ಪಾರದರ್ಶಕ ವ್ಯವಹಾರ, ಸಿಬಂದಿ ಕಾರ್ಯತತ್ಪರತೆಯಿಂದ ಸಿಕ್ಕಿದ ಗೌರವ: ಡಾ| ಹೆಗ್ಗಡೆ
ಗ್ರಾ. ಯೋಜನೆಗೆ ಐಎಸ್‌ಒ 27001 ಮಾನ್ಯತೆ
Team Udayavani, Mar 16, 2024, 1:39 AM IST
ಬೆಳ್ತಂಗಡಿ: ಗ್ರಾಮೀಣ ಮಹಿಳೆಯರ ಮತ್ತು ಜನರ ಪ್ರಾಮಾಣಿಕತೆ, ವ್ಯವಹಾರ ನಿಷ್ಠೆ ಮತ್ತು ಸಿಬಂದಿಯ ಕಾರ್ಯತತ್ಪರತೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ)ಯು ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆಯಲು ಸಾಧ್ಯವಾಗಿದೆ.
ಇಂಗ್ಲೆಂಡ್‌ನ ಪ್ರತಿಷ್ಠಿತ ಎನ್‌ಕ್ಯುಎ ಸಂಸ್ಥೆಯ ಮೂಲಕ ಯೋಜನೆಯು ಪ್ರತಿಷ್ಠಿತ ಅಂತಾ ರಾಷ್ಟ್ರೀಯ ಐಎಸ್‌ಒ-27001 ದೃಢೀಕರಣ ಮಾನ್ಯತೆಯನ್ನು ಪಡೆದು ಕೊಂಡಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಎಸ್‌ಕೆಡಿಆರ್‌ಡಿಪಿಯ ಕೇಂದ್ರ ಕಚೇರಿಯಲ್ಲಿ ನಡೆದ ಐಎಸ್‌ಒ-27001 ದೃಢೀಕರಣ ಮಾನ್ಯತೆ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರದ ಎಲ್ಲ ಸಂಸ್ಥೆಗಳ ಕೆಲಸ ಕಾರ್ಯ ಹಾಗೂ ವ್ಯವಹಾರಗಳಲ್ಲಿ ಪಾರ ದರ್ಶಕತೆ ಇದೆ. ಯೋಜನೆಯ ಪ್ರತಿಯೊಂದು ವ್ಯವಹಾರದಲ್ಲಿ ತಂತ್ರಜ್ಞಾನ ಬಳಸಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ತಂತ್ರಜ್ಞಾನದ ಅರಿವು ಹಾಗೂ ಬಳಕೆ ಮಾಡುವ ಕುರಿತು ಯೋಜನೆಯು ಮಹತ್ತರ ಪಾತ್ರ ವಹಿಸುತ್ತಿದೆ. ಗ್ರಾಮೀಣ ಮಹಿಳೆಯರು ಟ್ಯಾಬ್ ಬಳಕೆ, ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಬಳಕೆ ಮಾಡುವುದನ್ನು ಗಮನಿಸಿದ ಪ್ರಧಾನಿ ಮೋದಿಯವರು ಡಿಜಿಟಲ್ ಇಂಡಿಯಾ ಸಾಕಾರಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದರು.
ತಂತ್ರಜ್ಞಾನ ಅಳವಡಿಕೆಯಲ್ಲಿ ಯೋಜನೆಯು ಸದಾ ಮುಂದಿದ್ದು, ಐಎಸ್‌ಒ-27001 ದೃಢೀಕರಣ ಮಾನ್ಯತೆಯು ನಮ್ಮ ಕಾರ್ಯ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ. ತಂತ್ರಜ್ಞಾನವನ್ನು ನಾವು ಬಳಸುವ ಂತಾಗಬೇಕು, ಆದರೆ ನಮ್ಮನ್ನು ತಂತ್ರಜ್ಞಾನ ನಿಯಂತ್ರಿಸುವಂತೆ ಆಗಬಾರದು. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.
ಐಎಸ್‌ಒ-27001 ದೃಢೀಕರಣ ಮಾನ್ಯತೆಯನ್ನು ಪ್ರದಾನ ಮಾಡಿದ ಇಂಗ್ಲೆಂಡ್‌ನ ಎನ್‌ಕುÂಎ ಸಂಸ್ಥೆಯ ಬೆಂಗಳೂರಿನ ಕೇಂದ್ರ ಕಚೇರಿಯ ಮಹಾಪ್ರಬಂಧಕ ಸಿ.ಕೆ. ಅಮರ್‌ದೀಪ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಸೇವಾಸಂಸ್ಥೆಗೆ ಈ ಮಾನ್ಯತೆಯನ್ನು ನೀಡಲು ಸಂತೋಷವಾಗುತ್ತಿದೆ. ಒಂದು ಸೇವಾ ಸಂಸ್ಥೆಯು ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ಗ್ರಾಮೀಣ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಡಾ| ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಮತ್ತಷ್ಟು ಉತ್ತಮ ಕೆಲಸವನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಯೋಜನೆಯು ಡಾ| ಹೆಗ್ಗಡೆ ಯವರು ಮಾರ್ಗದರ್ಶನದಲ್ಲಿ ತನ್ನ ವ್ಯವಸ್ಥೆ ಗಳನ್ನು ಪಾರದರ್ಶಕವಾಗಿ ರೂಪಿಸಿಕೊಳ್ಳಲು ಬೇಕಾಗುವ ಎಲ್ಲ ಮಾನ ದಂಡಗಳನ್ನು ಅಳವಡಿಸಿ ಕೊಂಡು ಐಎಸ್‌ಒ-27001 ದೃಢೀ ಕರಣ ಮಾನ್ಯತೆ ಪಡೆದು ಕೊಂಡಿ ರುವುದು ದಾಖಲಾರ್ಹ ವಿಷಯ. ಯೋಜನೆಯು ಸುಸ್ಥಿರ ಅಭಿವೃದ್ಧಿ ಮಾದರಿಯನ್ನು ಸೃಷ್ಟಿಸಿದೆ. ಸ್ವಸಹಾಯ ಸಂಘ ಗಳ ಸದಸ್ಯರ ದಾಖಲೀ ಕರಣ ಮಾಡುವಲ್ಲಿ ಯೋಜನೆಯು ದೇಶದಲ್ಲಿಯೇ ಅತ್ಯುನ್ನತ ಗುಣಮಟ್ಟದ ತಂತ್ರ ಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದರಿಂದಾಗಿ ಸ್ವಸಹಾಯ ಸಂಘದ ಯಾವುದೇ ಸದಸ್ಯರು ಯಾವುದೇ ಆರ್ಥಿಕ ವ್ಯವಹಾರ ವನ್ನು ನಡೆಸಿದರೂ ಅದನ್ನು ದಾಖಲೀಕರಣ ಮಾಡಿ ಸಂಬಂ ಧಿಸಿದ ಬ್ಯಾಂಕ್‌ಗಳಿಗೆ ಮತ್ತು ಸಂಬಂಧಿಸಿದ ಸದಸ್ಯರಿಗೆ ತಲುಪಿಸುವ ವ್ಯವಸ್ಥೆ ಯನ್ನು ಮಾಡಲಾಗಿದೆ. ಸುಮಾರು 55 ಲಕ್ಷ ಸದಸ್ಯರಿಗೆ ಬ್ಯಾಂಕ್, ವಿಮಾ ಸೌಲಭ್ಯಗಳನ್ನು, ಸರಕಾರಿ ಯೋಜನೆಗಳನ್ನು ನೇರವಾಗಿ ಗ್ರಾಮಾಭಿವೃದ್ಧಿ ಯೋಜನೆ ತಲುಪಿಸುತ್ತಿದೆ ಎಂದು ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದರು.
ಯೋಜನೆಯ ಟ್ರಸ್ಟಿ ಹೇಮಾವತಿ ವೀ. ಹೆಗ್ಗಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಮಾನಸ ಕನ್ಸಲ್ಟೆನ್ಸಿ ಮುಖ್ಯಸ್ಥ ಭಾರ್ಗವ್, ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಪೈ ಉಪಸ್ಥಿತರಿದ್ದರು.
ಯೋಜನೆಯ ನಿರ್ದೇಶಕರಾದ ರಾಜೇಶ್ ಶೆಟ್ಟಿ ಮತ್ತು ಸುರೇಶ್ ಮೊಲಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!
ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.