Karnataka: ಸ್ಥಗಿತಗೊಂಡಿದ್ದ “ಶುಚಿ” ಯೋಜನೆಗೆ ಮರುಚಾಲನೆ
-ಕೊರೊನಾ ಬಳಿಕ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ರಾಜ್ಯ ಸರಕಾರದ ಯೋಜನೆಗೆ ಮರುಜೀವ
Team Udayavani, Jan 15, 2024, 5:18 AM IST
ಬೆಂಗಳೂರು: ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ “ಶುಚಿ ಯೋಜನೆ’ಗೆ ಈಗ ಮರುಜೀವ ದೊರಕಿದ್ದು, ಮುಂದಿನ ಹದಿನೈದು ದಿನದೊಳಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ರಾಜ್ಯದ 17.45 ಲಕ್ಷ ಹೆಣ್ಮಕ್ಕಳ ಕೈ ಸೇರುವ ನಿರೀಕ್ಷೆ ಇದೆ.
ಗ್ರಾಮೀಣ ಪ್ರದೇಶಗಳಲ್ಲಿ ಮುಟ್ಟಿನ ಸ್ರಾವದ ನಿರ್ವಹಣೆಗೆ ಹಳೆಯ ಬಟ್ಟೆ ಬಳಸುವುದು ಮತ್ತು ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿರುವುದರಿಂದ ಅನಾರೋಗ್ಯಕ್ಕೆ ಒಳಗಾಗುವುದು ಸಾಮಾನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹದಿಹರೆಯದ ಹೆಣ್ಮಕ್ಕಳಿಗೆ ಋತು (ಮುಟ್ಟಿನ) ಕಾಲದಲ್ಲಿ ಸ್ವತ್ಛತೆ ಅರಿವು ಮೂಡಿಸಲು ಶುಚಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ರಾಜ್ಯ ಸರಕಾರ ಆರೋಗ್ಯ ಇಲಾಖೆ ಮೂಲಕ ಪ್ರೌಢ ಹಾಗೂ ಪದವಿ ಪೂರ್ವ ಶಾಲೆಗಳ ಹೆಣ್ಮಕ್ಕಳಿಗೆ ಸ್ಯಾನಿಟರಿ ನ್ಯಾಪಕಿನ್ ವಿತರಿಸಲಾಗುತ್ತಿದೆ.
ರಾಜ್ಯದಲ್ಲಿ ಕೊರೊನಾ ಬಳಿಕ ಶುಚಿ ಯೋಜನೆ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆಗೆ ಸಂಬಂಧಿಸಿ ಇದುವರೆಗೆ ಹಲವು ಬಾರಿ ಟೆಂಡರ್ ಆಹ್ವಾನ ಪ್ರಕ್ರಿಯೆಗಳು ನಡೆದಿದ್ದವು. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂ ಎಸ್‌ಸಿಎಲ್) ನಿಗದಿ ಪಡಿಸಿದ ದರಕ್ಕೆ ಸಂಸ್ಥೆಗಳು ಟೆಂಡರ್ ಹಾಕಲು ಒಪ್ಪಿರಲಿಲ್ಲ. ಈ ಹಿಂದೆ ಪ್ರತಿ ಯೂನಿಟ್‌ಗೆ 21ರಿಂದ 23 ರೂ. ನಿಗದಿಪಡಿಸಲಾಗಿತ್ತು. ಇನ್ನೂ ಕೆಲವು ಸಂಸ್ಥೆಗಳು ನೀಡಲಾದ ಸ್ಯಾಂಪಲ್‌ಗಳ ಮಾದರಿಗಳು ನಿಗದಿತ ಮಾನದಂಡ ಪೂರೈಸಿಲ್ಲ ಎನ್ನುವ ಕಾರಣಕ್ಕೆ ತಾಂತ್ರಿಕ ಸಮಿತಿ ತಿರಸ್ಕರಿಸಿತ್ತು.
17.45 ಲಕ್ಷ ಫಲಾನುಭವಿಗಳು
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಕೊನೆಯ ಹಂತದ ತಪಾಸಣೆ ಪೂರ್ಣಗೊಳಿಸಲಿದೆ. ಮುಂದಿನ ಹದಿನೈದು ದಿನಗಳಲ್ಲಿ ಅಂದರೆ ಜ.26ರೊಳಗೆ ಶುಚಿ ಯೋಜನೆಗೆ ಮರುಚಾಲನೆ ಸಿಗುವ ನಿರೀಕ್ಷೆ ಇದೆ. ಮೈಸೂರು ವಿಭಾಗದಲ್ಲಿ 3.24 ಲಕ್ಷ, ಕಲಬುರಗಿ 31.52 ಲಕ್ಷ, ಬೆಂಗಳೂರು ವಿಭಾಗ 48.55 ಲಕ್ಷ, ಬೆಳಗಾವಿ ವಿಭಾಗದಲ್ಲಿ 62.3 ಲಕ್ಷ ಸಹಿತ ಒಟ್ಟು 17.45 ಲಕ್ಷ ಅರ್ಹ ಫಲಾನುಭವಿಗಳಿದ್ದಾರೆ. ಒಬ್ಬರಿಗೆ 8 ಶುಚಿ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಕ್ ನೀಡಲಾಗುತ್ತದೆ. ಒಂದರಲ್ಲಿ 10 ನ್ಯಾಪ್‌ಕಿನ್‌ಗಳಂತೆ 80 ನ್ಯಾಪ್‌ಕಿನ್ ಏಕಕಾಲಕ್ಕೆ ವಿತರಿಸಲಾಗುತ್ತದೆ. ಇದರ ಬಳಕೆಗೆ ಎರಡು ವರ್ಷದ ಅವಧಿ ಇದೆ. ಶಾಲೆಗೆ ಸ್ಯಾನಿಟರಿ ಪ್ಯಾಡ್ ವಿತರಿಸುವ ಕೆಲಸವನ್ನು ಟೆಂಡರ್ ವಹಿಸಿಕೊಂಡ ಸಂಸ್ಥೆಯೇ ಮಾಡಲಿದೆ.
40.50 ಕೋಟಿ ಮಂಜೂರು
ರಾಜ್ಯದ ಶಾಲೆ, ಪದವಿಪೂರ್ವ ಹಾಗೂ ವಸತಿ ನಿಲಯದಲ್ಲಿರುವ ಹದಿಹರೆಯದ ಹೆಣ್ಮಕ್ಕಳಿಗೆ ಶುಚಿ ಯೋಜನೆಯಡಿ ಪ್ಯಾಡ್ ವಿತರಿಸಲು 40.50 ಕೋಟಿ ರೂ. ಮಂಜೂರು ಆಗಿದೆ. ಒಂದು ಯೂನಿಟ್ (8 ಸ್ಯಾನಿಟರಿ ನ್ಯಾಪ್‌ಕಿನ್)ಗೆ 27.70 ರೂ. ನಿಗದಿಪಡಿಸಿದ್ದು, ಆ ಮೂಲಕ ಒಬ್ಬ ಫಲಾನುಭವಿಗೆ ಸರಕಾರ ಸುಮಾರು 222 ರೂ. ನಿಗದಿಪಡಿಸಿದೆ.
ಶುಚಿ ಯೋಜನೆಯಡಿಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆಗೆ ಸಂಬಂಧಿಸಿ 4 ವಿಭಾಗದಲ್ಲಿ ಟೆಂಡರ್ ಪೂರ್ಣಗೊಂಡು, ವರ್ಕ್ ಆರ್ಡರ್ ನೀಡಲಾಗಿದೆ. ಕೊನೆ ಹಂತದ ತಪಾಸಣೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ.
-ಚಿದಾನಂದ ಸದಾಶಿವ ವಟಾರೆ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ
ಎಲ್ಲಿ, ಎಷ್ಟು ಸರಬರಾಜು?
ಮೈಸೂರು ವಿಭಾಗ 8,137, ಕಲಬುರಗಿ ವಿಭಾಗ 5,036, ಬೆಂಗಳೂರು ವಿಭಾಗ 10,193, ಬೆಳಗಾವಿ ವಿಭಾಗ 9,602 ಸೇರಿ ಒಟ್ಟು 32,968 ಶಾಲೆ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು, ವಸತಿ ನಿಲಯದ ಸಂಸ್ಥೆಗಳಿಗೆ ಸ್ಯಾನಿಟರಿ ಪ್ಯಾಡ್ ಸರಬರಾಜಾಗಲಿದೆ.
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.