City Bus ನಿರ್ವಾಹಕನ ದರೋಡೆ; ಹಿಂದಿನಿಂದ ಬಂದ ಆಗಂತುಕರು ಬಾಯಿಗೆ ಬಟ್ಟೆ ತುರುಕಿದ್ದರು
Team Udayavani, Aug 8, 2024, 6:26 AM IST
ಉಳ್ಳಾಲ: ಬಸ್ ನಿಲುಗಡೆಗೊಳಿಸಿ ಮನೆಗೆ ಹೋಗುತ್ತಿದ್ದ ನಿರ್ವಾಹಕನ ಪರ್ಸ್ ಅನ್ನು ದರೋಡೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಹರೇಕಳದಲ್ಲಿ ತಡರಾತ್ರಿ ನಡೆದಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರೇಕಳ ಪಂಚಾಯತ್ ಬಳಿಯ ನಿವಾಸಿ, ಸ್ಟೇಟ್ ಬ್ಯಾಂಕ್ ಪಾವೂರು ಮಧ್ಯೆ ಚಲಿಸುವ 55 ನಂಬರಿನ ಶ್ರೀ ಕಟೀಲ್ ಬಸ್‌ನ ನಿರ್ವಾಹಕ ಮಹಮ್ಮದ್ ಇಕ್ಬಾಲ್ ಅವರ ಬಾಯಿಗೆ ಬಟ್ಟೆ ತುರುಕಿ ದರೋಡೆ ನಡೆಸಲಾಗಿದೆ.
ಆ. 5ರ ಸಂಜೆ ಹರೇಕಳ ಡಿವೈಎಫ್‌ಐ ಕಚೇರಿ ಸಮೀಪ ಜಾಗದಲ್ಲಿ ಬಸ್ಸನ್ನು ನಿಲ್ಲಿಸಲು ಬಂದ ಸಂದರ್ಭ ನಿರ್ವಾಹಕ ಇಕ್ಬಾಲ್ ಮುಂಚಿತವಾಗಿ ಇಳಿದು ಸ್ಥಳೀಯ ಅಂಗಡಿಗೆ ತೆರಳಿದ್ದರು. ಅಲ್ಲಿ ಮನೆಗೆ ಸಾಮಗ್ರಿ ಖರೀದಿಸಿ ಸಮೀಪದಲ್ಲೇ ಇರುವ ಮನೆಗೆ ಮೊಬೈಲ್ ಟಾರ್ಚ್ ಲೈಟ್ ಹಾಕಿಕೊಂಡು ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭ ಹಿಂದಿನಿಂದ ಬಂದ ಇಬ್ಬರು ಆಗಂತುಕರು ಇಕ್ಬಾಲ್ ಅವರ ಕೈಗಳನ್ನು ಮಡಚಿ ಹಿಡಿದು, ಬಟ್ಟೆಯನ್ನು ಬಾಯಿಗೆ ತುರುಕಿದ್ದರು. ಅವರ ಕೈಯ್ಯಲ್ಲಿದ್ದ ಅಂದು ದುಡಿಮೆ ನಡೆಸಿದ್ದ 13,000 ರೂ.ನಷ್ಟು ನಗದು ಇದ್ದ ಪರ್ಸನ್ನು ಎಳೆದೊಯ್ದು ಕತ್ತಲಲ್ಲಿ ಪರಾರಿಯಾಗಿದ್ದಾರೆ.
ವಾಗ್ವಾದಕ್ಕಿಳಿದ ತಂಡದ ಕೃತ್ಯ
ನಿರ್ವಾಹಕ ಇಕ್ಬಾಲ್ ಬೊಬ್ಬೆ ಕೇಳಿ ಸ್ಥಳೀಯರು ಹಾಗೂ ಕುಟುಂಬದವರು ಓಡಿ ಬಂದು ಅವರನ್ನು ನಾಟೆಕಲ್ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳ್ಳರು ತಲೆಮರೆಸಿಕೊಂಡಿದ್ದಾರೆ.
ಯಾವುದೋ ವಿಚಾರಕ್ಕೆ ಸಂಬಂಧಿಸಿ ಬಸ್ಸಿನಲ್ಲಿ ಇಬ್ಬರು ಯುವಕರು ನಿರ್ವಾಹಕನ ಜತೆ ವಾಗ್ವಾದಕ್ಕಿಳಿದಿದ್ದು, ಅವರೇ ಈ ಕೃತ್ಯ ಎಸಗಿರುವ ಸಾಧ್ಯತೆಯ ಮೇರೆಗೆ ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ
Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ
Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.