Road Mishap ಕುಂದಾಪುರ: ಕಾರು ಢಿಕ್ಕಿಯಾಗಿ ಸೈಕಲ್ ಸವಾರ ಸಾವು
Team Udayavani, Oct 24, 2023, 6:49 PM IST
ಕುಂದಾಪುರ: ಕಾರು ಢಿಕ್ಕಿಯಾಗಿ ಸೈಕಲ್ ಸವಾರ ಬಸ್ರೂರಿನ ವಿಲಾಸಕೇರಿಯ ನಿವಾಸಿ ಅಣ್ಣಯ್ಯ ಶೆಟ್ಟಿಗಾರ್ (71) ಅವರು ಗಾಯಗೊಂಡು, ಬಳಿಕ ಸಾವನ್ನಪ್ಪಿದ ಘಟನೆ ಅ.23ರ ರಾತ್ರಿ 10.30 ರ ಸುಮಾರಿಗೆ ಬಸ್ರೂರಿನ ಕಾಲೇಜು ಎದುರಿನ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಕೃಷಿಕರಾಗಿರುವ ಅಣ್ಣಯ್ಯ ಶೆಟ್ಟಿಗಾರ್ ಅವರು ಶಾರದೋತ್ಸವ ಮುಗಿಸಿಕೊಂಡು, ಬಸ್ರೂರಿನ ಹೆದ್ದಾರಿಯಲ್ಲಿ ಸೈಕಲ್ನಲ್ಲಿ ಸಂಚರಿಸುತ್ತಿರುವಾಗ ಜೈರುದ್ದಿನ್ ಅವರು ಚಲಾಯಿಸುತ್ತಿದ್ದ ಕಾರು ಢಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಅಣ್ಣಯ್ಯ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಬಳಿಕ, ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಷ್ಟರಲ್ಲಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇನ್ನು ಸೈಕಲ್ಗೆ ಢಿಕ್ಕಿಯಾದ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದ್ದು, ಕಾರಿನ ಚಾಲಕ ಜೈರುದ್ದಿನ್, ನೂರುಲ್ಲಾ ಅಮೀನ್, ಖಾದೀರ್ ಭಾಷ ಅವರು ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಂದಾಪುರ ಸಂಚಾರಿ ಠಾಣೆಯಲ್ಲಿ ಕಾರು ಚಾಲಕ ಜೈರುದ್ದಿನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.