ರಿಯಾಜ್ ಭಟ್ಕಳ್ ಸಹಚರ ಉಗ್ರನ ತೀವ್ರ ವಿಚಾರಣೆ!
Team Udayavani, Sep 26, 2019, 11:00 PM IST
ಬೆಂಗಳೂರು: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ 2015ರ ಗಣರಾಜ್ಯೋತ್ಸವಕ್ಕೆ ಭಾರತಕ್ಕೆ ಆಗಮಿಸಿದ್ದ ವೇಳೆ ದೇಶದ ಹಲವೆಡೆ ಬಾಂಬ್‌ಸ್ಫೋಟ ನಡೆಸಲು ರೂಪಿಸಿದ್ದ ಸಂಚಿನ ಮಾಸ್ಟರ್‌ವೆುçಂಡ್, ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರ ಭಟ್ಕಳ ಮೂಲದ ಜೈನುಲ್ಲಾಬ್ಬೀನ್ ಎಂಬ ಮಾಹಿತಿ ಹೊರಬಿದ್ದಿದೆ.
ಈ ಸಂಚು ರೂಪಿಸಿದ ಆರೋಪ ಸಂಬಂಧ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಶಂಕಿತ ಉಗ್ರರು ವಿಚಾರಣೆ ವೇಳೆ ನೀಡಿದ್ದ ಮಾಹಿತಿ ಆಧರಿಸಿ ಮುಂಬೈನ ಆರ್ಥರ್ ಜೈಲಿನಲ್ಲಿದ್ದ ಉಗ್ರ ಜೈನುಲ್ಲಾಬ್ಬೀನ್ ಎಂಬಾತನನ್ನು ವಶಕ್ಕೆ ಪಡೆದು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಆತನ ವಿಚಾರಣೆಯಿಂದ ದೇಶದಲ್ಲಿ ಅಲ್ಲಲ್ಲಿ ನಡೆದಿದ್ದ ಐಎಂ ಸಂಘಟನೆ ನಡೆಸಿದ ಸ್ಫೋಟಕ ಕೃತ್ಯಗಳಲ್ಲಿ ಜೈನಾಲ್ಲಾದ್ದೀನ್ ಮಾಸ್ಟರ್ ಮೈಂಡ್ ಎಂದು ಮೂಲಗಳು ತಿಳಿಸಿವೆ. ಆತನ ವಿಚಾರಣೆಯಿಂದ ದಕ್ಷಿಣ ಭಾರತದಲ್ಲಿ, ಪ್ರಮುಖವಾಗಿ ಕರ್ನಾಟಕದಲ್ಲಿ ನಡೆಸಿರುವ ಸ್ಫೋಟಕ ಕೃತ್ಯಗಳ ಮಾಹಿತಿ ದೊರೆಯಬಹುದು ಎಂದು ಹೇಳಲಾಗಿದೆ.
2015ರ ಜನವರಿಯಲ್ಲಿ ಕಾರ್ಯಚರಣೆ ನಡೆಸಿದ್ದ ಸಿಸಿಬಿ ಪೊಲೀಸರು ದೇಶದ ವಿವಿಧ ಭಾಗಗಳಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಕೃತ್ಯಗಳಿಗೆ ಸ್ಫೋಟಕ ಸರಬರಾಜು ಮಾಡಿದ, ಸ್ಫೋಟಕ ಸಂಗ್ರಹಿಸಿದ್ದ ಭಟ್ಕಳ ಮೂಲದ ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸಬೂರ್, ಸದ್ದಾಂ ಹುಸೇನ್, ರಿಯಾಜ್ ಅಹಮದ್ ಸೈಯದಿ ಎಂಬುವವರನ್ನು ಬಂಧಿಸಿದ್ದರು. ಅಷ್ಟೇ ಅಲ್ಲದೆ ಫ್ರೆಜರ್‌ಟೌನ್‌ನ ಮನೆಯೊಂದರಲ್ಲಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಸ್ಫೋಟಕ ಜಪ್ತಿ ಮಾಡಿಕೊಂಡಿದ್ದರು.
ಆರೋಪಿಗಳಿಗೂ ಹಾಗೂ ಜೈನುಲ್ಲಾಬ್ಬೀನ್‌ಗೆ ಸಂಪರ್ಕವಿದ್ದ ಬಗ್ಗೆ ಸಂಪರ್ಕ ಇರುವುದು ತನಿಖೆಯಲ್ಲಿ ಗೊತ್ತಾಗಿತ್ತು. ಅಲ್ಲದೆ, ಜೈನುಲ್ಲಾಬ್ಬೀನ್ ಸೂಚನೆ ಮೇರೆಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ ಸಂಗತಿಯೂ ಗೊತ್ತಾಗಿತ್ತು. ಆದರೆ, ಆತ ಎಲ್ಲಿದ್ದಾನೆ ಎಂಬುದುರ ಬಗ್ಗೆ ಸುಳಿವು ನೀಡಿರಲಿಲ್ಲ. ಆತನ ಪತ್ತೆಗೆ ಶೋಧ ಮುಂದುವರಿದಿತ್ತು.
ಈ ಬೆನ್ನಲ್ಲೇ ಜೈನುಲ್ಲಾಬ್ಬೀನ್ ಮುಂಬೈನಲ್ಲಿ 2011ರಲ್ಲಿ ಜವೇರಿಬಜಾರ್, ಖಬೂತರ್ ಖಾನಾ ಸೇರಿ ಮೂರು ಕಡೆ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅರ್ಥರ್ ರಸ್ತೆ ಜೈಲಿನಲ್ಲಿರುವ ಬಗ್ಗೆ ಮಾಹಿತಿ ಖಚಿತವಾಗಿತ್ತು. ಈ ಮಾಹಿತಿ ಆಧರಿಸಿ ನ್ಯಾಯಾಲಯಕ್ಕೆ ಬಾಡಿವಾರೆಂಟ್ ಸಲ್ಲಿಸಿ ಆತನನ್ನು ವಶಕ್ಕೆ ಪಡೆದು ಕರೆತರಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಐಎಂ ಸಂಘಟನೆಯ ಸ್ಥಾಪಕ ರಿಯಾಜ್ ಭಟ್Rಳನ ಆಪ್ತನಾಗಿರುವ ಜೈನುಲ್ಲಾಬ್ಬೀನ್ ಆತನ ಸೂಚನೆ ಮೇರೆಗೆ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಐಎಂ ಸಂಘಟನೆ ಬಲಗೊಳಿಸುತ್ತಿದ್ದ. 2011ರಿಂದ 2014ರವರೆಗೆ ದೇಶದಲ್ಲಿ ನಡೆದ ಬಾಂಬ್ ಸ್ಫೋಟ ಕೃತ್ಯಗಳಿಗೆ ಸಹಚರರ ಮೂಲಕ ಸ್ಫೋಟಕ ರವಾನಿಸಿದ್ದಾನೆ. ಅಷ್ಟೇ ಅಲ್ಲದೆ, ಫ್ರೆಜರ್‌ಟೌನ್‌ನಲ್ಲಿ ಬಂಧಿತರಾದ ಆರೋಪಿಗಳ ಜತೆ ನೇರ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
“”ಮಹಾರಾಷ್ಟ್ರ ಜೈಲಿನಲ್ಲಿದ್ದ ಐಎಂ ಸಂಘಟನೆಯ ಸದಸ್ಯ ಜೈನುಲ್ಲಾಬ್ಬೀನ್‌ನನ್ನು ಹೆಚ್ಚಿನ ವಿಚಾರಣೆ ಸಲುವಾಗಿ 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ”
– ಕುಲದೀಪ್ ಕುಮಾರ್ ಜೈನ್,ಡಿಸಿಪಿ, ಸಿಸಿಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.