ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್ ; ಆರ್‌ಸಿಬಿ “ಟಾರ್ಗೆಟ್ 150′ ಯಶಸ್ವಿ
Team Udayavani, Sep 29, 2021, 11:14 PM IST
ದುಬಾೖ: ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅಬ್ಬರದ ಬ್ಯಾಟಿಂಗ್ ಸಾಹಸದಿಂದ ರಾಜಸ್ಥಾನ್ ರಾಯಲ್ಸ್ ನಿಗದಿಪಡಿಸಿದ “ಟಾರ್ಗೆಟ್ 150’ನ್ನು ಆರ್‌ಸಿಬಿ ಯಶಸ್ವಿಗೊಳಿಸಿದೆ. 7 ವಿಕೆಟ್ ಪರಾಕ್ರಮದೊಂದಿಗೆ 7ನೇ ಗೆಲುವು ಸಾಧಿಸಿ ತನ್ನ ಅಂಕವನ್ನು 14ಕ್ಕೆ ಏರಿಸಿಕೊಂಡಿದೆ. ರಾಜಸ್ಥಾನ್ 5ನೇ ಸೋಲುಂಡು ನಿರ್ಗಮನದ ಸೂಚನೆಯೊಂದನ್ನು ನೀಡಿದೆ.
ಬುಧವಾರದ ಮುಖಾಮುಖೀಯಲ್ಲಿ ಅಬ್ಬರದ ಆರಂಭ ಪಡೆದ ರಾಜಸ್ಥಾನ್, ಕೊನೆಯಲ್ಲಿ ಕುಸಿತಕ್ಕೆ ಸಿಲುಕಿ 9 ವಿಕೆಟಿಗೆ 149 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ 17.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 153 ರನ್ ಬಾರಿಸಿತು.
ವಿರಾಟ್ ಕೊಹ್ಲಿ (25)-ದೇವದತ್ತ ಪಡಿಕ್ಕಲ್ (22) ಸೇರಿಕೊಂಡು ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟಿಗೆ 5.2 ಓವರ್‌ಗಳಿಂದ 48 ರನ್ ಹರಿದು ಬಂತು. ಇವರಿಬ್ಬರು 10 ರನ್ ಅಂತರದಲ್ಲಿ ನಿರ್ಗಮಿಸಿದ ಬಳಿಕ ಶ್ರೀಕರ್ ಭರತ್-ಗ್ಲೆನ್ ಮ್ಯಾಕ್ಸ್‌ವೆಲ್ 55 ಎಸೆತಗಳಿಂದ 69 ರನ್ ಒಟ್ಟುಗೂಡಿಸಿ ತಂಡಕ್ಕೆ ಯಾವುದೇ ಆತಂಕ ಎದುರಾಗದಂತೆ ನೋಡಿಕೊಂಡರು. ಭರತ್ ಗಳಿಕೆ 35 ಎಸೆತಗಳಿಂದ 44 ರನ್ (3 ಬೌಂಡರಿ, 1 ಸಿಕ್ಸರ್). ಮ್ಯಾಕ್ಸ್‌ವೆಲ್ 50 ರನ್ ಹಾದಿಯಲ್ಲಿ ಟಿ20 ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಪೂರ್ತಿಗೊಳಿಸಿದ ಸಾಧನೆಗೈದರು. 30 ಎಸೆತ ಎದುರಿಸಿದ ಮ್ಯಾಕ್ಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಇದು ಅವರ ಸತತ 2ನೇ ಅರ್ಧ ಶತಕ. ಎಬಿಡಿ ಬೌಂಡರಿ ಸಿಡಿಸಿ ತಂಡದ ಜಯವನ್ನು ಸಾರಿದರು.
ಇದನ್ನೂ ಓದಿ:ಅಂತಿಮ ದಿನದ ಎರಡೂ ಲೀಗ್ ಪಂದ್ಯ 7.30ಕ್ಕೆ ಆರಂಭ
ರಾಜಸ್ಥಾನಕ್ಕೆ ಬ್ರೇಕ್
ಆರಂಭದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಾಜಸ್ಥಾನ್ ಬಳಿಕ ಆರ್‌ಸಿಬಿಯ ಬಿಗಿಯಾದ ದಾಳಿಗೆ ಸಿಲುಕಿ ಮಂಕಾಯಿತು. ಸ್ಯಾಮ್ಸನ್ ಬಳಗದ ಮೊತ್ತ 9 ವಿಕೆಟಿಗೆ 149ಕ್ಕೆ ಸೀಮಿತಗೊಂಡಿತು.
ಬ್ಯಾಟಿಂಗ್ ಆಹ್ವಾನ ಪಡೆದ ರಾಜಸ್ಥಾನ್ ರಾಯಲ್ಸ್‌ಗೆ ಯಶಸ್ವಿ ಜೈಸ್ವಾಲ್ ಮತ್ತು ಎವಿನ್ ಲೆವಿಸ್ ಸ್ಫೋಟಕ ಆರಂಭದ ಮೂಲಕ ಭದ್ರ ಬುನಾದಿ ನಿರ್ಮಿಸಿದರು. ವಿಂಡೀಸ್ ತಾರೆ ಲೆವಿಸ್ ಪ್ರತಿ ಓವರ್‌ಗೆ ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಆರ್‌ಸಿಬಿ ಬೌಲರ್‌ಗಳ ಮೇಲೆರಗಿ ಹೋದರು. ಅಂತೆಯೇ ಜೈಸ್ವಾಲ್ ರನ್ ಗಳಿಕೆಯೂ ಉತ್ತಮ ಲಯದಲ್ಲಿ ಸಾಗಿತು. ಇವರಿಬ್ಬರ ಅಮೋಘ ಬ್ಯಾಟಿಂಗ್‌ನಿಂದ ಪವರ್ ಪ್ಲೇ ಅವಧಿಯಲ್ಲಿ ರಾಜಸ್ಥಾನ್ ನೋಲಾಸ್ 56 ರನ್ ಕಲೆಹಾಕಿ ಉತ್ತಮ ಮೊತ್ತ ಪೇರಿಸುವ ಮುನ್ಸೂಚನೆ ನೀಡಿತು.
ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗಿಗೆ ಮುಂದಾದ ಆರಂಭಿಕ ಜೋಡಿಯನ್ನು 8ನೇ ಓವರ್‌ನಲ್ಲಿ ಆಸೀಸ್ ವೇಗಿ ಡೇನಿಯಲ್ ಕ್ರಿಸ್ಟಿಯನ್ ಕೊನೆಗೂ ಬೇರ್ಪಡಿಸಿದರು. 22 ಎಸೆತಗಳಲ್ಲಿ 31 ರನ್ ಮಾಡಿದ ಜೈಸ್ವಾಲ್ ಸಿರಾಜ್‌ಗೆ ಕ್ಯಾಚ್ ನೀಡಿ ವಾಪಸಾದರು. ಜೈಸ್ವಾಲ್ ಜತೆ ಮೊದಲ ವಿಕೆಟಿಗೆ 77 ರನ್‌ಗಳ ಜತೆಯಾಟ ನಿರ್ವಹಿಸಿದ ಎವಿನ್ ಲೆವಿಸ್ ಅರ್ಧ ಶತಕ ಬಾರಿಸಿದರು (58 ರನ್, 5 ಬೌಂಡರಿ, 3 ಸಿಕ್ಸರ್). ಮೊತ್ತ »ನೂರಕ್ಕೆ ಏರಿದಾಗ ಎಡಗೈ ವೇಗಿ ಜಾರ್ಜ್ ಗಾರ್ಟನ್‌ಗೆ ವಿಕೆಟ್ ಒಪ್ಪಿಸಿದರು.
ಲೆವಿಸ್ ವಿಕೆಟ್ ಪತನದ ಬೆನ್ನಲ್ಲೇ ಆರ್‌ಸಿಬಿ ಬೌಲರ್ ಸಂಪೂರ್ಣ ಹಿಡಿತ ಸಾಧಿಸಿದರು. ಕೇವಲ 17 ರನ್‌ಗಳ ಅಂತರದಲ್ಲಿ 5 ವಿಕೆಟ್ ಕೆಡವಿದರು.
ಮಹಿಪಾಲ್ ಲೊನ್ರೋರ್ (3), ನಾಯಕ ಸಂಜು ಸ್ಯಾಮ್ಸನ್ (19), ರಾಹುಲ್ ತೇವಾಟಿಯಾ (2) ಬೇಗನೇ ಪೆವಿಲಿಯನ್ ಹಾದಿ ಹಿಡಿದರು. ಇದರ ಬೆನ್ನಲ್ಲೇ ಇಂಗ್ಲೆಂಡ್‌ನ ಹಾರ್ಡ್ ಹಿಟ್ಟರ್ ಲಿವಿಂಗ್‌ಸ್ಟೋನ್ (6), ರಿಯಾನ್ ಪರಾಗ್ (9) ಕೂಡ ಅಗ್ಗಕ್ಕೆ ಉದುರಿದರು.
ಪಟೇಲ್‌ಗೆ ತಪ್ಪಿದ ಹ್ಯಾಟ್ರಿಕ್
ಹರ್ಷಲ್ ಪಟೇಲ್ ಅವರಿಗೆ ಅಂತಿಮ ಓವರ್‌ನಲ್ಲಿ ಮತ್ತೂಮ್ಮೆ ಹ್ಯಾಟ್ರಿಕ್ ಅವಕಾಶ ಎದುರಾಯಿತು. ಸತತ ಎಸೆತಗಳಲ್ಲಿ ಪರಾಗ್ ಹಾಗೂ ಮಾರಿಸ್ ವಿಕೆಟ್ ಕಿತ್ತರು. ಆದರೆ ತ್ಯಾಗಿ ಹ್ಯಾಟ್ರಿಕ್ ತಪ್ಪಿಸಿದರು. ಎರಡು ಎಸೆತಗಳ ಬಳಿಕ ಸಕಾರಿಯಾ ಔಟಾದರು. ಇದರೊಂದಿಗೆ ಈ ಸಾಲಿನ ಐಪಿಎಲ್ ಪಂದ್ಯಗಳ ಅಂತಿಮ ಓವರ್‌ನಲ್ಲಿ ಅತ್ಯಧಿಕ 10 ವಿಕೆಟ್ ಉರುಳಿಸಿದ ಹೆಗ್ಗಳಿಕೆ ಪಟೇಲ್ ಅವರದಾಯಿತು.
ಸ್ಕೋರ್ ಪಟ್ಟಿ
ರಾಜಸ್ಥಾನ್ ರಾಯಲ್ಸ್
ಎವಿನ್ ಲೆವಿಸ್ ಸಿ ಭರತ್ ಬಿ ಗಾರ್ಟನ್ 58
ಯಶಸ್ವಿ ಜೈಸ್ವಾಲ್ ಸಿ ಸಿರಾಜ್ ಬಿ ಕ್ರಿಸ್ಟಿಯನ್ 31
ಸಂಜು ಸ್ಯಾಮ್ಸನ್ ಸಿ ಪಡಿಕ್ಕಲ್ ಬಿ ಶಾಬಾಜ್ 19
ಮಹಿಪಾಲ್ ಸ್ಟಂಪ್ಡ್ ಭರತ್ ಬಿ ಚಹಲ್ 3
ಲಿವಿಂಗ್‌ಸ್ಟೋನ್ ಸಿ ವಿಲಿಯರ್ ಬಿ ಚಹಲ್ 6
ತೇವಟಿಯಾ ಸಿ ಪಡಿಕ್ಕಲ್ ಬಿ ಶಾಬಾಜ್ 2
ರಿಯನ್ ಪರಾಗ್ ಸಿ ಕೊಹ್ಲಿ ಬಿ ಹರ್ಷಲ್ 9
ಕ್ರಿಸ್ ಮಾರಿಸ್ ಸಿ ಪಡಿಕ್ಕಲ್ ಬಿ ಹರ್ಷಲ್ 14
ಸಕಾರಿಯ ಸಿ ವಿಲಿಯರ್ ಬಿ ಹರ್ಷಲ್ 2
ಕಾರ್ತಿಕ್ ತ್ಯಾಗಿ ಔಟಾಗದೆ 1
ಇತರ 4
ಒಟ್ಟು(9 ವಿಕೆಟಿಗೆ) 149
ವಿಕೆಟ್ ಪತನ:1-77, 2-100, 3-113, 4-113, 5-117, 6-127, 7-146, 8-146, 9-149.
ಬೌಲಿಂಗ್; ಜಾರ್ಜ್ ಗಾರ್ಟನ್ 3-0-30-1
ಮೊಹಮ್ಮದ್ ಸಿರಾಜ್ 3-0-18-0
ಗ್ಲೆನ್ ಮ್ಯಾಕ್ಸ್‌ವೆಲ್ 2-0-17-0
ಹರ್ಷಲ್ ಪಟೇಲ್ 4-0-34-3
ಡೇನಿಯಲ್ ಕ್ರಿಸ್ಟಿಯನ್ 2-0-21-1
ಯಜುವೇಂದ್ರ ಚಹಲ್ 4-0-18-2
ಶಾಬಾಜ್ ಅಹ್ಮದ್ 2-0-10-2
ರಾಯಲ್ ಚಾಲೆಂಜರ್ ಬೆಂಗಳೂರು
ವಿರಾಟ್ ಕೊಹ್ಲಿ ರನೌಟ್ 25
ಪಡಿಕ್ಕಲ್ ಬಿ ಮುಸ್ತಫಿಜರ್ 22
ಎಸ್. ಭರತ್ ಸಿ ಲೊನ್ರೋರ್ ಬಿ ಮುಸ್ತಫಿಜರ್ 44
ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 50
ವಿಲಿಯರ್ ಔಟಾಗದೆ 4
ಇತರ 8
ಒಟ್ಟು(17.1 ಓವರ್‌ಗಳಲ್ಲಿ 3 ವಿಕೆಟಿಗೆ) 153
ವಿಕೆಟ್ ಪತನ:1-48, 2-58, 3-127.
ಬೌಲಿಂಗ್; ಕ್ರಿಸ್ ಮಾರಿಸ್ 4-0-50-0
ಕಾರ್ತಿಕ್ ತ್ಯಾಗಿ 2-0-23-0
ಚೇತನ್ ಸಕಾರಿಯ 3-0-20-2
ಮುಸ್ತಫಿಜರ್ ರೆಹಮಾನ್ 3-0-20-2
ರಾಹುಲ್ ತೇವಟಿಯಾ 3-0-23-0
ಮಹಿಪಾಲ್ ಲೊನ್ರೋರ್ 2-0-13-0
ರಿಯಾನ್ ಪರಾಗ್ 0.1-0-4-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.