ತವರಿಗೆ ತೆರಳುತ್ತಿರುವ ಕಾರ್ಮಿಕರು: ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆ
ಕಾಮಗಾರಿಗಳಿಗೆ ತಟ್ಟಿದ ಬಿಸಿ
Team Udayavani, May 23, 2020, 5:47 AM IST
ಉಡುಪಿ: ಕೋವಿಡ್-19 ಬಿಸಿಯಿಂದ ಜಿಲ್ಲೆಯಲ್ಲಿದ್ದ ಕಾರ್ಮಿಕರು ತಮ್ಮ ತಮ್ಮ ಊರಿನತ್ತ ಮುಖ ಮಾಡಿದ್ದು ಇದರಿಂದ ಜಿಲ್ಲೆಯಲ್ಲಿ ನಗರಸಭೆಯ ಮತ್ತು ಇತರ ಕಾಮಗಾರಿಯ ಕೆಲಸ ಕಾರ್ಯಕ್ಕೆ ಕಾರ್ಮಿಕರಿಲ್ಲದೆ ತೊಂದರೆ ಪಡುವಂತಾಗಿದೆ.
ವಲಸೆ ಕಾರ್ಮಿಕರು ಊರಿಗೆ ತೆರಳಿದ್ದರಿಂದಾಗಿ ನಗರದ ಮಣಿಪಾಲ ವ್ಯಾಪ್ತಿಯ ಕೈಗಾರಿಕಾ ಪ್ರದೇಶ ಸೇರಿದಂತೆ ನಗರದಲ್ಲಿ ನಡೆಯಬೇಕಿದ್ದ ವಿವಿಧ ಕಾಮಗಾರಿಗಳ ಮೇಲೆಯೂ ಬಿಸಿ ತಟ್ಟಿದೆ. ಕೇಂದ್ರ ರಾಜ್ಯ ನಗರಸಭೆಯಿಂದ ಮಂಜೂರಾಗಿರುವ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಒಳಚರಂಡಿ, ಫುಟ್‌ಪಾತ್ ಸೇರಿದಂತೆ ವಿವಿಧ ಕಾಮಗಾರಿಯ ಗುತ್ತಿಗೆದಾರರಿಗೆ ಕಾರ್ಮಿಕ ಸಮಸ್ಯೆ ಎದುರಾಗಿದ್ದು ಈ ಬಗ್ಗೆ ಜನಪ್ರತಿನಿಧಿ ಅಧಿಕಾರಿಗಳಿಗೆ ಅಹವಾಲು ನೀಡಿದ್ದಾರೆ. ಇನ್ನು ಮಳೆಗಾಲದ ತಯಾರಿಗೂ ಕಾರ್ಮಿಕರ ಕೊರೆತೆ ಕಾಡುತ್ತಿದ್ದು ಅರ್ಧದಲ್ಲಿರುವ ಕಾಮಗಾರಿಗಳನ್ನು ಬೇಗ ಮುಗಿಸಿಕೊಡುವಂತೆ ಜನಪ್ರತಿನಿಧಿಗಳು ಸಾರ್ವಜನಿಕರು ನಗರಸಭೆಯನ್ನು ಆಗ್ರಹಿಸುತ್ತಿದೆ.
ಈಗಾಗಲೇ ಉತ್ತರಪ್ರದೇಶಕ್ಕೆ 1460 ಮಂದಿ,ಝಾರ್ಖಂಡ್ 1,600 ಬಿಹಾರಕ್ಕೆ 600 ಮಂದಿ ಒಟ್ಟು 3660 ಹೆಚ್ಚಿನ ಮಂದಿ ತೆರಳಿದ್ದಾರೆ. ಹಾಗೇ ಹೊರ ಜಿಲ್ಲೆಯಿಂದ ಬಂದ ಸಾವಿರಾರು ಮಂದಿ ಈಗಾಗಲೇ ಊರು ಸೇರಿದ್ದಾರೆ. ಮಧ್ಯಪ್ರದೇಶಕ್ಕೆ 379, ಒಡಿಶಾ 780, ಪಶ್ಚಿಮ ಬಂಗಾಲ 977, ಬಿಹಾರ 1600, ಛತ್ತಿಸ್‌ಗಢ್‌ನ 280, ರಾಜಸ್ತಾನ 379 , ಅಸ್ಸಾಂ 338 ಒಟ್ಟಾರೆ ಜಿಲ್ಲೆಯಿಂದ 4733 ಕಾರ್ಮಿಕರು ಹೊರಡಲು ತಯಾರಿಲ್ಲಿದ್ದಾರೆ. ಹೀಗಾಗಿ ಕಾರ್ಮಿಕರ ಸಮಸ್ಯೆ ಜಿಲ್ಲೆಗೆ ಕಾಡುವ ಎಲ್ಲ ಲಕ್ಷಣ ಸ್ಪಷ್ಟವಾಗಿದೆ. ಈ ಮಧ್ಯೆ ಇತರೆ ಕಟ್ಟಡ ನಿರ್ಮಾಣ, ಅಂಗಡಿ, ಹೋಟೆಲ್, ಟ್ರೇಡ್‌ಸೆಂಟರ್ ಕಡೆಯ ಕಾರ್ಮಿಕರ ಕೊರತೆ ಉಂಟಾಗಿದೆ.
ಗುತ್ತಿಗೆದಾರರಿಗೆ ಕೊರತೆಯಾಗಿದೆ
ಗುತ್ತಿಗೆ ಆಧಾರಿತ ಕೆಲಸ ಮಾಡುವವರಿಗೆ ಕಾರ್ಮಿಕರ ಕೊರತೆ ಆಗಿದೆ. ನಗರಸಭೆಯ ವ್ಯಾಪ್ತಿಯಲ್ಲಿ ಕೆಲಸ ಕಾರ್ಯ ಮಾಡಿಕೊಂಡಿರುವ ಕಾರ್ಮಿಕರ ಕೊರತೆ ಇಲ್ಲ. ಸದ್ಯ ಕೋವಿಡ್-19 ಸೇರಿದಂತೆ ಮಳೆಗಾಲದ ತಯಾರಿ ಎರಡನ್ನು ಸರಿದೂಗಿಸಿಕೊಂಡು ಕೆಲಸ ಕಾರ್ಯಗಳು ನಡೆಯುತ್ತಿದೆ.
-ಆನಂದ್ ಕಲ್ಲೋಳಿಕರ್,
ನಗರಸಭಾ ಪೌರಾಯುಕ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.