Education: ಗ್ರಹಣ ಹಿಡಿದಿದ್ದ ಆತ್ಮರಕ್ಷಣೆ ಕಲೆಗೆ ಮರುಜೀವ!

ಶಾಲಾ ಬಾಲಕಿಯರಿಗೆೆ ಕರಾಟೆ ತರಬೇತಿ - ತರಬೇತಿ ಅವಧಿ ವಿಸ್ತರಣೆಗೆ ಆಗ್ರಹ

Team Udayavani, Nov 17, 2023, 1:31 AM IST

kar

ಕಾರ್ಕಳ: ಸರಕಾರಿ ಪ್ರೌಢಶಾಲೆಗಳಲ್ಲಿ ಜಾರಿಯಲ್ಲಿದ್ದು ನಾಲ್ಕು ವರ್ಷಗಳಿಂದ ಗ್ರಹಣ ಹಿಡಿದಿದ್ದ ಬಾಲಕಿಯರ ಆತ್ಮರಕ್ಷಣೆ ಕಲೆ (ಕರಾಟೆ)ಗೆ ಮರುಜೀವ ಸಿಕ್ಕಿದೆ.

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು 2023-24ನೇ ಸಾಲಿನಲ್ಲಿ ರಾಜ್ಯದ ಸರಕಾರಿ ಪ್ರೌಢಶಾಲೆಗಳ 9ನೇ ತರಗತಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ ತರಬೇತಿ ನೀಡಲು ಪ್ರತೀ ಶಾಲೆಗೆ ಘಟಕ ವೆಚ್ಚ 3 ಸಾವಿರ ರೂ.ಗಳಂತೆ ಎಲ್ಲ ಜಿಲ್ಲೆಗಳ 5,307 ಶಾಲೆಗಳಿಗೆ ಸುಮಾರು 1.59 ಕೋಟಿ ರೂ.ಗಳನ್ನು ಸರಕಾರ ಮಂಜೂರುಗೊಳಿಸಿದೆ.

2013-14ರಲ್ಲಿ ರಾಜ್ಯ ಸರಕಾರ ಯೋಜನೆಯನ್ನು ಜಾರಿಗೆ ತಂದಿತ್ತು. ವಾರಕ್ಕೆ 2 ಅವಧಿಯಂತೆ 3ರಿಂದ 4 ತಿಂಗಳಲ್ಲಿ 24 ಅವಧಿ ಬೋಧನೆ ಮಾಡಲಾಗುತ್ತಿತ್ತು. ಆದರೆ 2017ರ ಸೆಪ್ಟಂ ಬರ್‌ನಲ್ಲಿ ತರಬೇತಿ ಸ್ಥಗಿತಗೊಂಡಿತ್ತು.

ಆರಂಭದಲ್ಲಿ 3 ತಿಂಗಳ ಒಟ್ಟು ಬೋಧನಾ ಅವಧಿಗೆ 2,400 ರೂ. ಗೌರವಧನ ನೀಡಲಾಗುತ್ತಿತ್ತು. 2017-18ರಲ್ಲಿ 9 ಸಾವಿರ ರೂ.ಗಳಿಗೆ ಏರಿಕೆಯಾಗಿತ್ತು. 600ಕ್ಕೂ ಅಧಿಕ ಕರಾಟೆ ಶಿಕ್ಷಕರು ನೋಂದಾಯಿಸಿಕೊಂಡಿದ್ದು, 2-3 ಶಾಲೆಗಳಲ್ಲಿ ತರಬೇತಿ ನೀಡುತ್ತ ಬದುಕು ಕಟ್ಟಿಕೊಂಡಿ ದ್ದರು. ಯೋಜನೆ ಯೋಜನೆ ನನೆ ಗುದಿಗೆ ಬಿದ್ದ ಬಳಿಕ ಅವರ ಬದುಕು ಅತಂತ್ರವಾಗಿತ್ತು.

ಅನುಷ್ಠಾನ ಹೇಗೆ?
ನವೆಂಬರ್‌ ಅಂತ್ಯದೊಳಗೆ ಆರ್ಹ ತರಬೇತುದಾ ರರನ್ನು ಆಯ್ಕೆ ಮಾಡಿ ಎಸ್‌ಡಿಎಂಸಿ ಸಭೆ ಕರೆದು ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿನಿಯರ ಹಿತರಕ್ಷಣೆ ಕೇಂದ್ರವಾಗಿಟ್ಟುಕೊಂಡು ದೂರು ಬರದಂತೆ ಪರಿಣಾಮಕಾರಿ ಯಾಗಿ ತರಬೇತಿ ನೀಡಬೇಕಿದೆ. ತರಬೇತಿ ವೇಳೆ ದೈಹಿಕ ಶಿಕ್ಷಣ ಶಿಕ್ಷಕರ ಉಪಸ್ಥಿತಿ ಕಡ್ಡಾಯ.

ಕೇವಲ 7 ತಾಸು!
ಮರಳಿ ಆರಂಭಿಸಿದ ಆತ್ಮರಕ್ಷಣೆ ಕಲೆ ತರಬೇತಿಯ ಒಟ್ಟು ಅವಧಿ ಕೇವಲ 7 ತಾಸು. ಇದರಿಂದ ಹೆಚ್ಚಿನ ಪ್ರಯೋಜನವಾಗದು ಎನ್ನುವ ಅಭಿಪ್ರಾಯ ಪೋಷಕರದು. ಕಡಿಮೆ ಅವಧಿಯಾದ್ದರಿಂದ ಕರಾಟೆ ಶಿಕ್ಷಕರು ತರಬೇತಿ ನೀಡಲು ಹಿಂದೇಟು ಹಾಕುವ ಸಂಭವವೇ ಹೆಚ್ಚು. ಕನಿಷ್ಠ 3ರಿಂದ 4 ತಿಂಗಳ ಅವಧಿಗೆ ನಿಗದಿಪಡಿಸಿದ್ದರೆ ಹಳ್ಳಿಯ ಮಕ್ಕಳಿಗೆ ಅನುಕೂಲವಾಗುತ್ತಿತ್ತು ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್‌ ಪೂಜಾರಿ ಬೆಳ್ಮಣ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಲಕಿಯರ ಆತ್ಮರಕ್ಷಣೆ ಕಲೆ ಯೋಜನೆ ಮರು ಜಾರಿಯಾಗಲಿದ್ದು, ನವೆಂಬರ್‌ – ಡಿಸೆಂಬರ್‌ ಅವಧಿಯಲ್ಲಿ ತರಬೇತಿ ನೀಡಲಾಗುವುದು. ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.
– ಗಣಪತಿ, ದಯಾನಂದ ನಾಯಕ್‌ ಡಿಡಿಪಿಐಗಳು, ಉಡುಪಿ, ದಕ್ಷಿಣ ಕನ್ನಡ

ಹೆಣ್ಣು ಮಕ್ಕಳ ರಕ್ಷಣೆ ತರಬೇತಿಯ ಉದ್ದೇಶ. ಆದರೆ ಅಲ್ಪಾವಧಿಯ ತರಬೇತಿಯಿಂದ ವಿಶೇಷ ಪ್ರಯೋಜನವಾಗದು. ಪುನಾರಂಭಿಸಿದ್ದರೂ ಆರ್ಥಿಕ ಭಾರದ ನೆಪವೊಡ್ಡಿ ಕಡಿಮೆ ಅವಧಿಗೆ ಇಳಿಸಲಾಗಿದೆ. ಅವಧಿ ಹೆಚ್ಚಿಸುವಂತೆ ಮನವಿ ಸಲ್ಲಿಸಲಾಗುವುದು.
– ನದೀಮ್‌, ಅಧ್ಯಕ್ಷ, ರಾಜ್ಯ ಕೀಡಾ ಕರಾಟೆ ಶಿಕ್ಷಕರ ಸಂಘ ಬೆಂಗಳೂರು

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Kota-Shrinivas

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

puttige-5

Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ

UP-Puttige

Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.