ನಶಿಸಿ ಹೋಗಿದ್ದ ಅಲಸಂದೆ ತಳಿಗೆ ಮರುಜೀವ! ಯಾವ ಜಿಲ್ಲೆಗೆ ಈ ತಳಿ ಸೂಕ್ತ?

ಹೊಸ ತಳಿಯಾದ ಅಲಸಂದೆ ಕೆಬಿಸಿ 12ನ್ನು ಅಭಿವೃದ್ಧಿ ಪಡಿಸಲಾಗಿದೆ

Team Udayavani, Oct 7, 2024, 6:08 PM IST

ನಶಿಸಿ ಹೋಗಿದ್ದ ಅಲಸಂದೆ ತಳಿಗೆ ಮರುಜೀವ! ಯಾವ ಜಿಲ್ಲೆಗೆ ಈ ತಳಿ ಸೂಕ್ತ?

ಉದಯವಾಣಿ ಸಮಾಚಾರ
ಬೆಂಗಳೂರು: ಕೀಟಬಾಧೆಯಿಂದ ನಶಿಸಿ ಹೋದ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಳಿ ಅಲಸಂದೆ ಸಿ-152ರ ತಳಿಯನ್ನು ಹೋಲುವ “ಅಲಸಂದೆ ಕೆಬಿಸಿ-12’ನ್ನು ಜಿಕೆವಿಕೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು, ನವೆಂಬರ್‌ ತಿಂಗ ಳ ಕೃಷಿ ಮೇಳದಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ.

ಮಾಡ್ರನ್‌ ಅಸಿಸ್ಟೆಡ್‌ ಬ್ಯಾಕ್‌ಕ್ರಾಸ್‌ ಬ್ರಿಡಿಂಗ್‌ ಅಡ್ವಾನ್ಸ್‌ ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು ಸಂಶೋಧನೆ ನಡೆಸಿ, ಎರಡು ವಿವಿಧ ಅಲಸಂದೆ ತಳಿಗಳಿಂದ ರೋಗನಿರೋಧಕ
ಶಕ್ತಿಯನ್ನು ತೆಗೆದು ಹೊಸ ತಳಿಯಾದ ಅಲಸಂದೆ ಕೆಬಿಸಿ 12ನ್ನು ಅಭಿವೃದ್ಧಿ ಪಡಿಸಲಾಗಿದೆ. ಸತತ 10 ವರ್ಷಗಳ ಸಂಶೋಧನೆ ಮಾಡಿ ಅಭಿವೃದ್ಧಿ ಪಡಿಸಿದ ತಳಿ ಈಗಾಗಲೇ ವಿವಿಧೆಡೆ ಪ್ರಾಯೋಗಿಕ ಪರೀಕ್ಷೆಗೆ ಒಪಡಿಸಿದ್ದು, ಉತ್ತಮ ಇಳುವರಿ ಕೊಡುತ್ತಿರುವುದರಿಂದ ರೈತರಿಗೆ ಪರಿಚಯಿಸಲು ಮುಂದಾಗಿದೆ.

ವಿಶೇಷ ರೋಗನಿರೋಧ ಶಕ್ತಿ: ಅಲಸಂದೆ ಸಿ-152 ತಳಿಯು ದುಂಡಾಣು ಹಾಗೂ ನಂಜಾಣು ರೋಗದಿಂದ ನಶಿಸಿ ಹೋಗಿತ್ತು.
ಜತೆಗೆ ಸಿ-152 ತಳಿಗೆ ಬೇಡಿಕೆಯಿದ್ದರೂ, ಕೀಟಾ ಭಾದೆಯಿಂದ ರೈತರು ಈ ಬೆಳೆ ಬೆಳೆಯಲು ಮುಂದಾಗುತ್ತಿರಲಿಲ್ಲ. ಈ  ಹಿನ್ನೆಲೆಯಲ್ಲಿ ಅಲಸಂದೆ ಕೆಬಿಸಿ-12 ತಳಿಯನ್ನು ಸಂಶೋಧನೆ ಮಾಡಲಾಗಿದೆ. ಇದು ದುಂಡಾಣು ಎಲೆ ಅಂಗಮಾರಿ, ನಂಜಾಣು, ಒಣಬೇರು ಕೊಳೆ ರೋಗದ ವಿರುದ್ಧ ಹೋರಾಡುವ ಪ್ರತಿರೋಧಕತೆಯನ್ನು ಹೊಂದಿದೆ.

ಹೆಚ್ಚು ಇಳುವರಿ-ಕಡಿಮೆ ಅವಧಿ: ಅಲಸಂದೆ ಕೆಸಿಬಿ ತಳಿ 12ಯು ನಾಟಿ ಮಾಡಿದ 83 ದಿನಗಳಿಗೆ ಕಟಾವಿಗೆ ಬರಲಿದೆ. ಸುಮಾರು
54.07ಸೆ.ಮೀ. ಎತ್ತರ ಬೆಳೆಯುವ ಈ ತಳಿಯು ಎಕರೆಗೆ ಸುಮಾರು 13 ರಿಂದ 14ಕ್ವಿಂಟಾಲ್‌ ಇಳುವರಿ ಕೊಡಲಿದೆ. ಇದರ ಕಾಳು ತಿಳಿಯಾದ ಕಂದು ಬಣ್ಣದಿಂದ ಕೂಡಿದ್ದು, ನೋಡಲು ಅಕರ್ಷಕವಾಗಿರಲಿದೆ. ಇನ್ನೂ ಅಲಸಂದೆ ಕೆಸಿಬಿ-9 ನಾಟಿ ಮಾಡಿದ 93 ದಿನಗಳಿಗೆ ಕಟಾವಿಗೆ ಬಂದರೆ, ಒಂದು ಎಕರೆಗೆ 11 ರಿಂದ 12 ಕ್ವಿಂಟಾಲ್‌ ಇಳುವರಿ ನೀಡಲಿದೆ. ಇದರೊಂದಿಗೆ ಇದರಲ್ಲಿ ರೋಗನಿರೋಧಕದ ಕ್ಷಮತೆ ಕೆಸಿಬಿ12ಕ್ಕೆ ಹೋಲಿಕೆ ಮಾಡಿದರೆ ತೀರಾ ಕಡಿಮೆ ಇದೆ.

ಯಾವ ಜಿಲ್ಲೆಗೆ ಈ ತಳಿ ಸೂಕ್ತ?
ಹೊಸ ಅಲಸಂದೆ ತಳಿ ಕೆಬಿಸಿ 12 ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ಸೂಕ್ತವಾಗಿದೆ. ಇದುವರೆಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಲಸಂದೆ ಕೆಬಿಸಿ 12 ತಳಿಯನ್ನು ಬೆಳೆಸಿದ್ದು, ಉತ್ತಮ ಇಳುವರಿ ಬಂದಿದೆ. ಬೆಂಗಳೂರು ಗ್ರಾಮಾಂತರ, ನಗರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ,ಕೊಡಗು, ಶಿವಮೊಗ್ಗ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಹೊಸ ತಳಿ ಬೆಳೆಸಲು ಸೂಕ್ತವಾದ ಸ್ಥಳವಾಗಿದೆ.

ಅಲಸಂದೆ ತಳಿ ಕೆಬಿಸಿ-12 ಜುಲೈ-ಸೆಪ್ಟೆಂಬರ್‌ ಹಾಗೂ ಜನವರಿ-ಫೆಬ್ರವರಿ ಮಧ್ಯದಲ್ಲಿ ನಾಟಿ ಮಾಡಲು ಸೂಕ್ತ ಅವಧಿಯಾಗಿದೆ. ಅಲಸಂದೆಗಳನ್ನು ಬಹುವಾಗಿ ಕಾಡುವ ರೋಗಗಳ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿಯನ್ನು ಹೊಂದಿರುವುದರ ಜತೆಗೆ ಉತ್ತಮ ಇಳುವರಿಯನ್ನು ಸಹ ನೀಡಲಿದೆ.
●ಡಾ.ಎಚ್‌.ಸಿ. ಲೋಹಿತಾಶ್ವ, ಹಿರಿಯ ವಿಜ್ಞಾನಿ, ಜಿಕೆವಿಕೆ

■ ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

kiran rijiju

Congress  ಅಲ್ಪಸಂಖ್ಯಾಕ ಸಚಿವಾಲಯವನ್ನು ಮುಸ್ಲಿಂ ವ್ಯವಹಾರಗಳ ಸಚಿವಾಲಯ ಮಾಡಿತ್ತು..

1-sadsdas

UP; ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋ*ಟ: ಇಬ್ಬರು ಸಾ*ವು, ಇಬ್ಬರು ಗಂಭೀರ

Cast-census-CM

Cast Census: ಜಾತಿಗಣತಿ ವರದಿ ಕುರಿತು ಅ.18ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವೆವು: ಸಿಎಂ

mutalik (2)

Israel ಮಾದರಿಯಲ್ಲಿ ಹೊರ ಮತ್ತು ಆಂತರಿಕ ಶತ್ರುಗಳ ವಿರುದ್ಧ ಹೋರಾಡಬೇಕು : ಮುತಾಲಿಕ್

1-wqewqewq

BBK11; ನೀನೇನು ದೊಡ್ಡ ಡಾನ್ ಆ..!!;ಕ್ಯಾಪ್ಟನ್ ಹಂಸಾಗೆ ತಲೆನೋವಾದ ಜಗದೀಶ್

1-caa

Chennai air show ಅವಘಡ; ವಿಚಾರ ರಾಜಕೀಯ ಮಾಡಬೇಡಿ: ತಮಿಳುನಾಡು ಸರಕಾರ

manish sisodia

AAP;ಎಂಪಿ ಮೇಲೆ ಇಡಿ ದಾಳಿ: ಸೋಲಿಸಲಾಗದೆ ಮೋದಿ ಈ ರೀತಿ ಮಾಡುತ್ತಿದ್ದಾರೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chir

Video viral; ಬನ್ನೇರುಘಟ್ಟ ಉದ್ಯಾನವನದಲ್ಲಿ ಸಫಾರಿ ಬಸ್‌ಗೆ ನುಗ್ಗಲು ಮುಂದಾದ ಚಿರತೆ!

City Police Commissioner: ರಾತ್ರಿ ನಡೆಯುವ ಅಪರಾಧಗಳ ಮಾಹಿತಿ ನೀಡುವುದು ಕಡ್ಡಾಯ

City Police Commissioner: ರಾತ್ರಿ ನಡೆಯುವ ಅಪರಾಧಗಳ ಮಾಹಿತಿ ನೀಡುವುದು ಕಡ್ಡಾಯ

Bengaluru: ಅಂಚೆ ಕಚೇರಿಯಲ್ಲಿ ಮಾದಕ ವಸ್ತು ತುಂಬಿದ್ದ 626 ವಿದೇಶಿ ಪಾರ್ಸೆಲ್‌!

Bengaluru: ಅಂಚೆ ಕಚೇರಿಯಲ್ಲಿ ಮಾದಕ ವಸ್ತು ತುಂಬಿದ್ದ 626 ವಿದೇಶಿ ಪಾರ್ಸೆಲ್‌!

BBMP: ಇನ್ಮುಂದೆ ಸಿಗರೇಟ್‌ ತುಂಡುಗಳ ಪ್ರತ್ಯೇಕ ಸಂಗ್ರಹ

BBMP: ಇನ್ಮುಂದೆ ಸಿಗರೇಟ್‌ ತುಂಡುಗಳ ಪ್ರತ್ಯೇಕ ಸಂಗ್ರಹ

Fraud: ಪಾರ್ಟ್‌ಟೈಮ್‌ ಜಾಬ್‌ ಹೆಸರಿನಲ್ಲಿ ಯುವಕನಿಗೆ 2.58 ಲಕ್ಷ ರೂ. ವಂಚನೆ

Fraud: ಪಾರ್ಟ್‌ಟೈಮ್‌ ಜಾಬ್‌ ಹೆಸರಿನಲ್ಲಿ ಯುವಕನಿಗೆ 2.58 ಲಕ್ಷ ರೂ. ವಂಚನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

kiran rijiju

Congress  ಅಲ್ಪಸಂಖ್ಯಾಕ ಸಚಿವಾಲಯವನ್ನು ಮುಸ್ಲಿಂ ವ್ಯವಹಾರಗಳ ಸಚಿವಾಲಯ ಮಾಡಿತ್ತು..

fraudd

Bramavara: ಟಾಟಾ ಪ್ಲೇ ಅಳವಡಿಕೆ ನೆಪದಲ್ಲಿ ವಂಚನೆ

1

Udupi: ಅಸಹಾಯಕ ಸ್ಥಿತಿಯಲ್ಲಿದ್ದ ಬಾಲಕಿಯ ರಕ್ಷಣೆ

1-sadsdas

UP; ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋ*ಟ: ಇಬ್ಬರು ಸಾ*ವು, ಇಬ್ಬರು ಗಂಭೀರ

Cast-census-CM

Cast Census: ಜಾತಿಗಣತಿ ವರದಿ ಕುರಿತು ಅ.18ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವೆವು: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.