RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

ವೆಬ್‌ಸೈಟ್‌ನಲ್ಲಿ ಇಲ್ಲ ಪೂರ್ಣ ವ್ಯವಸ್ಥೆ

Team Udayavani, Jun 20, 2024, 7:15 AM IST

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

ಕುಂದಾಪುರ: ರೈತರ ಪಹಣಿಗಳಿಗೆ ಆಧಾರ್‌ ಜೋಡಣೆ ಮಾಡುವ ಪ್ರಕ್ರಿಯೆಯ ಗೊಂದಲ ಇನ್ನೂ ಪೂರ್ಣಪ್ರಮಾಣದಲ್ಲಿ ಬಗೆಹರಿದಿಲ್ಲ. ಈ ಬಗ್ಗೆ ಕಂದಾಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಕುಂದಾಪುರದ ಕಂದಾಯ ಇಲಾಖೆ ಇದಕ್ಕಾಗಿಯೇ ಸಿಬಂದಿಯನ್ನು ಪ್ರತ್ಯೇಕಿಸಿ ರೈತರನ್ನು ಸಂಪರ್ಕಿಸಿ ಲಿಂಕ್‌ ಮಾಡಿಸುತ್ತಿದೆ.

ಗೊಂದಲ ನಿವಾರಣೆ
ಕೇಂದ್ರ ಸರಕಾರದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಶೇ. 44ರಷ್ಟು ರೈತರು 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ. ಆದರೆ ರಾಜ್ಯ ಸರಕಾರ, ರಾಜ್ಯದಲ್ಲಿ ಶೇ.70ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ ಎನ್ನುತ್ತಿದೆ. ಈ ಗೊಂದಲ ಆಧಾರ್‌ಲಿಂಕ್‌ ಮೂಲಕ ನಿವಾರಣೆಯಾಗಲಿದೆ. ಆಂಧ್ರಪ್ರದೇಶದಲ್ಲಿ ಈಗಾಗಲೇ ಆಧಾರ್‌ ಜತೆ ಪಹಣಿಯನ್ನು ಜೋಡಿಸಲಾಗಿದೆ.

ಯಾಕಾಗಿ ಜೋಡಣೆ?
ಸ‌ಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಲು ಹಾಗೂ ಸರಕಾರದ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಲು, ರೈತರು ತಮ್ಮ ಪಹಣಿಗಳನ್ನು ಆಧಾರ್‌ ಜತೆಗೆ ಜೋಡಿಸಬೇಕು ಎನ್ನುವುದು ಸರಕಾರದ ಯೋಚನೆ. ಇದರಿಂದ ಕೃಷಿ ಭೂಮಿ ಸಂಬಂಧಿಸಿದ ವಂಚನೆಗಳನ್ನು ಕಡಿಮೆ ಮಾಡಬಹುದು ಮತ್ತು ಮಾಲಕತ್ವಕ್ಕೆ ಸಂಬಂ ಧಿಸಿದ ಗೊಂದಲವೂ ನಿವಾರಣೆಯಾಗಲಿದೆ.

ಸ್ವತಃ ಜೋಡಣೆ ಸಾಧ್ಯ
ಈ ಪ್ರಕ್ರಿಯೆ ಉಚಿತವಾಗಿದ್ದು, ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ನಿಮ್ಮ ಆಧಾರ್‌ ಕಾರ್ಡ್‌ನಲ್ಲಿರುವ ಹೆಸರು ಮತ್ತು ಪಹಣಿಯಲ್ಲಿರುವ ಹೆಸರು ಒಂದೇ ಆಗಿರಬೇಕು. ರೈತರು ತಮ್ಮ ಭೂಮಿ ಪಹಣಿ ಮತ್ತು ಆಧಾರ್‌ ದಾಖಲೆಗಳೊಂದಿಗೆ
https://landrecords.karnataka.gov.in/
https://landrecords.karnataka.gov.in/service
ವೆಬ್‌ಸೈಟ್‌ಗೆ ಲಾಗ್‌ಇನ್‌ ಮಾಡಬಹುದು. ಬಳಿಕ ಪಹಣಿಯನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡಬಹುದು.

ವ್ಯತ್ಯಾಸ ಇದ್ದರೆ ಆಗದು
ಆಧಾರ್‌ ಮತ್ತು ಪಹಣಿಯಲ್ಲಿ ನಮೂದಾದ ಹೆಸರಿನಲ್ಲಿ ವ್ಯತ್ಯಾಸ ಇದ್ದರೆ ಸ್ವತಃ ಲಿಂಕ್‌ ಮಾಡಲು ಸಾಧ್ಯವಾಗುವುದಿಲ್ಲ. ಈ ಮೊದಲು ಆರ್‌ಟಿಸಿಯಲ್ಲಿ ಹೆಸರು ತಿದ್ದುಪಡಿ ಮಾಡಬೇಕು, ಅದಕ್ಕಾಗಿ ಸಹಾಯಕ ಕಮಿಷನರ್‌ಗೆ ಮೇಲ್ಮನವಿ ಮಾಡಬೇಕು, ವಕೀಲರನ್ನು ನೇಮಿಸಬೇಕು ಎಂಬ ಗೊಂದಲಗಳಿದ್ದವು. ಆದರೆ ಈ ಬಗೆಯ ಎಲ್ಲ ಗೊಂದಲಗಳನ್ನು ಸರಕಾರ ಬಗೆಹರಿಸಿದೆ. ಪಹಣಿ ಮತ್ತು ಆಧಾರ್‌ ನೋಂದಣಿಯೊಂದಿಗೆ ಸಂಬಂ ಧಿಸಿದ ಗ್ರಾಮ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅಧಿ ಕಾರಿಗಳು ಸಹಾಯ ಮಾಡುತ್ತಾರೆ.

ಸ್ವಯಂ ಮಾಡಿದರೂ ಕರೆ
ಕೆಲವು ಕಡೆ ಸ್ವತಃ ಲಿಂಕ್‌ ಮಾಡಿದವರಿಗೆ ವಿಎಗಳು ಕರೆ ಮಾಡಿ ಮತ್ತೆ ವಿಎ ಕಚೇರಿಗೆ ಬರುವಂತೆ ತಿಳಿಸುತ್ತಿದ್ದಾರೆ. ಸ್ವತಃ ಲಿಂಕ್‌ ಮಾಡುವಾಗ ಖಾತೆದಾರರ ಭಾವಚಿತ್ರ ಅಪ್‌ಲೋಡ್‌ ಮಾಡಲು ಅವಕಾಶ ಇಲ್ಲ. ಆದ್ದರಿಂದ ವಿಎ ಕಚೇರಿಗೆ ತೆರಳಬೇಕಾಗುತ್ತದೆ. ವಿಎ ಕಚೇರಿಯಲ್ಲಿ ಆಧಾರ್‌ ಭಾವಚಿತ್ರವನ್ನೇ ಅದಕ್ಕೆ ಅಳವಡಿಸುವ ಅಥವಾ ಪ್ರತ್ಯೇಕ ಭಾವಚಿತ್ರ ಅಪ್‌ಲೋಡ್‌ ಮಾಡುವ ಸೌಲಭ್ಯ ಇದೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗಲಿ ಎಂದು ಸರಕಾರ ಮಾಡಿದ ವೆಬ್‌ಸೈಟ್‌ ಗೊಂದಲದ ಗೂಡಾಗಿದೆ.

ಆಧಾರ್‌ ಜೋಡಣೆಗೆ
ಮನೆ ಮನೆ ಭೇಟಿ
ಕಂದಾಯ ಸಚಿವ ಕೃಷ್ಣ ಭೈರೇಗೌಡರ ಸೂಚನೆಯಂತೆ, ಕೃಷಿ ಭೂಮಿ ಖಾತೆಗೆ ಆಧಾರ್‌ ಜೋಡಣೆ ಕಾರ್ಯ ವೇಗವಾಗಿ ನಡೆಯುತ್ತಿದೆ. ತಿಂಗಳ ಹಿಂದೆ ದ.ಕ. ಜಿಲ್ಲೆಯಲ್ಲಿ 7.05 ಶೇ., ಉಡುಪಿ ಜಿಲ್ಲೆಯಲ್ಲಿ 7.35 ಶೇ. ಮಾತ್ರ ಪ್ರಗತಿಯಾಗಿರುವ ಕಾರಣ ಈಗ ಖಾತೆದಾರರ ಮನೆಮನೆಗೆ ಭೇಟಿ ನೀಡಿ ಲಿಂಕ್‌ ಮಾಡಿಸಲಾಗುತ್ತಿದೆ. ಗ್ರಾಮ ಲೆಕ್ಕಾ ಧಿಕಾರಿಗಳು ಖಾತೆದಾರರ ಮನೆಗಳಿಗೆ ಭೇಟಿ ನೀಡಿ ಅವರ ಆಧಾರ್‌ ಕಾರ್ಡ್‌ಗಳನ್ನು ಖಾತೆಗಳೊಂದಿಗೆ ಜೋಡಿಸುತ್ತಿದ್ದಾರೆ. ಕಂದಾಯ ಇಲಾಖೆಗೆ ಜೂ.14ರ ಗಡುವು ನೀಡಲಾಗಿದ್ದು, ಸಾಮಾನ್ಯವಾಗಿ ಕರಾವಳಿಯಲ್ಲಿ ಸರಾಸರಿ ಒಬ್ಬ ಕೃಷಿಕನಿಗೆ 10-15 ಸರ್ವೇ ನಂಬರ್‌ ಇದ್ದು, ಇವೆಲ್ಲವನ್ನೂ ಈಗ ಪತ್ತೆ ಮಾಡಿ ಮತ್ತೆ ಲಿಂಕ್‌ ಮಾಡುವುದು ಸವಾಲಾಗಿದೆ.

ಗೊಂದಲ ಬೇಡ
ಆಧಾರ್‌ ಹಾಗೂ ಪಹಣಿಯಲ್ಲಿ ಹೆಸರು ವ್ಯತ್ಯಾಸ ಇದ್ದರೆ ವೆಬ್‌ಸೈಟ್‌ ಸೀÌಕರಿಸುವುದಿಲ್ಲ. ಹಾಗಂತ ಆರ್‌ಟಿಸಿ ತಿದ್ದುಪಡಿಯಾಗಬೇಕೆಂಬ ಗೊಂದಲ ಬೇಡ. ವಿಎ ಬಳಿ ತೆರಳಿದರೆ ಅವರ ಲಾಗಿನ್‌ ಮೂಲಕ ಲಿಂಕ್‌ ಮಾಡಲು ಸಾಧ್ಯವಿದೆ. ಈ ಬಗ್ಗೆ ಎಲ್ಲ ವಿಎಗಳಿಗೆ ಸೂಚನೆ ನೀಡಲಾಗಿದೆ.
-ರಶ್ಮೀ ಎಸ್‌.ಆರ್‌. ಸಹಾಯಕ ಕಮಿಷನರ್‌, ಕುಂದಾಪುರ

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Kota-Shrinivas

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

puttige-5

Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ

UP-Puttige

Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.