ಓಡಿ ಬಂದು ರಾಜೀನಾಮೆ
Team Udayavani, Jul 12, 2019, 5:14 AM IST
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಗುರುವಾರ ರಾಜೀನಾಮೆ ಪ್ರಹಸನಕ್ಕೆ “ಸ್ಪೀಡ್’ ಸಿಕ್ಕಿದೆ. ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಮುಂಬೈನ ಹೊಟೇಲ್‌ನಿಂದ ಓಡೋಡಿ ಬಂದ ಅತೃಪ್ತ ಶಾಸಕರು ಮತ್ತೂಮ್ಮೆ “ಕ್ರಮಬದ್ಧ’ ರಾಜೀನಾಮೆ ಸಲ್ಲಿಸಿ, ಹಾಗೆಯೇ ಓಡೋಡಿ ವಾಪಸ್ ಮುಂಬೈ ಸೇರಿಕೊಂಡಿದ್ದಾರೆ.
ಗುರುವಾರ ಸಂಜೆ 6 ಗಂಟೆಯೊಳಗೆ 10 ಅತೃಪ್ತ ಶಾಸಕರಿಂದ ಮರಳಿ ರಾಜೀನಾಮೆ ಪಡೆಯುವಂತೆ ಸುಪ್ರೀಂ ಕೋರ್ಟ್, ಸ್ಪೀಕರ್ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರೆಲ್ಲರೂ ಎದ್ದುಬಿದ್ದು ಬೆಂಗಳೂರಿಗೆಬಂದಿದ್ದರು. ಇದಷ್ಟೇ ಅಲ್ಲ, ಸುಪ್ರೀಂ ನಿರ್ದೇಶನದ ಮೇರೆಗೆ ಭಾರೀ ಪೊಲೀಸ್ ಬಂದೋಬಸ್ತ್ನಲ್ಲಿ ಬಂದ ಇವರೆಲ್ಲರೂ,
ಏರ್‌ಪೋರ್ಟ್‌ನಲ್ಲೂ ಓಡೋಡಿ ವಾಹನ ಹತ್ತಿದವರು, ವಿಧಾನಸೌಧದ ಬಳಿಯೂ ಓಡೋಡಿ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು.
5.15ಕ್ಕೆ ಎಚ್‌ಐಎಲ್‌ಗೆ ಆಗಮನ: ಮುಂಬೈನಿಂದ ವಿಶೇಷ ವಿಮಾನದಲ್ಲಿ ಹೊರಟ ಶಾಸಕರು ಗುರುವಾರ ಸಂಜೆ 5.15ರ ಹೊತ್ತಿಗೆ ಬೆಂಗಳೂರಿನ ಎಚ್ ಎಎಲ್ ವಿಮಾನನಿಲ್ದಾಣ ತಲುಪಿದರು.
ಸ್ಪೀಕರ್ ಮುಂದೆ ಹಾಜರಾಗಲು ಸುಪ್ರೀಂನ ತ್ರಿಸದಸ್ಯ ಪೀಠ ನೀಡಿದ್ದ ಗಡುವಿಗೆ ಕೇವಲ 45 ನಿಮಿಷ ಬಾಕಿಯಿದ್ದ ಕಾರಣ ಶಾಸಕರು ಆತಂಕಗೊಂಡಿದ್ದರು.
ಶಾಸಕರು ಆಗಮಿಸುವ ಮೊದಲೇ ಶಾಸಕರಾದ ಎಸ್.ಟಿ.ಸೋಮಶೇಖರ್,ಮುನಿರತ್ನ ಅವರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿದ್ದರು. ವಿಶೇಷ ವಿಮಾನ ಆಗಮಿಸುತ್ತಿದ್ದಂತೆ ಶಾಸಕರು ಧಾವಂತದಿಂದಲೇ ಕೆಳಗಿಳಿದರು. ಆತಂಕದಿಂದ ಓಡುತ್ತಾ ಬಂದ ಬೈರತಿ ಬಸವರಾಜು ಅವರನ್ನು ತಕ್ಷಣವೇ ಬಸ್ ಬಳಿಗೆ ತೆರಳುವಂತೆ ಸೋಮಶೇಖರ್,
ಮುನಿರತ್ನ ಕೈ ಸನ್ನೆ ಸೂಚನೆ ನೀಡಿದ್ದು ಕಂಡುಬಂತು. ಇತರೆ ಶಾಸಕರು ಕೂಡ ಧಾವಂತದಲ್ಲೇ ನಿಲ್ದಾಣದ ಹೊರಗೆ ಬಂದು ವಾಹನಗಳನ್ನು ಏರಿದರು.
ಬಿಗಿ ಭದ್ರತೆ
ಶಾಸಕರನ್ನು ಸುರಕ್ಷಿತವಾಗಿ ಕರೆದೊಯ್ಯಲು ಪೊಲೀಸ್ ಇಲಾಖೆ ಬಿಗಿ ಭದ್ರತೆ ವ್ಯವಸ್ಥೆ ಮಾಡಿಕೊಂಡಿತ್ತು.ಮೊದಲಿಗೆ ಡಿಸಿಪಿ ವಾಹನ. ಅದರ ಹಿಂದೆ ಒಂದು ಪೈಲಟ್, ಅದರ
ಹಿಂದೆ ಮತ್ತೂಂದು ಡಿಸಿಪಿ ವಾಹನ, ಅದನ್ನು ಹಿಂಬಾಲಿಸಿದ ಬೆಂಗಾವಲು ವಾಹನ. ಅದರ ಹಿಂದೆ ಶಾಸಕರು, ಆಪ್ತ ಸಹಾಯಕರಿದ್ದ ಮೂರು ಕಾರು, ಒಂದು ಮಿನಿ ಬಸ್, ಒಂದು ಟೆಂಪೊ ಟ್ರಾವೆಲ್ಲರ್. ಅದನ್ನು ಅನುಸರಿಸಿದ್ದ ಒಂದು ಬೆಂಗಾವಲು ವಾಹನ, ಅದನ್ನು ಹಿಂಬಾಲಿಸಿದ್ದ ಕೆಎಸ್‌ಆರ್‌ಪಿ ತುಕಡಿಯಿದ್ದ ವಾಹನಹಾಗೂ ಕೊನೆಯಲ್ಲಿ ಸಂಚಾರಿ ಪೊಲೀಸ್ ಜೀಪ್ ಸಾಗಿತ್ತು.
ಕಾಂಗ್ರೆಸ್ ವಿಪ್
ಮೈತ್ರಿ ಸರ್ಕಾರ ಅತಂತ್ರ ಸ್ಥಿತಿಯಲ್ಲಿರುವ ಸಂದರ್ಭದಲ್ಲಿಯೇ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವುದರಿಂದ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರಿಗೂ ಜುಲೈ 12 ರಿಂದ 26 ರ ವರೆಗೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ವಿಪ್ ಜಾರಿಗೊಳಿಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಕಲಾಪ ನಡೆಸುವ ಪ್ರತಿ ದಿನವೂ ಕಡ್ಡಾ ಯವಾಗಿ ಹಾಜರಿರಬೇಕು. ಯಾವುದೇ ಸಮಯದಲ್ಲಿ ಹಣಕಾಸು ಮಸೂದೆ ಹಾಗೂ ಪ್ರಮುಖ ಮಸೂದೆ ಗಳು ಮಂಡನೆಯಾಗಿ ಅಂಗೀಕಾರಗೊಳಿಸಬೇಕಾಗುತ್ತದೆ. ಹೀಗಾಗಿ ಜುಲೈ 12 ರಿಂದ 26 ರ ವರೆಗೆ ಆಡಳಿತ ಪಕ್ಷದ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರು ವಂತೆ ವಿಪ್ ಜಾರಿಗೊಳಿಸಿದ್ದಾರೆ. ಒಂದು ವೇಳೆ ಶಾಸಕರು ಅಧಿ ವೇಶನಕ್ಕೆ ಹಾಜರಾಗದಿದ್ದರೆ ಸಂವಿಧಾ ನದ 10 ನೇ ಪರಿಚ್ಛೇದ ದನ್ವಯ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಶಾಸಕ ಸ್ಥಾನದಿಂದ ಅನರ್ಹ ಗೊಳಿಸಲು ಸೂಚಿಸಲಾಗುವುದು ಎಂದು ವಿಪ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಈಗಾಗಲೇ ರಾಜಿನಾಮೆ ನೀಡಿ ರುವ ಶಾಸಕರಿಗೂ ವಿಪ್ ಜಾರಿಗೊಳಿಸಲಾಗಿದ್ದು ಶಾಸಕರ ಭವನದಲ್ಲಿರುವ ಶಾಸಕರ ಕೊಠಡಿಗಳಿಗೆ ವಿಪ್ ಪ್ರತಿಯನ್ನುಅಂಟಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.