳು ದುಡಿದು ತಮ್ಮ ಕುಟುಂಬಗಳಿಗೆ ಆರ್ಥಿಕ ಹೊರೆಯನ್ನು ತಗ್ಗಿಸಿ ಚೈತನ್ಯ ನೀಡುತ್ತಿದ್ದಾರೆ.

ಬಹುತೇಕ ಮಹಿಳೆಯರಿಗೆ ಕೆಲಸ ಮಾಡುವುದು ಹವ್ಯಾಸವಲ್ಲ. ಅವಶ್ಯಕತೆಯೂ ಅನಿವಾರ್ಯವೂ ಆಗಿದೆ. ಮಹಿಳೆಯರು ತಾಯಂದಿರಾದ ನಂತರ  ಕೆಲಸಕ್ಕೆ ಹೋಗುವದೋ ಬೇಡವೋ ಅನ್ನುವದು ಕುಟುಂಬ ನಿರ್ಧರಿಸುವದು. ಕುಟುಂಬದ ಸಮ್ಮತಿ ಪಡೆದು ಮನೆಯಿಂದಾಚೆ ಕಾಲಿಡುವ ಮಹಿಳೆಯರನ್ನು ಸಮಾಜ ವಿಭಿನ್ನ ದೃಷ್ಟಿಕೋನದಿಂದ ನೋಡುವದು ಇಂದಿಗೂ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ ಬಂದಿದೆ.

ಶತಮಾನಗಳು ಕಳೆದರೂ ಬದಲಾವಣೆಯಾದರೂ ಆಧುನಿಕತೆಯ ಪರಿವರ್ತನೆ ಆದರೂ ಕಾನೂನು ಸಹ ಮಹಿಳೆಯರನ್ನು ಪುರುಷರಿಗೆ ಸರಿ ಸಮಾನ ಎಂದು ಘೋಷಿಸಿದ್ದರೂ ವೃತ್ತಿಪರ ಕ್ಷೇತ್ರದಲ್ಲಿ ಕೆಲಸ ಮಾಡುವ ಬಹುಪಾಲು ಮಹಿಳೆಯರು ಪ್ರತಿನಿತ್ಯ ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ.

ಪುರುಷ ಪ್ರಧಾನ ಸಮಾಜದಲ್ಲಿ ದುಡಿಯುವ ಮಹಿಳೆಯರನ್ನು ನೋಡುವ ರೀತಿಯು ವಿಭಿನ್ನವಾಗಿರುವುದು. ತಮ್ಮ ಅನುಕೂಲಕ್ಕೆ ತಕ್ಕಂತೆ ಮಹಿಳೆಯರನ್ನು ಅನೇಕ ವಿಧವಾಗಿ ಚಿತ್ರಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ. ಔದ್ಯೋಗಿಕ ಕ್ಷೇತ್ರಗಳಲ್ಲಿ ಸಿಗುವ ಉತ್ತಮ ಅವಕಾಶಗಳನ್ನು ತಪ್ಪಿಸಿ ಅದರಿಂದ ವಂಚಿತರನ್ನಾಗಿ ಮಾಡುವ ಒಂದು ವರ್ಗವೂ ಇದೆ. ಪುರುಷರಷ್ಟೇ ಸರಿ ಸಮಾನವಾಗಿ ದುಡಿಯುತ್ತಿದ್ದರು ಮೊದಲಿಗೆ ವೇತನ ತಾರತಮ್ಯ ಲಿಂಗ ತಾರತಮ್ಯ ಬಹುಮುಖ್ಯ ಸಮಸ್ಯೆಯಾಗಿರುವುದು

ಜೀವನದ ಅವಿಭಾಜ್ಯ ಅಂಗ ವೃತ್ತಿ ಜೀವನವೂ ಸಹ. ಜವಾಬ್ದಾರಿ ಮತ್ತು ಅವಕಾಶ ಇರುವಂತೆಯೇ ನಮ್ಮ ವೃತ್ತಿ ಜೀವನವೂ ಸಹ ಜವಾಬ್ದಾರಿಯಿಂದ ಕೂಡಿರುವದು. ಜೀವನದ ಗುಣಮಟ್ಟ ಸಹ ಎಲ್ಲರೂ ಅಪೇಕ್ಷಿಸುವ ವಿಷಯ‌. ಕೆಲಸ ಮತ್ತು ಮನೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರೂ ಆಧುನಿಕ ಮಹಿಳೆ ಇಂದು ಸಮಾಜದ ನಿಂದನೆಗೆ ಒಳಪಡುತ್ತಿದ್ದಾಳೆ. ಬಹುತೇಕ ಮಹಿಳೆಯರು ಗೃಹಿಣಿಯಾಗಿರಬೇಕೆಂದು ಅಪೇಕ್ಷಿಸಿದರೂ ಸಾಧ್ಯವಾಗುವುದಿಲ್ಲ ಆರ್ಥಿಕ ಅನುಕೂಲಕ್ಕೆ ಕುಟುಂಬದ ಹೊರೆಯನ್ನು ಹೆಗಲ ಮೇಲೆ ಸ್ವಲ್ಪಮಟ್ಟಿಗೆ ಹೊರಬೇಕಾಗಿರುತ್ತದೆ.

ಇಂತಹ ಸಂಕಷ್ಟಗಳನ್ನು ಮನೆಯಿಂದ ಕಚೇರಿಯವರೆಗೆ ದಿನನಿತ್ಯ ಎದುರಿಸುತ್ತಿದ್ದರೂ ಆಯಾ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮಹಿಳೆಯರೂ ಇದ್ದಾರೆ. ಮಹಿಳೆಯರ ಬೆಳವಣಿಗೆಯನ್ನು ಸಹಿಸಲಾಗದ ಪುರುಷರು ಅವರನ್ನು ಮಾನಸಿಕವಾಗಿ ಕುಗ್ಗಿಸಲು ನಾನಾ ರೀತಿಯ ಸರ್ಕಸ್ ಗಳನ್ನು ಮಾಡುತ್ತಿರುತ್ತಾರೆ‌. ಸಾಧಾರಣ ಮಟ್ಟಿಗೆ ಎಲ್ಲ ಮಹಿಳೆಯರು ಚಾರಿತ್ರ್ಯ ವಧೆಗೆ ಹೆದರುತ್ತಾರೆ‌. ಅದೇ ಪುರುಷ ವರ್ಗದ ಅಸ್ತ್ರವೂ ಆಗಿರಬಹುದು.

ಯತ್ರ ನಾರ್ಯಸ್ತು ತತ್ರ ಪೂಜ್ಯಂತೆ.. ಎಂಬ ಸನಾತನ ಮಾತಿನಂತೆ, ದೇವ – ದೇವತೆಗಳ ಕಾಲದಿಂದಲೂ ಮಹಿಳೆಯರನ್ನು ಭೋಗ ವಸ್ತುವಾಗಿ ಚಿತ್ರಿಸಿದ್ದೇ ಜಾಸ್ತಿ. ಈ ವಿಷಯ ಪುರುಷ ವರ್ಗಕ್ಕೆ ಖಾರವೆನಿಸಿದರೂ ಸತ್ಯದಿಂದ ಹೊರತಾಗಿಲ್ಲ. ಎಲ್ಲ ಪುರುಷರಿಗೂ ಅನ್ವಯಿಸುವದಿಲ್ಲ. ಈ ಮಾತನ್ನು ಬಹುತೇಕ ಪುರುಷರು ಅಲ್ಲಗಳೆದರೂ, ಸರಿ ಸಮಾನವಾಗಿ ಗೌರವ ಕೊಡುತ್ತೇವೆಂದು ಪ್ರತಿಪಾದಿಸಿದರೂ ಕೇವಲ ಕಾನೂನಿನಲ್ಲಿ ಲಾ ಪಾಯಿಂಟ್‌ ಆಗಿ ಶಿಷ್ಟಾಚಾರವಾಗಿ ಉಳಿದಿದೆಯೇ ಹೊರತು ವಾಸ್ತವದಲ್ಲಿ ನಡೆನುಡಿಯಲ್ಲಿ ಅದೆಲ್ಲೂ ಕಾಣಿಸುತ್ತಿಲ್ಲ.

ಎಲ್ಲರ ಜೀವನದಲ್ಲೂ ಒಂದು ಹೆಣ್ಣು ತಾಯಿಗಾಗಿ ತಂಗಿಯಾಗಿ ಸಂಗಾತಿಯಾಗಿ ಜೀವನದ ಎಲ್ಲಾ ಹಂತಗಳಲ್ಲೂ ಬಹುಮುಖ್ಯ ಪಾತ್ರವನ್ನು ವಹಿಸುತ್ತಾಳೆ. ಕುಟುಂಬದ ಸರ್ವೋತ್ತಮ ಬೆಳವಣಿಗೆಗೆ ಪ್ರತಿಫಲ ಅಪೇಕ್ಷಿಸದೇ ಕೆಲಸ ಮಾಡುತ್ತಾಳೆ. ದುಡಿಯುವ ಮಹಿಳೆಗೂ ಕೆಲಸ ನಿರ್ವಹಿಸುವ ಪೂರಕ ವಾತಾವರಣ ಮುಖ್ಯ.

ಕೆಲಸಕ್ಕೆ ಹೋಗುವ ಮಹಿಳೆಯರ ಬಗ್ಗೆ ದ್ವಂದ್ವ ನಿಲುವನ್ನು ಹೊಂದಿರುವ ವ್ಯಕ್ತಿಗಳು ಆಗಿರಲಿ ಆತರ ಪ್ರವೃತ್ತಿಯವರು ಯಾರೇ ಆಗಿರಲಿ ಈ ಮನೋಭಾವನೆಯಿಂದ ಹೊರಬಂದು ಸ್ವಚ್ಛ ಹೃದಯದಿಂದ ಮಹಿಳೆಯರನ್ನು ಗೌರವಿಸಿ, ಗೌರವ ಕೊಟ್ಟು ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವುದು ಎಲ್ಲರಿಗೂ ಆದರ್ಶವೆಣಿಸುತ್ತದೆ. ಮಹಿಳೆಯರಿಗೂ ಅವರದೇ ಆದ ವ್ಯಕ್ತಿತ್ವವಿದೆ ಅದನ್ನು ಗೌರವಿಸಿ.

– ಶ್ವೇತಾ ಪ್ರಸನ್ನ ಹೆಗಡೆ, ಶಿರಸಿ

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

Tribes

ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡೇ ನಡೆಯಬೇಕಿದೆ ಆದಿವಾಸಿಗಳ ಅಭಿವೃದ್ಧಿ!

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

Ramachandra-Prabhu

‘ಶ್ರೀ ರಾಮಚಂದಿರ – ವೇದಾಂತ ಮಂದಿರ..”

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.