ಲಕ್ಷದ್ವೀಪದಿಂದ ಮಂಗಳೂರಿಗರು ವಾಪಸ್
Team Udayavani, May 29, 2020, 9:43 AM IST
ಲಕ್ಷದ್ವೀಪದಿಂದ ಮರಳಿದವರನ್ನು ಶಾಸಕರು ಹೂ ನೀಡಿ ಸ್ವಾಗತಿಸಿದರು.
ಮಂಗಳೂರು: ವಿವಿಧ ಕಾರಣಗಳಿಗೆ ಲಕ್ಷದ್ವೀಪಕ್ಕೆ ತೆರಳಿ ಲಾಕ್‌ಡೌನ್ ಪರಿಣಾಮ ಎರಡು ತಿಂಗಳಿಂದ ಅಲ್ಲಿ ಬಾಕಿಯಾಗಿದ್ದ ಮಂಗಳೂರಿನ 19 ಮಂದಿ ಗುರುವಾರ ನಗರಕ್ಕೆ ಮರಳಿದ್ದಾರೆ. ಲಾಕ್‌ಡೌನ್ ಘೋಷಣೆ ಬಳಿಕ ಮಂಗಳೂರು- ಲಕ್ಷದ್ವೀಪ ನಡುವಿನ ಪ್ರಯಾಣಿಕರ ಹಡಗು ಸಂಚಾರ ಸ್ಥಗಿತವಾಗಿತ್ತು. ಮೂವರು ಮಹಿಳೆಯರೂ ಸೇರಿದಂತೆ 19 ಮಂದಿ ಲಕ್ಷದ್ವೀಪದ ಕವರತ್ತಿ, ಅಗಟ್ಟಿ ಮತ್ತು ಕಿಲ್ತಾನ್ ದ್ವೀಪಗಳಲ್ಲಿ ಬಾಕಿಯಾಗಿದ್ದರು.
ವ್ಯಾಪಾರ ಹಾಗೂ ನಿರ್ಮಾಣ ಕೆಲಸಕ್ಕೆಂದು ತೆರಳಿ ದವರು ಅಲ್ಲಿಗೆ ಕರೆಸಿಕೊಂಡವರ ವಾಸ್ತವ್ಯದಲ್ಲಿ ಹಾಗೂ ಸಂಬಂಧಿಕರ ಮನೆಗೆಂದು ತೆರಳಿದವರು ಅಲ್ಲಿಯೇ ಉಳಿದುಕೊಂಡಿದ್ದರು. ಲಕ್ಷದ್ವೀಪದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಿಲ್ಲ. ಮಂಗಳೂರಿನಲ್ಲಿ ಬಾಕಿಯಾಗಿದ್ದ ಲಕ್ಷದ್ವೀಪದ 89 ಮಂದಿಯನ್ನು ಮೇ 11ರಂದು ಜಿಲ್ಲಾಧಿಕಾರಿಗಳ ವಿಶೇಷ ಅನುಮತಿಯೊಂದಿಗೆ ಕಳುಹಿಸಿಕೊಡಲಾಗಿತ್ತು. ಲಕ್ಷದ್ವೀಪದಿಂದ ಬಂದವರನ್ನು 7 ದಿನಗಳ ಗೃಹ ನಿಗಾದಲ್ಲಿ ಇರುವಂತೆ ಸೂಚಿಸಲಾಗಿದೆ.
ಹೂ ನೀಡಿ ಸ್ವಾಗತ
ಪ್ರಯಾಣಿಕರನ್ನು ಶಾಸಕರಾದ ವೇದದ್ಯಾಸ ಕಾಮತ್, ಐವನ್ ಡಿ’ಸೋಜಾ, ಮೇಯರ್ ದಿವಾಕರ್ ಪಾಂಡೇಶ್ವರ ಹೂ ನೀಡಿ ಸ್ವಾಗತಿಸಿದರು. ಎಲ್ಲರನ್ನೂ ಹಡಗಿನಿಂದ ಇಳಿಯುವ ಮುನ್ನ ತಪಾಸಣೆಗೊಳಪಡಿಸಲಾಯಿತು. ಮಂಗಳೂರಿನ ಪಿಎಲ್ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ಸ್ ಲಿ.ನ ಶ್ರೀನಿವಾಸ್ ಕುಲಾಲ್ ಅವರು ಶಿಪ್ ಆಗಮನದ ಜವಾಬ್ದಾರಿ ನಿರ್ವಹಿಸಿದ್ದರು. ಹಳೆ ಬಂದರಿನ ಅಧಿಕಾರಿ ಗೌಸ್ ಆಲಿ, ಸಹಾಯಕ ಅಧಿಕಾರಿ ನಿರಂಜನ ಮೂರ್ತಿ ಉಪಸ್ಥಿತರಿದ್ದರು.
ಸಾಮಾಜಿಕ ಅಂತರ ನಿರ್ಲಕ್ಷ್ಯ
ವಾಪಸಾದವರನ್ನು ಸ್ವಾಗತಿಸಲು ಶಾಸಕರು, ಅಧಿಕಾರಿಗಳು, ಕೆಲವು ಮಂದಿ ಜನಪ್ರತಿನಿಧಿಗಳ ಬೆಂಬಲಿಗರು ಸೇರಿದಂತೆ 50ಕ್ಕೂ ಅಧಿಕ ಮಂದಿ ಹಳೆ ಬಂದರಿನಲ್ಲಿ ನೆರೆದಿದ್ದರು. ಆದರೆ ಈ ವೇಳೆ ಸಾಮಾಜಿಕ ಅಂತರ ಪಾಲನೆ ಆಗಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.