ರಾಜ್ಯಾದ್ಯಂತ ಕಡತ ಯಜ್ಞ: ಸಚಿವ ಅಶೋಕ್
Team Udayavani, Feb 20, 2022, 6:10 AM IST
ಉಡುಪಿ/ಬ್ರಹ್ಮಾವರ: ಧೂಳು ತಿನ್ನುತ್ತಿರುವ ಕಂದಾಯ ಕಡತಗಳಿಗೆ ಮುಕ್ತಿ ನೀಡಲು ಮುಂದಿನ 15 ದಿನದೊಳಗೆ ಕಡತ ಯಜ್ಞಕ್ಕೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಶನಿವಾರ ಬ್ರಹ್ಮಾವರ ಕೊಕ್ಕರ್ಣೆಯಲ್ಲಿ ಗ್ರಾಮ ವಾಸ್ತವ್ಯ ನಿಮಿತ್ತ ಜರಗಿದ ಜನಸ್ಪಂದನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಚಿವ ಸುನಿಲ್ ಕುಮಾರ್ ಕಾರ್ಕಳ ಕ್ಷೇತ್ರದಲ್ಲಿ ಕೈಗೊಂಡ ಕಡತ ವಿಲೇವಾರಿ ಪ್ರೇರಣೆಯಾಗಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಿ ಹಲವು ವರ್ಷಗಳ ಜನರ ಕಂದಾಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲಾಗುವುದು. ಅಧಿಕಾರಿ ಗಳು ಇದನ್ನು ಸಮರ್ಥ ವಾಗಿ ನಿರ್ವಹಿಸುವ ವಿಶ್ವಾಸ ವಿದೆ. ಬಾಕಿ ಕಡತಗಳಿಗೆ ಮುಕ್ತಿ ನೀಡುವ ಕೆಲಸ ಆಗಬೇಕು ಎಂದರು.
ವಸತಿ ನಿರ್ಮಾಣಕ್ಕಾಗಿ ಕೃಷಿ ಭೂಮಿ ಪರಿವರ್ತನೆಗೆ ಹಳೆಯ ಕಾನೂನು ಅಡ್ಡಿಯಾಗಿದ್ದು, ಮಧ್ಯ ವರ್ತಿಗಳ ಹಾವಳಿ ಹೆಚ್ಚಿದೆ. ಇದನ್ನು ಬಗೆಹರಿಸಲು ಸರಕಾರ ಗಂಭೀರ ಹೆಜ್ಜೆ ಇರಿಸಿದ್ದು, ಕಾನೂನು ತಿದ್ದುಪಡಿ ಮಾಡಲಾಗುವುದು ಎಂದರು.
ಜನರ ಅನುಕೂಲಕ್ಕಾಗಿ ಕಂದಾಯ ಕಾನೂನು, ನಿಯಮವನ್ನು ಸರಳೀಕೃತ ಮಾಡಲಾಗುವುದು. ಓಬಿರಾಯನ ಕಾನೂನಿಗೆ ತಿಲಾಂಜಲಿ ಇಡುತ್ತೇವೆ. ಜನರನ್ನು ಕಚೇರಿಗೆ ಅಲೆಸುವುದಿಲ್ಲ. ಕಂದಾಯ ಇಲಾಖೆ ಜನ ಸ್ನೇಹಿ ಯಾಗ ಲಿದೆ. ಜನರಿಗೆ ಸಹಾಯ ಆಗುವಂಥ ಕಾನೂನು ತರುತ್ತೇವೆ ಎಂದರು.
400 ಕೋ.ರೂ., ಅಕ್ರಮ ಪತ್ತೆ
ಸಾಮಾಜಿಕ ಪಿಂಚಣಿ ಯೋಜನೆ ಯಲ್ಲಿ ಈ ವರ್ಷ 400 ಕೋ.ರೂ. ಅಕ್ರಮ ಪತ್ತೆ ಮಾಡಿ ದ್ದೇವೆ. ಅದರಲ್ಲಿ 4 ಲಕ್ಷ ನಕಲಿ ದಾಖಲೆಗಳಿದ್ದವು. ಪ್ರಸ್ತುತ ಸಾಮಾ ಜಿಕ ಪಿಂಚಣಿ ಯೋಜನೆಗೆ ಎಲ್ಲರ ಆಧಾರ್ ಕಾರ್ಡ್ ಲಿಂಕ್ ಮಾಡಿ ದ್ದೇವೆ. ಇದರಿಂದ ಮುಂದೆ ಅಕ್ರಮ ನಡೆಯಲು ಸಾಧ್ಯವಿಲ್ಲ. ಈ ಯೋಜನೆಗೆ ಪ್ರತೀ ವರ್ಷ 7,500 ಕೋ.ರೂ. ಕೊಡುತ್ತಿದ್ದೇವೆ ಎಂದರು.
ಸಚಿವ ಸುನಿಲ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಂದಾಯ ಇಲಾಖೆ ಪ್ರ. ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ., ಜಿ. ಪಂ. ಸಿಇಒ ಡಾ| ನವೀನ್ ಭಟ್, ಎಡಿಸಿ ಸದಾಶಿವ ಪ್ರಭು, ಕುಂದಾಪುರ ಎಸಿ ರಾಜು, ತಹಶೀಲ್ದಾರರಾದ ರಾಜಶೇಖರ ಮೂರ್ತಿ, ಪ್ರದೀಪ್ ಇದ್ದರು.
ನಾನೂ ಸರಕಾರಿ ಶಾಲೆಯಲ್ಲಿ ಓದಿದವ
ಬ್ರಹ್ಮಾವರ: ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವುದಕ್ಕೆ ಕೀಳರಿಮೆ ಬೇಡ. ನಾನೂ ಜಾಲ ಹಳ್ಳಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಓದಿದವ. ನಾನೀಗ ಈ ಮಟ್ಟಕ್ಕೆ ಬೆಳೆ ದಿದ್ದೇನೆ ಎಂದು ಸಚಿವ ಅಶೋಕ್ ಹೇಳಿದರು.
ಗ್ರಾಮ ವಾಸ್ತವ್ಯ ದನ್ವಯ ಆರೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಶನಿ ವಾರ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತ ನಾಡಿ, ಯಾವುದೇ ಕ್ಷೇತ್ರ ಆರಿಸಿ ಕೊಂಡರೂ ಕಠಿನ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದರು.
ಕಲಾಂ ಮೀನುಗಾರಿಕೆ ವೃತ್ತಿ ಮೂಲದಿಂದ ಬಂದವರು, ಪ್ರಧಾನಿ ಮೋದಿ ಚಹಾ ಮಾರು ತ್ತಿದ್ದವರು. ನಮಗೆ ಇಂಥವರು ಆದರ್ಶರಾಗ ಬೇಕು. ಪರಿಶ್ರಮದಿಂದ ನಿರ್ದಿಷ್ಟ ಗುರಿ ತಲುಪಿದ ಬಳಿಕ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಕಂದಾಯ ಇಲಾಖೆ ಪ್ರ. ಕಾರ್ಯದರ್ಶಿ ತುಷಾರ್ ಗಿರಿನಾಥ್, ಡಿ.ಸಿ. ಕೂರ್ಮಾ ರಾವ್, ಜಿ.ಪಂ. ಸಿಇಒ ಡಾ| ನವೀನ ಭಟ್, ಆರೂರು ಗ್ರಾ.ಪಂ. ಅಧ್ಯಕ್ಷೆ ಮಮತಾ ಶೆಟ್ಟಿ, ಉಪಾ ಧ್ಯಕ್ಷ ಗುರುರಾಜ ರಾವ್ ಇದ್ದರು. ಸಚಿವರು ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ವೀಕ್ಷಿಸಿ ರಾತ್ರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದರು.
ಕೊರಗರ ಮನೆಯಲ್ಲಿ ಉಪಾಹಾರ
ರವಿವಾರ ಬೆಳಗ್ಗೆ ಕೆಂಜೂರು ಕುಮಾರ ಕೊರಗರ ಮನೆಯಲ್ಲಿ ಉಪಾಹಾರವನ್ನು ಸಚಿವರು ಸ್ವೀಕರಿಸಿ ಬೆಂಗಳೂರಿಗೆ ತೆರಳುವರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.