Asian Games: ರೋಯಿಂಗ್‌: ಭಾರತಕ್ಕೆ ಅವಳಿ ಕಂಚು

Team Udayavani, Sep 25, 2023, 11:11 PM IST

rowing

ಹ್ಯಾಂಗ್‌ಝೂ: ರೋಯಿಂಗ್‌ ಸ್ಪರ್ಧೆಯಲ್ಲಿ ಸೋಮವಾರ ಭಾರತ ಮತ್ತೆರಡು ಪದಕಗಳನ್ನು ಗೆದ್ದಿದೆ. ಇವೆ ರಡೂ ಕಂಚಿನ ಪದಕಗಳಾಗಿವೆ. ರವಿವಾರ ಅವಳಿ ರಜತಗಳ ಖುಷಿ ಇತ್ತು.

ಮೊದಲು ಮೆನ್ಸ್‌ ಫೋರ್‌ ವಿಭಾಗದ ಸ್ಪರ್ಧೆಯಲ್ಲಿ ಜಸ್ವಿಂದರ್‌ ಸಿಂಗ್‌, ಭೀಮ್‌ ಸಿಂಗ್‌, ಪುನೀತ್‌ ಕುಮಾರ್‌ ಮತ್ತು ಅಶಿಷ್‌ ಗೊಲಿಯಾನ್‌ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕವನ್ನು ಸ್ವಲ್ಪದರಲ್ಲೇ ಕಳೆದುಕೊಂಡಿತು. ಭಾರತ 2 ಸಾವಿರ ಮೀಟರ್‌ಗಳ ಈ ದೂರವನ್ನು 6:10.81 ಸೆಕೆಂಡ್‌ಗಳಲ್ಲಿ ಕ್ರಮಿಸಿತು. ಚೀನ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಜಯಿಸಿದರೆ (6:10.04), ಉಜ್ಬೆಕಿಸ್ಥಾನ್‌ ಚಿನ್ನ ಗೆದ್ದಿತು (6:04.96).

ಬಳಿಕ ಪುರುಷರ ಕ್ವಾಡ್ರಾಪಲ್‌ ವಿಭಾಗದಲ್ಲಿ ಸತ್ನಾಮ್‌ ಸಿಂಗ್‌, ಪರ್ಮಿಂದರ್‌ ಸಿಂಗ್‌, ಜಾಕರ್‌ ಖಾನ್‌, ಸುಕ್‌ಮೀತ್‌ ಸಿಂಗ್‌ ಕೂಡ ತೃತೀಯ ಸ್ಥಾನಿಯಾದರು. ಭಾರತದ ಸ್ಪರ್ಧಿಗಳಿಲ್ಲಿ 6:08.61 ಸೆಕೆಂಡ್‌ಗಳಲ್ಲಿ ದೂರ ಕ್ರಮಿಸಿದರು, ಚೀನ ಚಿನ್ನ (6:02.65 ಸೆ.) ಮತ್ತು ಉಜ್ಬೆಕಿಸ್ಥಾನ್‌ (6.04.64 ಸೆ.) ಬೆಳ್ಳಿ ಪದಕ ಜಯಿಸಿತು.

ಪುರುಷರ ಸಿಂಗಲ್ಸ್‌ ಸ್ಕಲ್ಸ್‌ನಲ್ಲಿ ಬಲ್ರಾಜ್‌ ಪನ್ವಾರ್‌ ಮೊದಲ ಸಲ ಪೋಡಿಯಂ ಏರುವ ಅವಕಾಶವನ್ನು ಕಳೆದುಕೊಂಡರು. ಅವರು 4ನೇ ಸ್ಥಾನಿಯಾದರು. 1,500 ಮೀ. ತನಕ ಅಗ್ರ 3 ಸ್ಥಾನ ಕಾಯ್ದುಕೊಂಡಿದ್ದ ಬಲ್ರಾಜ್‌, ಕೊನೆಯ 500 ಮೀ. ಹಂತದಲ್ಲಿ ಹಿನ್ನಡೆ ಅನುಭವಿಸಿದರು (7:08.79 ಸೆಕೆಂಡ್ಸ್‌). ಕಂಚು ಗೆದ್ದ ಹಾಂಕಾಂಗ್‌ ಸ್ಪರ್ಧಿಗಿಂತ ಬಲ್ರಾಜ್‌ 9 ಸೆಕೆಂಡ್‌ಗಳ ಹಿನ್ನಡೆಯಲ್ಲಿದ್ದರು.

“ವುಮೆನ್ಸ್‌ 8′ ವಿಭಾಗದಲ್ಲಿ ಭಾರತ ಕೊನೆಯ ಸ್ಥಾನಿಯಾಗಿ ನಿರಾಸೆ ಮೂಡಿಸಿತು.

ಭಾರತಕ್ಕೆ 5ನೇ ಸ್ಥಾನ
ಭಾರತ ಒಟ್ಟು 5 ಪದಕಗಳೊಂದಿಗೆ ಸ್ಪರ್ಧೆ ಮುಗಿಸಿತು. ಪದಕ ಗಳಿಕೆಯಲ್ಲಿ ಇದು 2018ರ ಜಕಾರ್ತಾ ಏಷ್ಯಾಡ್‌ಗಿಂತ ಉತ್ತಮ ಸಾಧನೆ. ಆದರೆ ಈ ಬಾರಿ ಚಿನ್ನ ಒಲಿಯಲಿಲ್ಲ. ಜಕಾರ್ತಾದಲ್ಲಿ ಭಾರತ ರೋವಿಂಗ್‌ ಸ್ಪರ್ಧೆಯಲ್ಲಿ ಒಂದು ಚಿನ್ನ ಹಾಗೂ 2 ಕಂಚಿನ ಪದಕ ಜಯಿಸಿತ್ತು. ಆದರೆ 6ನೇ ಸ್ಥಾನಿಯಾಗಿತ್ತು. ಈ ಬಾರಿ ಒಂದು ಸ್ಥಾನ ಮೇಲೇರಿದೆ.
ಈ ಬಾರಿ ಆತಿಥೇಯ ಚೀನ ಅಗ್ರಸ್ಥಾನ ಅಲಂಕರಿಸಿದರೆ (11 ಚಿನ್ನ, 2 ಬೆಳ್ಳಿ), ಉಜ್ಬೆಕಿಸ್ಥಾನ ದ್ವಿತೀಯ ಸ್ಥಾನಿಯಾಯಿತು (2 ಚಿನ್ನ, 4
ಬೆಳ್ಳಿ, 1 ಕಂಚು).

ಟಾಪ್ ನ್ಯೂಸ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

13-belagavi

ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Yasin Malik

SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

KLR

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

13-belagavi

ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.