ಹಾಸನಾಂಬೆ ದರ್ಶನಕ್ಕೆ ನೂಕು ನುಗ್ಗಲು: ಎಸಿಗೆ ಹೊಡೆದ ಡಿ.ಸಿ.
Team Udayavani, Nov 12, 2023, 12:11 AM IST
ಹಾಸನ: ಹಾಸನಾಂಬೆ ದರ್ಶನದ 9ನೇ ದಿನವಾದ ಶನಿವಾರ ದೇವರ ದರ್ಶನಕ್ಕೆ ಸಹಸ್ರಾರು ಭಕ್ತರು ಆಗಮಿಸಿದ್ದು, ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಹಾಗೂ ಸಿಬಂದಿ ಹರ ಸಾಹಸಪಟ್ಟರು.
ಶುಕ್ರವಾರ ಭಕ್ತರೊಬ್ಬರಿಗೆ ಕರೆಂಟ್ ಶಾಕ್ ಹೊಡೆದು ಸಂಭವಿಸಿದ ಅವಘಡದ ನಡುವೆ ಶನಿವಾರ ಭಕ್ತರ ನಿಯಂತ್ರಿಸಲಾಗದೆ ಅಧಿಕಾರಿಗಳೇ ಜಪಾಪಟಿಗಿಳಿಯುವ ಅವ್ಯವಸ್ಥೆ ಸೃಷ್ಟಿಯಾಯಿತು. ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಮುಂಜಾನೆ ಯಿಂದಲೂ ದೇವಾಲಯದ ಆವರಣದಲ್ಲಿಯೇ ಸುತ್ತಾಡುತ್ತಾ ಶಾಂತಿಯಿಂದ ಸಾಲಿನಲ್ಲಿ ಸಾಗಿ ದೇವಿ ದರ್ಶನ ಪಡೆಯಬೇಕೆಂದು ಮನವಿ ಮಾಡುತ್ತಲೇ ಇದ್ದರು. ಆದರೂ ಭಕ್ತರ ನಿಯಂತ್ರಣ ಸಾಧ್ಯವಾಗದೆ ಪರದಾಡಿದರು.
ಎ.ಸಿ.ಗೆ ಹೊಡೆದ ಡಿಸಿ
ದೇವಾಲಯದ ಪ್ರವೇಶ ದ್ವಾರದ ಬಳಿ ಸಕಲೇಶಪುರ ಕ್ಷೇತ್ರದ ಶಾಸಕರ ಕುಟುಂಬದವರು ಪೂಜಾ ಸಾಮಗ್ರಿಯೊಂದಿಗೆ ದೇವಾಲಯ ಪ್ರವೇಶಿಸುತ್ತಿದ್ದರು. ಅಲ್ಲಿಗೆ ಬಂದ ಜಿಲ್ಲಾಧಿಕಾರಿ, ಇವರನ್ನು ಬಿಟ್ಟವರ್ಯಾರು ಎಂದು ಅಲ್ಲಿದ್ದ ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗ ಶ್ರುತಿ ಅವರು ಶಾಸಕರ ಕಡೆಯವರು ಎಂದು ಹೇಳಲು ಮುಂದಾದಾಗ ಸಿಟ್ಟಾದ ಜಿಲ್ಲಾಧಿಕಾರಿು, ಸುಮ್ಮನಿರ್ರೀ, ಬೆಳಗ್ಗಿನಿಂದ ಭಕ್ತರು ಬರುತ್ತಿಲ್ಲವಾ, ಈಗ ದಿಢೀರನೆ ಬಿಟ್ಟರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು. ಆಗ ಶ್ರುತಿ ಅವರು ಏನೋ ಹೇಳಲು ಪ್ರಯತ್ನಿಸಿ ಕೈ ಚಾಚಿದಾಗ ಅವರ ಕೈಗೇ ಸತ್ಯಭಾಮ ಅವರು ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನಾಂಬ ಜಾತ್ರೋತ್ಸವ ಆರಂಭವಾದ ಬಳಿಕ ಜಿಲ್ಲಾಧಿಕಾರಿ ಸತ್ಯಭಾಮ ಅವರು ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ. ಹಾಸನಾಂಬ ದೇವಾಲಯದ ಕಳಶ ಪುನರ್ ಪ್ರತಿಷ್ಠಾಪನೆಗೆ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಆಹ್ವಾನಿಸದೆ ತಮ್ಮ ಪತಿಯೊಂದಿಗೆ ಸತ್ಯಭಾಮಾ ಅವರೇ ಪೂಜೆ ಸಲ್ಲಿಸಿ ಶಿಷ್ಟಾಚಾರ ಉಲ್ಲಂ ಸಿ ವಿವಾದಕ್ಕೀಡಾಗಿದ್ದರು. ಈಗ ಉಪ ವಿಭಾಗಾಧಿಕಾರಿಗೇ ಬಹಿರಂಗವಾಗಿಯೇ ಹೊಡೆದು ಮತ್ತೂಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ.
ಆದೇಶಕ್ಕೆ ಬೆಲೆ ಇಲ್ಲವೇ ?
ದೇವಿಯ ದರ್ಶನಕ್ಕೆ ಬೆಳಗ್ಗಿನಿಂದ ರಾತ್ರಿವರೆಗೂ ಸಾವಿರಾರು ಭಕ್ತರು ಬರುತ್ತಿರುವುದರಿಂದ ಅತಿ ಗಣ್ಯರನ್ನು ದೇವಾಲಯದ ಗರ್ಭಗುಡಿ ಪ್ರವೇಶಿಸಿ ದೇವಿ ದರ್ಶನ ಮಾಡುವ ಶಿಷ್ಟಾಚಾರದ ದರ್ಶನವನ್ನು ನಿಷೇಧಿಸಿ ಹಾಸನ ಉಪ ವಿಭಾಗಾಧಿಕಾರಿಯೂ ಆದ ದೇವಾಲಯದ ಆಡಳಿತಾಧಿಕಾರಿ ಮಾರುತಿ ಅವರು ಶುಕ್ರವಾರ ರಾತ್ರಿ ಆದೇಶ ಹೊರಡಿಸಿದ್ದರು. ಆದರೆ ದೇವಿಯ ದರ್ಶನಕ್ಕೆ ಬಂದ ಅಬಕಾರಿ ಸಚಿವ ಆರ್. ಬಿ.ತಿಮ್ಮಾಪುರ ಹಾಗೂ ಪಶುಸಂಗೋಪನೆ ಸಚಿವ ವೆಂಕಟೇಶ್ ಅವರನ್ನು ಗರ್ಭಗುಡಿಗೆ ಕರೆದೊಯ್ದು ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ಅಧಿಕಾರಿಗಳು ಹೊರಡಿಸಿದ ಆದೇಶವನ್ನು ಅಧಿಕಾರಿಗಳೇ ಉಲ್ಲಂ ಸಿದ್ದರ ಬಗ್ಗೆ ಭಕ್ತರು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.