ಶಿಡ್ಲಘಟ್ಟ: ಕಂದಾಯ ಇಲಾಖೆಯಲ್ಲಿಸಿಬ್ಬಂದಿ ಕೊರತೆ : ಕೆಲಸಕಾರ್ಯಗಳಿಗೆ ಜನಸಾಮಾನ್ಯರ ಪರದಾಟ
Team Udayavani, Dec 5, 2020, 11:11 AM IST
ಚಿಕ್ಕಬಳ್ಳಾಪುರ: ಜಿಲ್ಲೆಯ ರೇಷ್ಮೆ ನಗರ ಎಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ತಾಲೂಕಿನ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ಕೆಲಸ ಕಾರ್ಯಗಳಿಗಾಗಿ ಅಲೆದಾಡುವಂತಾಗಿದ್ದು, ನೌಕರರು ಮಾನಸಿಕ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಬಂದೂದಗಿದೆ.
ನಗರದಲ್ಲಿರುವ ಮಿನಿ ವಿಧಾನಸೌಧ (ಕಂದಾಯ ಇಲಾಖೆ) ಆಶ್ರಯಿಸಿಕೊಂಡು ಪ್ರತಿನಿತ್ಯ ನೂರಾರು ಮಂದಿ ವಿವಿಧ ರೀತಿಯ
ಸರ್ಕಾರಿ ಸೌಲಭ್ಯ ಪಡೆಯಲು ಬರುತ್ತಾರೆ. ಆದರೆ ಇಲ್ಲಿ ಅಗತ್ಯ ಸಿಬ್ಬಂದಿ ಮತ್ತು ಅಧಿಕಾರಿ ಗಳ ಕೊರತೆಯಿಂದ ಒಂದೆಡೆ ಸಾರ್ವಜನಿಕರ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದ್ದರೆ, ಇರುವ ಸಿಬ್ಬಂದಿ ಮತ್ತು ಅಧಿಕಾರಿಗಳು ಅಧಿಕ ಕೆಲಸದ
ಒತ್ತಡದಿಂದ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.
ಅವಧಿಯೊಳಗೆ ಮುಗಿಯಲ್ಲ: ತಾಲೂಕು ಕಚೇರಿಯಲ್ಲಿ ಸಾಮಾನ್ಯವಾಗಿ ಜಮೀನುಗಳಿಗೆ ಸಂಬಂಧಿಸಿದ ವಿಚಾರಗಳನ್ನು
ಮುಂದಿಟ್ಟು ಕೊಂಡು ತಾಲೂಕಿನ ವಿವಿಧ ಭಾಗಗಳಿಂದ ರೈತರು,ಕೃಷಿಕಾರ್ಮಿಕರು ಮತ್ತು ನಾಗರಿಕರು ಆಗಮಿಸುತ್ತಾರೆ.
ಆದರೆ ಕಂದಾಯ ಇಲಾಖೆಯಲ್ಲಿ ಸುಮಾರು ಅರ್ಧಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿ ಕರಕೆಲಸ
ಕಾರ್ಯಗಳು ನಿಗದಿತ ಅವಧಿಯೊಳಗೆ ಆಗದೆ ವಿಳಂಬವಾಗುತ್ತಿವೆ.
ಕೆಲವೊಮ್ಮೆ ತಾಲೂಕು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ನಾಗರಿಕರ ನಡುವೆ ವಾಗ್ವಾದ ನಡೆದಿರುವ
ಪ್ರಸಂಗಗಳು ಸಹ ನಡೆದಿವೆ.
41 ಹುದ್ದೆಗಳು ಖಾಲಿ: ಶಿಡ್ಲಘಟ್ಟ ತಾಲೂಕು ಕಚೇರಿಗೆ 94 ಹುದ್ದೆ ಮಂಜೂರಾಗಿದೆ. ಆದರೇ ಇನ್ನೂ 41 ಹುದ್ದೆಗಳು ಖಾಲಿಯಿದ್ದು ಇರುವ ಸಿಬ್ಬಂದಿ ಮತ್ತು ಅಧಿಕಾರಿಗಳು ಖಾಲಿ ಇರುವ 41 ಸಿಬ್ಬಂದಿ ಮತ್ತು ಅಧಿಕಾರಿಗಳ ಕಾರ್ಯಾಭಾರ ನಿಭಾಯಿಸುವಂತಾಗಿದೆ. ತಹಶೀಲ್ದಾರ್ ಗ್ರೇಡ್-1 ಮತ್ತು2 ಹುದ್ದೆಗಳು ಭರ್ತಿಯಾಗಿದೆ. ಆದರೆಶಿರಸ್ತೇದಾರ/ಉಪತಹಶೀಲ್ದಾರ್
ಶ್ರೇಣಿಯ 3 ಹುದ್ದೆಗಳು ಖಾಲಿಯಿದ್ದು, ಸಾರ್ವಜನಿಕರ ಕೆಲಸ ನಿಭಾಯಿ ಸಲು ತೊಡಕಾಗಿದೆ. 48 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಮಂಜೂರಾಗಿ ದ್ದರೂ ಸಹ ಇನ್ನೂ 19 ಖಾಲಿಯಾಗಿವೆ.
ಇದರಿಂದ ಸರ್ಕಾರದ ಯೋಜನೆಗಳನ್ನು ಪರಿಣಾಮ ಕಾರಿಯಾಗಿ ಅನುಷ್ಠಾನ ಗೊಳಿಸಲು ಇರುವ ಅಧಿಕಾರಿಗಳು ಮತ್ತು
ಸಿಬ್ಬಂದಿ ಹೆಚ್ಚುವರಿಯಾಗಿ ಸೇವೆ ಸಲ್ಲಿಸುವಂತಾಗಿದೆ.
ತಾಲೂಕುಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳಕೊರತೆ ಇರುವುದು ಸತ್ಯ. ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಾರ್ವಜನಿಕರ ಸೇವೆ ಯಲ್ಲಿ ತೊಂದರೆ ಆಗದಂತೆಕ್ರಮಕೈಗೊಳ್ಳಲಾಗಿದೆ. ಸಿಬ್ಬಂದಿ ಕೊರತೆ ನೀಗಿಸಿದರೆ ಕೆಲಸ ಕಾರ್ಯಗಳು ಬೇಗ ಆಗಲಿವೆ.
– ಕೆ.ಅರುಂಧತಿ, ತಹಶೀಲ್ದಾರ್ ಶಿಡ್ಲಘಟ್ಟ
ಶಿಡ್ಲಘಟ್ಟ ತಾಲೂಕುಕಚೇರಿ ಸಹಿತಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು,ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಿಗಗೊಳಿಸಿರುವ ಅವಧಿಯಲ್ಲಿಕಡತ ವಿಲೇವಾರಿಗೆ ವಿಳಂಬವಾಗುತ್ತದೆ. ಹುದ್ದೆ ಭರ್ತಿ ಮಾಡಲು ಹಿರಿಯ ಅಧಿಕಾರಿಗಳ
ಗಮನಕ್ಕೆ ತರಲಾಗಿದೆ.
– ಮಂಜುನಾಥ್, ಅಧ್ಯಕ್ಷ, ಕಂದಾಯ ಇಲಾಖೆ ನೌಕರರ ಸಂಘ ಶಿಡ್ಲಘಟ್ಟ
ಶಿಡ್ಲಘಟ್ಟ ತಾಲೂಕುಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು, ರೈತರುಕೆಲಸ ಕಾರ್ಯಗಳಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾ ಗಿದೆ.ಕೆಲವೊಮ್ಮೆ ತಾಂತ್ರಿಕ ಅಡಚಣೆಯಿಂದಕಿರಿಕಿರಿ ಅನುಭವಿಸುವಂತಾಗಿದೆ. ಸರ್ಕಾರಕೂಡಲೇಕಂದಾಯ ಇಲಾಖೆಯಲ್ಲಿಖಾಲಿ ಇರುವ ಹುದ್ದೆ ಭರ್ತಿಗೊಳಿಸಬೇಕು.
– ಕದಿರಿನಾಯಕನಹಳ್ಳಿ ನಾರಾಯಣಸ್ವಾಮಿ, ಹಿರಿಯ ನಾಗರಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.