Rohan City Bejai: ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆಗೆ ಖಚಿತ ಪ್ರತಿಫಲ ಕೊಡುಗೆ
6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯ
Team Udayavani, Sep 16, 2024, 1:06 AM IST
ಮಂಗಳೂರು: ರೋಹನ್ ಕಾರ್ಪೊರೇಷನ್‌ನ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ಯೋಜನೆ ಯಾಗಿರುವ “ರೋಹನ್ ಸಿಟಿ ಬಿಜೈ’ ನಿರ್ಮಾಣ ಕೊನೆಗೊಳ್ಳುವವರೆಗೆ ಖರೀದಿದಾರರಿಗೆ ಹೂಡಿಕೆಯ ಮೇಲೆ ಆದಾಯನ್ನು ನೀಡಲಾಗುವುದು.
ಬ್ಯಾಂಕ್ ಹಾಗೂ ಇನ್ನಿತರ ವಿತ್ತೀಯ ಸಂಸ್ಥೆಗಳಲ್ಲಿ ನಿರಖು ಠೇವಣಿಗಳ ಮೇಲಿನ ಬಡ್ಡಿ ದರವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಖಚಿತ ಪ್ರತಿಫಲ ನೀಡುವ ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ. ಗ್ರಾಹಕರು 50 ಲಕ್ಷ ರೂ. ವಿನಿಯೋಗಿಸಿದಲ್ಲಿ ಮರು ದಿನದಿಂದಲೇ 32,000 ರೂ. ಮತ್ತು 75 ಲಕ್ಷ ರೂ. ವಿನಿಯೋಗಿಸಿದಲ್ಲಿ ಮಾಸಿಕ 47,000 ರೂ. ವನ್ನು ಖಚಿತವಾಗಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ರೋಹನ್ ಸಿಟಿ, ಬಿಜೈ ಪ್ರಮುಖ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಉತ್ತಮ ಬಾಡಿಗೆಯ ಸಾಧ್ಯತೆ ಅಧಿಕವಾಗಿದೆ.
ಮಹತ್ವಾಕಾಂಕ್ಷಿ ಯೋಜನೆ
ಈ ಯೋಜನೆ 6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. ವಸತಿ ಅಪಾರ್ಟ್‌ಮೆಂಟ್‌ಗಳ ಜತೆಗೆ, 284 ಪ್ರತ್ಯೇಕ ಘಟಕಗಳನ್ನು ಒಳಗೊಂಡಿರುವ 2 ಲಕ್ಷ ಚದರ ಅಡಿ ವಾಣಿಜ್ಯ ಮಳಿಗೆಗಳಿವೆ. ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳ ಪಾರ್ಕಿಂಗ್‌ಗೆ (ವಸತಿ ಹಾಗೂ ವಾಣಿಜ್ಯ ಪ್ರತ್ಯೇಕ) ವಿಪುಲ ಅವಕಾಶವಿದೆ.
“ರೋಹನ್ ಸಿಟಿ’ ವೈಶಿಷ್ಟ್ಯ:
ಎರಡು ಹಂತಗಳಲ್ಲಿ 35,000 ಚದರ ಅಡಿ ಹೈಪರ್ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳಿಗೆ 2 ಎಸ್ಕಲೇಟರ್ ವ್ಯವಸ್ಥೆ, ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೊಟೇಲ್, ಅತ್ಯಾಧುನಿಕ ಕ್ಲಬ್ , ಪ್ರಮುಖ ನ್ಯಾಶನಲ್ ಬ್ಯಾಂಕ್‌ಗಳಿಂದ ಪ್ರಾಜೆಕ್ಟ್ ಅಂಗೀಕೃತ ತ್ವರಿತ ಸಾಲ ಸೌಲಭ್ಯ ಸೇವೆ , ಡೀಸೆಲ್ ಜನರೇಟರ್‌ಗಳೊಂದಿಗೆ ಶೇ. 100 ಪವರ್ ಬ್ಯಾಕಪ್ , ಸ್ವಯಂಚಾಲಿತ ಪವರ್ ಚೇಂಜ್ ಓವರ್ ವ್ಯವಸ್ಥೆ , ಅತ್ಯಾಧುನಿಕ ಭದ್ರತಾ ವ್ಯವಸ್ಥೆ , ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ವ್ಯವಸ್ಥೆ , ಹಸಿರು ವನ ಮತ್ತು ಗಾರ್ಡನ್ , ಘನ ತ್ಯಾಜ್ಯ ಸಂಸ್ಕರಣ ಘಟಕ , ಸೌರ ಶಕ್ತಿ ಸಂಗ್ರಹ ಘಟಕ , ಲೈಟಿಂಗ್ ಅಟೊಮೇಶನ್
ಸಿಟಿ ಕ್ಲಬ್‌ನ ವಿಶೇಷತೆಗಳು
ಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ, ಫ್ಯಾಮಿಲಿ ರೆಸ್ಟೋರೆಂಟ್, ಕಾಫಿ ಶಾಪ್, ಒಳಾಂಗಣ ಕ್ರೀಡೆ, ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್ ಕೋರ್ಟ್, ವೀಡಿಯೋ ಗೇಮ್ಸ್ ವಲಯ, ಜಿಮ್, ಸ್ಪಾ, ಯುನಿಸೆಕ್ಸ್ ಸಲೂನ್, ಆಯುರ್ವೇದಿಕ್ ವೆಲ್‌ನೆಸ್ ಸೆಂಟರ್, 3ಡಿ ಥಿಯೇಟರ್, ಈಜುಕೊಳ, ಪಾರ್ಕ್, ಚಿಣ್ಣರ ಆಟದ ವಲಯ, ಸುಸಜ್ಜಿತ ಗ್ರಂಥಾಲಯ, ವಿದ್ಯಾರ್ಥಿ ಕಲಿಕಾ ಕೊಠಡಿ, ಸುಸಜ್ಜಿತ ಕಂಟ್ರಿ ಕ್ಲಬ್.
ಕೊನೆಯ ಹಂತದಲ್ಲಿ ಹಲವು ಯೋಜನೆ
ರೋಹನ್ ಕಾರ್ಪೊರೇಶನ್ ಸಂಸ್ಥೆ, ಮಂಗಳೂರು ನಗರದಲ್ಲಿ ಬೃಹತ್ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ, ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಪ್ರಸ್ತುತ ನೀರುಮಾರ್ಗ ಮತ್ತು ಕುಲಶೇಖರದಲ್ಲಿ ರೋಹನ್ ಎಸ್ಟೇಟ್, ಸುರತ್ಕಲ್‌ನಲ್ಲಿ ರೋಹನ್ ಎನ್‌ಕ್ಲೇವ್ ಹಾಗೂ ರೋಹನ್ ಅವೆನ್ಯೂ ಸಂಪೂರ್ಣಗೊಂಡಿದ್ದು, ಕಪಿತಾನಿಯೊದಲ್ಲಿನ ರೋಹನ್ ಸ್ಕ್ವೇರ್ ಮತ್ತು ಮುಕ್ಕ ರಾ. ಹೆ. ಬದಿ ರೋಹನ್ ಎಸ್ಟೇಟ್ ನಿರ್ಮಾಣ ಕೊನೆಯ ಹಂತದಲ್ಲಿದೆ. ವಿವರಗಳಿಗಾಗಿ ಮಾರಾಟ ಕಚೇರಿ, ರೋಹನ್ ಸಿಟಿ, ಬಿಜೈ ಮುಖ್ಯರಸ್ತೆ, ಮಂಗಳೂರು ಸಂಪರ್ಕಿಸಬಹುದು. ವೆಬ್‌ಸೈಟ್: www.rohancorporation.in.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.