ನೆಪ ಹೇಳಿಕೊಂಡು ರಸ್ತೆಗಿಳಿದರೆ ಕೇಸ್: ಎಸ್ಪಿ
ಲಾಕ್‌ಡೌನ್ ಪಾಲನೆಯಲ್ಲಿ ಗ್ರಾಮೀಣ ಭಾಗ ಬೆಸ್ಟ್: ರವಿ ಡಿ.ಚನ್ನಣ್ಣನವರ್
Team Udayavani, Apr 29, 2020, 11:05 AM IST
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಭಾಗದ ಜನರು ಲಾಕ್‌ಡೌನ್ ನಿಯಮ ಪಾಲನೆ ಮಾಡುವ ಜೊತೆ ಸಂಪೂರ್ಣ ಬೆಂಬಲ ನೀಡಿದ ಪರಿಣಾಮ
ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಎಸ್ಪಿ ರವಿ.ಡಿ ಚೆನ್ನಣ್ಣನವರ್ ಹರ್ಷವ್ಯಕ್ತಪಡಿಸಿದರು. ನಗರದ ಟೌನ್ ಠಾಣೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಸಂಬಂಧ ನಿಯಮ 11 ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, ನೆಲಮಂಗಲ ಉಪವಿಭಾಗ ವ್ಯಾಪ್ತಿಯಲ್ಲಿ 1295 ವಾಹನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಲಾಕ್‌ಡೌನ್ ಮುಗಿಯುವವರೆಗೂ ನೆಪ ಹೇಳಿಕೊಂಡು ನಗರದ ಕಡೆ ಬರುವ ವಾಹನ ಚಾಲಕರಿಂದ ವಾಹನ ವಶಕ್ಕೆ ಪಡೆದು ಪರಿಸ್ಥಿತಿಗನು ಗುಣವಾಗಿ ಕೇಸ್
ದಾಖಲಿಸಿಕೊಳ್ಳಲಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶ ಬೆಸ್ಟ್: ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಕಾರ್ಯಪಡೆ ಸಹಕಾರದೊಂದಿಗೆ ಲಾಕ್‌ಡೌನ್ ಯಶಸ್ವಿಯಾಗಿದೆ. ಹಳ್ಳಿಯ ಜನ ಕೋವಿಡ್ ಸೃಷ್ಟಿಸುತ್ತಿರುವ ಪರಿಸ್ಥಿತಿ ತಿಳಿದು ಮನೆಯಲ್ಲಿದ್ದಾರೆ. ಆದರೆ ಕೆಲವು ನಗರ ಪ್ರದೇಶಗಳಲ್ಲಿ ನೆಪ ಹೇಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಗರ ಪ್ರದೇಶಕ್ಕಿಂತ ಗ್ರಾಮೀಣ
ಪ್ರದೇಶಗಳು ಕೊರೊನಾ ನಿಯಂತ್ರಣ ಕ್ರಮಗಳ ಅನುಕರಣೆಯಲ್ಲಿ ಬೆಸ್ಟ್ ಎಂದರು.
ಕರುಣೆ ಗೋಡೆ ವೀಕ್ಷಣೆ: ನಗರದ ಬಸ್ ನಿಲ್ದಾಣದ ಬಳಿ ನಿರ್ಮಾಣ ಮಾಡಲಾಗಿರುವ ಕರುಣೆಯ ಗೋಡೆ ವೀಕ್ಷಣೆ ಮಾಡಿ ಜನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು
ಮನವಿ ಮಾಡಿದರು. ಕರುಣೆ ಗೋಡೆ ನಿರ್ವಹಣೆ ಜವಾಬ್ದಾರಿಯನ್ನು ರಾಜಶೇಖರ್‌ಗೆ ನೀಡಿದರು. ಬಸ್ ನಿಲ್ದಾಣದಿಂದ ಪೊಲೀಸ್ ಠಾಣೆ ಸಮೀಪ ಅಥವಾ ಆವರಣದಲ್ಲಿ ಬದಲಿಸಿದರೆ ಬಳಕೆ ಪಾರದರ್ಶಕವಾಗಿರುತ್ತದೆ, ಅರ್ಹ ವ್ಯಕ್ತಿಗಳಿಗೆ ಸಿಗಲಿದೆ ಎಂದು ಸ್ಥಳೀಯರು ಮನವಿ ಮಾಡಿದರು.
ಸಿಟಿ ರೌಂಡ್ಸ್: ನೆಲಮಂಗಲ ನಗರದ ಮುಖ್ಯರಸ್ತೆ, ಪೇಟೆಬೀದಿ, ಬಸ್ ನಿಲ್ದಾಣ, ತಾಲೂಕು ಕಚೇರಿ ಸೇರಿ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೂ ಜನರ
ಓಡಾಟ, ಅಂಗಡಿ ಮುಚ್ಚಿರುವುದು, ಸಾಮಾಜಿಕ ಅಂತರ ಸೇರಿ ನಗರದ ವಾಸ್ತವತೆ ಬಗ್ಗೆ ರೌಂಡ್ಸ್ ಮಾಡುವ ಮೂಲಕ ಸಾರ್ವಜನಿಕರಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆ
ಸಂದೇಶ ನೀಡಿದ್ದಾರೆ.
ದಂಡ ವಸೂಲಿ ಉದ್ದೇಶವಿಲ್ಲ
ಬೈಕ್‌ಗಳನ್ನು ವಶಕ್ಕೆ ಪಡೆದು ದಂಡ ವಸೂಲಿ ಮಾಡುವುದು ನಮ್ಮ ಮೂಲ ಉದ್ದೇಶವಲ್ಲ, ಸುಖಾಸುಮ್ಮನೆ ಬರಬೇಡಿ ಎಂದು ಮನವಿ ಮಾಡಿದರೂ ಅನವಶ್ಯಕವಾಗಿ ಬರುವವರ ವಾಹನ ವಶಕ್ಕೆ ಪಡೆಯುವುದು ಅನಿವಾರ್ಯ. ದಂಡ ವಿಧಿಸದಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ ಆದ್ದರಿಂದ ಸಹಕರಿಸಬೇಕು, ಪರಿಸ್ಥಿತಿಗನುಗುಣವಾಗಿ ಕೇಸ್ ಕೂಡ ದಾಖಲಿಸಲಾಗುತ್ತದೆ ಎಂದು ಎಸ್ಪಿ ರವಿ.ಡಿ ಚೆನ್ನಣ್ಣನವರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.